ಡಾ. ವಿಷ್ಣುವರ್ಧನ್​ ಪುಣ್ಯಭೂಮಿ ಉಳಿವಿಗಾಗಿ ಫ್ರೀಡಂ ಪಾರ್ಕ್​ನಲ್ಲಿ ಅಭಿಮಾನಿಗಳ ಪ್ರತಿಭಟನೆ

ಡಾ. ವಿಷ್ಣುವರ್ಧನ್​ ಪುಣ್ಯಭೂಮಿ ಉಳಿವಿಗಾಗಿ ಫ್ರೀಡಂ ಪಾರ್ಕ್​ನಲ್ಲಿ ಅಭಿಮಾನಿಗಳ ಪ್ರತಿಭಟನೆ

ಮದನ್​ ಕುಮಾರ್​
|

Updated on: Dec 17, 2023 | 12:30 PM

ವಿಷ್ಣುವರ್ಧನ್​ ಅವರ ಪುಣ್ಯಭೂಮಿಯನ್ನು ಉಳಿಸಿಕೊಳ್ಳುವ ಸಲುವಾಗಿ ಇಂದು (ಡಿಸೆಂಬರ್​ 17) ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಅಭಿಮಾನಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಹೋರಾಟಕ್ಕೆ ಅನೇಕ ಸಂಘ, ಸಂಸ್ಥೆಗಳು ಬೆಂಬಲ ನೀಡಿವೆ. ಕಿಚ್ಚ ಸುದೀಪ್​, ಡಾಲಿ ಧನಂಜಯ್​ ಮುಂತಾದ ನಟರು ಕೂಡ ಬೆಂಬಲ ಸೂಚಿಸಿದ್ದಾರೆ.

ಖ್ಯಾತ ನಟ ‘ಸಾಹಸ ಸಿಂಹ’ ಡಾ. ವಿಷ್ಣುವರ್ಧನ್​ (Vishnuvardhan) ಅವರ ಅಂತ್ಯಕ್ರಿಯೆ ನಡೆದ ಜಾಗ ಒಂದು ಪವಿತ್ರ ಸ್ಥಳ ಎಂಬುದು ಅಭಿಮಾನಿಗಳ ನಂಬಿಕೆ. ಆ ಪುಣ್ಯಭೂಮಿಗೆ ಭೇಟಿ ನೀಡಲು ಈಗ ಅಭಿಮಾನಿಗಳಿಗೆ ಅವಕಾಶ ಸಿಗುತ್ತಿಲ್ಲ. ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಆಗಿದೆ. ಆದರೆ ಅಭಿಮಾನ್​ ಸ್ಟುಡಿಯೋದಲ್ಲಿ ಇರುವ ಪುಣ್ಯಭೂಮಿ ಜೊತೆ ಫ್ಯಾನ್ಸ್​ (Vishnuvardhan Fans) ಭಾವನಾತ್ಮಕ ನಂಟು ಹೊಂದಿದ್ದಾರೆ. ಆ ಪುಣ್ಯಭೂಮಿಯನ್ನು ಉಳಿಸಿಕೊಳ್ಳುವ ಸಲುವಾಗಿ ಇಂದು (ಡಿಸೆಂಬರ್​ 17) ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ವಿಷ್ಣುವರ್ಧನ್​ ಅಭಿಮಾನಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ವಿಷ್ಣು ಅಭಿಮಾನಿಗಳ ಹೋರಾಟಕ್ಕೆ ಅನೇಕ ಸಂಘ, ಸಂಸ್ಥೆಗಳು ಬೆಂಬಲ ನೀಡಿವೆ. ಕಿಚ್ಚ ಸುದೀಪ್​, ಡಾಲಿ ಧನಂಜಯ್​ ಮುಂತಾದ ನಟರು ಕೂಡ ಬೆಂಬಲ ಸೂಚಿಸಿದ್ದಾರೆ. ಡಾ. ವಿಷ್ಣುವರ್ಧನ್​ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಬೇಕು ಎಂದು ಒತ್ತಾಯ ಕೂಡ ಮಾಡಲಾಗುತ್ತಿದೆ. ಕಿಚ್ಚ ಸುದೀಪ್​ (Kichcha Sudeep) ಅವರು ಇಂದು ಕೆಸಿಸಿ ಕ್ರಿಕೆಟ್​ ಟೂರ್ನಿಗೆ ಆಹ್ವಾನ ನೀಡಲು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ವಿಷ್ಣು ಅಭಿಮಾನಿಗಳ ಹೋರಾಟದ ಬಗ್ಗೆಯೂ ಚರ್ಚೆ ಮಾಡುವ ನಿರೀಕ್ಷೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.