ಕೋಲಾರದಲ್ಲಿ ಹಳ್ಳಿಕಾರ್ ಹಸುಗಳ ಅದ್ದೂರಿ ಹುಟ್ಟುಹಬ್ಬ ಆಚರಿಸಿದ ರೈತ; ವಿಡಿಯೋ ಇಲ್ಲಿದೆ
ಬೆಕ್ಕು, ನಾಯಿಗಳ ಜನ್ಮ ದಿನಾಚರಣೆ ಮಾಡುವುದನ್ನು ಸಾಮಾಜಿಕ ಜಾಲತಾಣದಲ್ಲಿ ನೀವು ನೋಡಿರುತ್ತೀರಿ. ಆದರೆ ಇತ್ತೀಚಿನ ದಿನಗಳಲ್ಲಿ ದೇವರಂತೆ ಕಾಣುವ ಹಸುಗಳ ಕರುಗಳನ್ನು ತೊಟ್ಟಿಲಿಗೆ ಹಾಕುವುದು, ನಾಮಕರಣ ಮಾಡುವ ವಿಡಿಯೋ ಕೂಡ ವೈರಲ್ ಆಗುತ್ತಿವೆ. ಹಸುಗಳ ಹುಟ್ಟುಹಬ್ಬ ಆಚರಿಸುವುದನ್ನೂ ಕಾಣುತ್ತೇವೆ. ಇದೀಗ ಕೋಲಾರದ ರೈತರೊಬ್ಬರು ಎರಡು ಹಳ್ಳಿಕಾರ್ ಹಸುಗಳ ಅದ್ದೂರಿ ಹುಟ್ಟುಹಬ್ಬ ಆಚರಿಸಿದ್ದಾರೆ.
ಕೋಲಾರ, ಡಿ.17: ಪ್ರಾಣಿ ಪ್ರಿಯರು ತಾವು ಸಾಕಿದ ಮುದ್ದಿನ ಬೆಕ್ಕು, ನಾಯಿಗಳ ಜನ್ಮದಿನವನ್ನು ಆಚರಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಕಾಣಸಿಗುತ್ತವೆ. ಇತ್ತೀಚಿನ ದಿನಗಳಲ್ಲಿ, ದೇವರಂತೆ ಕಾಣುವ ಹಸುಗಳ ಕರುಗಳನ್ನು ತೊಟ್ಟಿಲಿಗೆ ಹಾಕುವುದು, ನಾಮಕರಣ ಮಾಡುವ ವಿಡಿಯೋ ಕೂಡ ವೈರಲ್ ಆಗುತ್ತಿವೆ. ಮಕ್ಕಳಿಗೆ ನಾಮಕರಣ ಮಾಡುವಂತೆ ಇತ್ತೀಚೆಗೆ ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದ ನವನೀತ ಗೋ ಶಾಲೆಯಲ್ಲಿ ಕರುವಿಗೆ ಶಾಸ್ತ್ರೋಕ್ತವಾಗಿ ತೊಟ್ಟಿಲು ಶಾಸ್ತ್ರ ಮಾಡಿ ನಾಮಕರಣ ಮಾಡಲಾಗಿತ್ತು. ಇದೀಗ, ಕೋಲಾರ (Kolar) ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಬೂದಿಕೋಟೆ ಗ್ರಾಮದ ರೈತ ಮಂಜುನಾಥ್ ಅವರು ಹಳ್ಳಿಕಾರ್ (Hallikar) ತಳಿಯ ಹಸುಗಳ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ಹಸುಗಳನ್ನು ಹೂವಿನಿಂದ ಶೃಂಗಾರ ಮಾಡಿ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಣೆ ಮಾಡಿ ಸಂಭ್ರಮಿಸಿದ್ದಾರೆ. ಈ ವೇಳೆ ಹತ್ತಾರು ಜನರು ಸೇರಿದ್ದರು.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್

