ವಿಷ್ಣುವರ್ಧನ್​ ಒಡನಾಡಿ, ನಿರ್ದೇಶಕ ವಿಆರ್​ ಭಾಸ್ಕರ್​ ಅನಾರೋಗ್ಯದಿಂದ ನಿಧನ

ವಿ.ಆರ್​. ಭಾಸ್ಕರ್ ಅವರು ಮೂಲತಃ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನವರು. ಚಿಕ್ಕ ವಯಸ್ಸಿನಿಂದಲೂ ಸಿನಿಮಾ ಬಗ್ಗೆ ಅವರು ಆಸಕ್ತಿ ಹೊಂದಿದ್ದರು. ವಿಷ್ಣುವರ್ಧನ್​ ನಟನೆಯ ಅನೇಕ ಸಿನಿಮಾಗಳಿಗೆ ಭಾಸ್ಕರ್​ ಕೆಲಸ ಮಾಡಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು (ಸೆಪ್ಟೆಂಬರ್​ 14) ಮುಂಜಾನೆ ನಿಧನರಾದರು. ಮೈಸೂರಿನಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

ವಿಷ್ಣುವರ್ಧನ್​ ಒಡನಾಡಿ, ನಿರ್ದೇಶಕ ವಿಆರ್​ ಭಾಸ್ಕರ್​ ಅನಾರೋಗ್ಯದಿಂದ ನಿಧನ
ವಿ.ಆರ್​. ಭಾಸ್ಕರ್​
Follow us
ಮದನ್​ ಕುಮಾರ್​
|

Updated on:Sep 14, 2023 | 1:06 PM

ಕನ್ನಡ ಚಿತ್ರರಂಗದಲ್ಲಿ (Sandalwood) ಗುರುತಿಸಿಕೊಂಡಿದ್ದ ನಿರ್ದೇಶಕ, ಸಂಭಾಷಣಕಾರ, ಗೀತ ಸಾಹಿತಿ ವಿ.ಆರ್​. ಭಾಸ್ಕರ್​ (V R Bhaskar) ಅವರು ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣದಿಂದ ಅವರು ಮೈಸೂರಿನಲ್ಲಿ ಗುರುವಾರ (ಸೆ.14) ವಿಧಿವಶರಾಗಿದ್ದಾರೆ. ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಹೊಂದಿದ್ದ ಭಾಸ್ಕರ್​ ಅವರು ಡಾ. ವಿಷ್ಣುವರ್ಧನ್​ (Dr Vishnuvardhan) ಅವರ ಜೊತೆ ಒಡನಾಟ ಹೊಂದಿದ್ದರು. ನಟನಾಗಿಯೂ ಅವರು ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ವಿ.ಆರ್​. ಭಾಸ್ಕರ್​ ಅವರ ಜೀವನದಲ್ಲಿ ಕಷ್ಟ ಆವರಿಸಿತ್ತು. ಕೆಲವೇ ದಿನಗಳ ಹಿಂದೆ ಪತ್ನಿ ಮತ್ತು ಮಗನನ್ನು ಕೂಡ ಅವರು ಅನಾರೋಗ್ಯದಿಂದ ಕಳೆದುಕೊಂಡಿದ್ದರು. ಮೈಸೂರಿನಲ್ಲೇ ವಿ.ಆರ್​. ಭಾಸ್ಕರ್​ ಅಂತ್ಯಕ್ರಿಯೆ ನಡೆಯಲಿದೆ.

ವಿ.ಆರ್​. ಭಾಸ್ಕರ್ ಅವರು ಮೂಲತಃ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನವರು. ಚಿಕ್ಕ ವಯಸ್ಸಿನಿಂದಲೂ ಸಿನಿಮಾ ಬಗ್ಗೆ ಅವರು ಆಸಕ್ತಿ ಹೊಂದಿದ್ದರು. ಮೈಸೂರಿಗೆ ಬಂದ ಬಳಿಕ ಸಿನಿಮಾದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ನಿರ್ಧರಿಸಿದರು. ಆದರೆ ಆರಂಭದ ದಿನಗಳಲ್ಲಿ ಕುಟುಂಬದಿಂದ ಭಾಸ್ಕರ್​ ಅವರಿಗೆ ಉತ್ತೇಜನ ಸಿಗಲಿಲ್ಲ. ನಂತರ ಹಠ ಹಿಡಿದು ಫಿಲ್ಮ್​ ಇನ್ಸ್​ಟಿಟ್ಯೂಟ್​ಗೆ ಸೇರಿಕೊಂಡು ಸಿನಿಮಾದ ಪಾಠಗಳನ್ನು ಕಲಿತರು.

ಇದನ್ನೂ ಓದಿ: ಭಾರತಿ ವಿಷ್ಣುವರ್ಧನ್​ ಜೀವನದ ಕುರಿತ ಸಾಕ್ಷ್ಯಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಅನಿರುದ್ಧ್​ ಜತ್ಕರ್​

‘ರುದ್ರನಾಗ’ ಸಿನಿಮಾಗೆ ಸಹ ನಿರ್ದೇಶಕರಾಗಿ ವಿ.ಆರ್​. ಭಾಸ್ಕರ್​ ಅವರು ಕೆಲಸ ಮಾಡಿದ್ದರು. ಅವರ ಕೆಲಸವನ್ನು ಮೆಚ್ಚಿದ ವಿಷ್ಣುವರ್ಧನ್​ ಅವರು ಅನೇಕ ಅವಕಾಶಗಳನ್ನು ನೀಡಿದರು. ವಿಷ್ಣುವರ್ಧನ್​ ಅವರು ಸ್ವಂತ ಬ್ಯಾನರ್​ನಲ್ಲಿ ‘ಆರಾಧನೆ’ ಸಿನಿಮಾ ಮಾಡಿದ್ದರು. ಆ ಚಿತ್ರದಲ್ಲಿಯೂ ಅವರಿಗೆ ಅವಕಾಶ ಸಿಕ್ಕಿತು. ‘ರುದ್ರನಾಗ’ದಿಂದ ‘ಆಪ್ತರಕ್ಷಕ’ ತನಕ ವಿಷ್ಣುವರ್ಧನ್​ ನಟನೆಯ ಬಹುತೇಕ ಸಿನಿಮಾಗಳಲ್ಲಿ ವಿ.ಆರ್​. ಭಾಸ್ಕರ್​ ಕೆಲಸ ಮಾಡಿದ್ದರು.

ಇದನ್ನೂ ಓದಿ: ಸ್ಪಂದನಾ ಸಾವಿನ ಬೆನ್ನಲ್ಲೇ ಮತ್ತೊಂದು ಶಾಕ್; ಮಂಡ್ಯ ಮೂಲದ ಕಿರುತೆರೆ ನಟ ಹೃದಯಾಘಾತದಿಂದ ನಿಧನ

ವಿ.ಆರ್​. ಭಾಸ್ಕರ್ ಅವರಿಗೆ 60 ವರ್ಷಕ್ಕೂ ಹೆಚ್ಚು ವಯಸ್ಸಾಗಿತ್ತು. ಕಿಡ್ನಿ ವೈಫಲ್ಯಕ್ಕೆ ಒಳಗಾಗಿದ್ದ ಅವರಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಹಾಗಿದ್ದರೂ ಕೂಡ ಚಿಕಿತ್ಸೆ ಫಲಕಾರಿ ಆಗದೇ ಅವರು ಕೊನೆಯುಸಿರು ಎಳೆದಿದ್ದಾರೆ. ಅವರ ತಾಯಿಯು ಚಾಮುಂಡಿ ಬೆಟ್ಟದ ಬಳಿ ಇರುವ ಹರಿಶ್ಚಂದ್ರ ಘಾಟ್​ನಲ್ಲಿ ಅಂತ್ಯಕ್ರಿಯೆ ನಡೆಸಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:56 pm, Thu, 14 September 23

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ