‘ಕೌಸಲ್ಯ ಸುಪ್ರಜಾ ರಾಮ’ ಚಿತ್ರಕ್ಕೆ 50 ದಿನದ ಸಂಭ್ರಮ; ಪ್ರೇಕ್ಷಕರಿಗೆ ಸಿಹಿ ಹಂಚಲಿರುವ ಮಿಲನಾ-ಕೃಷ್ಣ
‘ಕೌಸಲ್ಯ ಸುಪ್ರಜಾ ರಾಮ’ ಚಿತ್ರ ತೆರೆಕಂಡ ಬಳಿಕ ಬೇರೆ ಬೇರೆ ಸಿನಿಮಾಗಳು ಬಿಡುಗಡೆ ಆಗಿ ಅಬ್ಬರಿಸಿದವು. ಅವುಗಳಿಗೆಲ್ಲ ಪೈಪೋಟಿ ನೀಡುವ ಮೂಲಕ ಈ ಸಿನಿಮಾ 50ನೇ ದಿನದ ಸಂಭ್ರಮಕ್ಕೆ ಸಾಕ್ಷಿ ಆಗುತ್ತಿದೆ. ಭಾರತ ವರ್ಸಸ್ ಪಾಕಿಸ್ತಾನ ಕ್ರಿಕೆಟ್ ಪಂದ್ಯ ಇದ್ದಾಗಲೂ ಕೂಡ ಪ್ರೇಕ್ಷಕರು ಈ ಸಿನಿಮಾವನ್ನು ವೀಕ್ಷಿಸಿದ್ದಾರೆ.
2023ರ ದ್ವಿತೀಯಾರ್ಧದಲ್ಲಿ ಅನೇಕ ಸಿನಿಮಾಗಳು ಬಿಡುಗಡೆ ಆಗಿವೆ. ಆ ಪೈಕಿ 50 ಡೇಸ್ ಸಂಭ್ರಮವನ್ನು ಆಚರಿಸಿಕೊಂಡಿದ್ದು ಕೆಲವೇ ಚಿತ್ರಗಳು ಮಾತ್ರ. ಈಗ ಕನ್ನಡದ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ (Kousalya Supraja Rama) ಕೂಡ ಅರ್ಧ ಶತಕ ಬಾರಿಸುತ್ತಿದೆ. ಈ ಖುಷಿಯನ್ನು ಪ್ರೇಕ್ಷಕರ ಜೊತೆ ಹಂಚಿಕೊಳ್ಳಲು ಚಿತ್ರತಂಡ ನಿರ್ಧರಿಸಿದೆ. ಕೌಟುಂಬಿಕ ಕಥಾಹಂದರ ಇರುವ ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ (Darling Krishna), ಮಿಲನಾ ನಾಗರಾಜ್, ಬೃಂದಾ ಆಚಾರ್ಯ, ನಾಗಭೂಷಣ್ ಮುಂತಾದವರು ನಟಿಸಿದ್ದಾರೆ. ನಿರ್ದೇಶಕ ಶಶಾಂಕ್ (Director Shashank) ಅವರು ಹೇಳಿದ ಕಥೆ ಎಲ್ಲರಿಗೂ ಇಷ್ಟ ಆಗಿದೆ. ಈಗ 50ನೇ ದಿನದ ಸಂಭ್ರಮಕ್ಕಾಗಿ ಚಿತ್ರತಂಡ ಒಂದು ಪ್ಲ್ಯಾನ್ ಮಾಡಿಕೊಂಡಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..
ಬೆಂಗಳೂರಿನ ‘ವೀರೇಶ್’ ಚಿತ್ರಮಂದಿರದಲ್ಲಿ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಸೆಪ್ಟೆಂಬರ್ 14ರಂದು ಸಂಜೆ 4.15ಕ್ಕೆ ಪ್ರೇಕ್ಷಕರೊಂದಿಗೆ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ, ಶಶಾಂಕ್ ಮುಂತಾದವರು ಸಿನಿಮಾ ನೋಡಲಿದ್ದಾರೆ. ಟಿಕೆಟ್ ಕೌಂಟರ್ನಲ್ಲಿ ಮಿಲನಾ ಮತ್ತು ಕೃಷ್ಣ ಅವರು ಟಿಕೆಟ್ ನೀಡಲಿದ್ದಾರೆ. ಅದರೊಂದಿಗೆ ಸಿಹಿ ಕೂಡ ಹಂಚಲಿದ್ದಾರೆ. ಈ ಸಂಭ್ರಮದಲ್ಲಿ ಭಾಗಿ ಆಗುವಂತೆ ಪ್ರೇಕ್ಷಕರಿಗೆ ಚಿತ್ರತಂಡದವರು ಸೋಶಿಯಲ್ ಮೀಡಿಯಾ ಮೂಲಕ ಆಹ್ವಾನ ನೀಡಿದ್ದಾರೆ.
ಇದನ್ನೂ ಓದಿ: Kausalya Supraja Rama Review: ನೀವು ನಿಜವಾದ ಗಂಡಸು ಹೌದಾ? ಕೌಸಲ್ಯ ಸುಪ್ರಜಾ ರಾಮ ಚಿತ್ರ ನೋಡಿದ್ರೆ ಬಯಲಾಗುತ್ತೆ ಸತ್ಯ
‘ಕೌಸಲ್ಯ ಸುಪ್ರಜಾ ರಾಮ’ ಚಿತ್ರ ತೆರೆಕಂಡ ಬಳಿಕ ಬೇರೆ ಬೇರೆ ಸಿನಿಮಾಗಳು ಬಿಡುಗಡೆ ಆದವು. ಪರಭಾಷೆಯಲ್ಲಿ ಹಲವು ಸಿನಿಮಾಗಳು ಅಬ್ಬರಿಸಿದವು. ಅವುಗಳಿಗೆಲ್ಲ ಸರಿಯಾದ ಪೈಪೋಟಿ ನೀಡುವ ಮೂಲಕ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ 50ನೇ ದಿನದ ಸಂಭ್ರಮಕ್ಕೆ ಸಾಕ್ಷಿ ಆಗುತ್ತಿದೆ. ಭಾರತ ವರ್ಸಸ್ ಪಾಕಿಸ್ತಾನ್ ಕ್ರಿಕೆಟ್ ಪಂದ್ಯ ಇದ್ದಾಗಲೂ ಕೂಡ ಪ್ರೇಕ್ಷಕರು ಈ ಸಿನಿಮಾವನ್ನು ವೀಕ್ಷಿಸಿದ್ದಾರೆ. ಒಳ್ಳೆಯ ಕಂಟೆಂಟ್ ಇದ್ದರೆ ಪ್ರೇಕ್ಷಕರು ಖಂಡಿತವಾಗಿಯೂ ಸಿನಿಮಾವನ್ನು ಗೆಲ್ಲಿಸುತ್ತಾರೆ ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ.
ಇದನ್ನೂ ಓದಿ: ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರಕ್ಕೆ ಟಿಎನ್ ಸೀತಾರಾಮ್ ಮೆಚ್ಚುಗೆ; ಸಾಹಿತಿಗಳಿಗೆ ಇಷ್ಟವಾಯ್ತು ಶಶಾಂಕ್ ಸಿನಿಮಾ
ಅಚ್ಯುತ್ ಕುಮಾರ್, ರಂಗಾಯಣ ರಘು, ಸುಧಾ ಬೆಳವಾಡಿ ಮುಂತಾದವರು ಕೂಡ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರದಲ್ಲಿ ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ ಹಾಡುಗಳು ಸೂಪರ್ ಹಿಟ್ ಆಗಿವೆ. ‘ಶಿವಾನಿ..’, ‘ಪ್ರೀತಿಸುವೆ..’, ‘90 ಹಾಕು..’ ಗೀತೆಗಳು ವೈರಲ್ ಆಗಿವೆ. ಸಿನಿಮಾದ ಗೆಲುವಿನಲ್ಲಿ ಈ ಹಾಡುಗಳ ಕೊಡುಗೆ ಕೂಡ ಇದೆ.
#ಕೌಸಲ್ಯಾಸುಪ್ರಜಾರಾಮ ಚಿತ್ರದ ಭರ್ಜರಿ ಯಶಸ್ಸಿಗೆ ಕಾರಣಕರ್ತರಾದ ಪ್ರತಿಯೊಬ್ಬರಿಗೂ ನಮ್ಮ ಹೃತ್ಪೂರ್ವಕ ನಮನಗಳು🙏 #KousalyaSuprajaRama Celebrating Grand 50 days#Veereshcinemas#Bangalore pic.twitter.com/MhCG3eq96u
— Shashank (@Shashank_dir) September 13, 2023
ಪುರುಷ ಪ್ರಧಾನ ವ್ಯವಸ್ಥೆಯನ್ನು ಪ್ರಶ್ನಿಸುವಂತಹ ಕಥಾಹಂದರ ಈ ಸಿನಿಮಾದಲ್ಲಿದೆ. ತಾಯಿ ಸೆಂಟಿಮೆಂಟ್ ಚೆನ್ನಾಗಿದೆ. ಇದು ಪ್ರೇಕ್ಷಕರಿಗೆ ಇಷ್ಟ ಆಗಿದೆ. ಈ ಸಿನಿಮಾದ ಮೂಲಕ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ಜೋಡಿಗೆ ಮತ್ತೊಂದು ಗೆಲುವು ಸಿಕ್ಕಂತೆ ಆಗಿದೆ. ವಿಮರ್ಶಕರಿಂದ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿದೆ. ಬೃಂದಾ ಆಚಾರ್ಯ ಅವರ ಜನಪ್ರಿಯತೆ ಹೆಚ್ಚಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.