AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Assembly Polls; ಸಿದ್ದರಾಮಯ್ಯ ವಿರುದ್ಧ ಅಭ್ಯರ್ಥಿ ಯಾರು ಅನ್ನೋದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ: ಬಸನಗೌಡ ಪಾಟೀಲ ಯತ್ನಾಳ್

Karnataka Assembly Polls; ಸಿದ್ದರಾಮಯ್ಯ ವಿರುದ್ಧ ಅಭ್ಯರ್ಥಿ ಯಾರು ಅನ್ನೋದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ: ಬಸನಗೌಡ ಪಾಟೀಲ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
|

Updated on:Mar 31, 2023 | 5:22 PM

Share

ಸಿ ವೋಟರ್ ಸಮೀಕ್ಷೆಯನ್ನು ಅಲ್ಲಗಳೆದ ಶಾಸಕರು ಇದುವರೆಗೆ ನಡೆದಿರುವ ಯಾವ ಸಮೀಕ್ಷೆಯೂ ನಿಜವಾಗಿಲ್ಲ ಅಂತ ಹೇಳಿ ಅದಕ್ಕೆ ತಮ್ಮದೇ ಆದ ವಿವರಣೆಗಳನ್ನು ನೀಡಿದರು.

ಚಿಕ್ಕೋಡಿ (ಬೆಳಗಾವಿ) : ಕೆಲ ದಿನಗಳ ಹಿಂದೆ ತಮ್ಮ ಪಕ್ಷದ ನಾಯಕರ ವಿರುದ್ಧವೇ ಹರಿಹಾಯತ್ತಿದ್ದ ವಿಯಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರು ಸಿದ್ದರಾಮಯ್ಯ (Siddaramaiah) ವಿರುದ್ಧ ಬಿವೈ ವಿಜಯೇಂದ್ರ (BY Vijayendra) ಸ್ಪರ್ಧಿಸುವ ಬಗ್ಗೆ ಎದ್ದಿರುವ ಊಹಾಪೋಹಗಳಿಗೆ ಎಣ್ಣೆ ಸುರಿಯುವ ಪ್ರಯತ್ನವೇನೂ ಮಾಡಲಿಲ್ಲ. ವಿಜಯೇಂದ್ರ ಬಗ್ಗೆ ಪ್ರಶ್ನೆ ಕೇಳಿದಾಗ ಅವರ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಅಂತ ನೋಡುವ ಕುತೂಹಲ ಪತ್ರಕರ್ತರಲ್ಲಿ ಇದ್ದಿದ್ದು ಸುಳ್ಳಲ್ಲ. ಯಾಕೆಂದರೆ, ಇತ್ತೀಚಿಗೆ ಯತ್ನಾಳ್ ವಿರುದ್ಧ ಅವರು ಗಂಭೀರವಾದ ಅರೋಪ ಮಾಡಿದ್ದರು. ಆದರೆ ಯತ್ನಾಳ್ ಪ್ರಶ್ನೆಯ ಗಾಂಭೀರ್ಯತೆಯನ್ನೇ ಮಸುಕು ಮಾಡಿ, ಪಾರ್ಟಿ ನಿರ್ಣಯ ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಸಿ ವೋಟರ್ ಸಮೀಕ್ಷೆಯನ್ನು ಅಲ್ಲಗಳೆದ ಶಾಸಕರು ಇದುವರೆಗೆ ನಡೆದಿರುವ ಯಾವ ಸಮೀಕ್ಷೆಯೂ ನಿಜವಾಗಿಲ್ಲ ಅಂತ ಹೇಳಿ ಅದಕ್ಕೆ ತಮ್ಮದೇ ಆದ ವಿವರಣೆಗಳನ್ನು ನೀಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 31, 2023 05:22 PM