‘ಜಂಭದ ಹುಡುಗಿ’ ಪ್ರಿಯಾ ಹಾಸನ್ ಬಿಡುಗಡೆ ಮಾಡಿದ ‘ರಣಹದ್ದು’ ಫಸ್ಟ್ ಲುಕ್ ಪೋಸ್ಟರ್
ಯಶ್ ನಟಿಸಿದ ಮೊದಲ ಸಿನಿಮಾ ‘ಜಂಭದ ಹುಡುಗಿ’ 2007ರಲ್ಲಿ ತೆರೆಕಂಡಿತ್ತು. ಆ ಸಿನಿಮಾದ ನಾಯಕಿ ಪ್ರಿಯಾ ಹಾಸನ್ ಅವರು ಈಗ ಹೊಸಬರ ‘ರಣಹದ್ದು’ ಸಿನಿಮಾ ತಂಡದ ಬೆನ್ನು ತಟ್ಟಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ಅನಾವರಣ ಮಾಡಿಕೊಡುವ ಮೂಲಕ ಅವರು ಈ ಟೀಮ್ಗೆ ಸಾಥ್ ನೀಡಿದ್ದಾರೆ. ನಿರ್ಮಾಪಕ ಟೇಶಿ ವೆಂಕಟೇಶ್ ಕೂಡ ಪೋಸ್ಟರ್ ರಿಲೀಸ್ ಮಾಡಿದ್ದಾರೆ.
ಪರಭಾಷೆ ಮಂದಿ ಕೂಡ ಸ್ಯಾಂಡಲ್ವುಡ್ನಲ್ಲಿ (Sandalwood) ಸಿನಿಮಾ ಮಾಡಲು ಉತ್ಸಾಹ ತೋರಿಸುತ್ತಾರೆ. ಅಂಥ ಸಿನಿಮಾ ತಂಡಗಳಿಗೆ ಇಲ್ಲಿ ಸ್ವಾಗತ ಸಿಗುತ್ತದೆ. ಈಗ ತಮಿಳಿನ ನಿರ್ದೇಶಕ ಮಾಣಿಕ್ಯ ಜೈ ಅವರು ಕನ್ನಡದಲ್ಲಿ ಒಂದು ಸಿನಿಮಾ ಮಾಡಿದ್ದಾರೆ. ಈ ಚಿತ್ರಕ್ಕೆ ‘ರಣಹದ್ದು’ (Rana Haddu) ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಇದು ಸಂಪೂರ್ಣ ಹೊಸಬರೇ ಸೇರಿಕೊಂಡು ಮಾಡಿರುವ ಸಿನಿಮಾ. ‘ರಣಹದ್ದು’ ಚಿತ್ರಕ್ಕೆ ಚಂದನವನದ ಅನುಭವಿಗಳು ಬೆಂಬಲ ನೀಡಿದ್ದಾರೆ. ನಟಿ ಪ್ರಿಯಾ ಹಾಸನ್ (Priya Hassan) ಮತ್ತು ನಿರ್ಮಾಪಕ ಟೇಶಿ ವೆಂಕಟೇಶ್ ಅವರು ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಆ ಮೂಲಕ ಚಿತ್ರತಂಡದ ಬೆನ್ನು ತಟ್ಟಿದ್ದಾರೆ.
ಮಾಣಿಕ್ಯ ಜೈ ಅವರು ‘ರಣಹದ್ದು’ ಸಿನಿಮಾಗೆ ನಿರ್ದೇಶನ ಮಾಡುವುದರ ಜೊತೆಗೆ ನಟನೆ ಕೂಡ ಮಾಡಿದ್ದಾರೆ. ಅವರ ಜೊತೆ ಹೊಸ ಕಲಾವಿದರು ಬಣ್ಣ ಹಚ್ಚಿದ್ದಾರೆ. ಮಾಣಿಕ್ಯ ಜೈ ಅವರು ತಮಿಳಿನಲ್ಲಿ ಈಗಾಗಲೇ ಎರಡು ಚಿತ್ರಗಳಿಗೆ ಆ್ಯಕ್ಷನ್-ಕಟ್ ಹೇಳುವ ಮೂಲಕ ಅನುಭವ ಪಡೆದಿದ್ದಾರೆ. ಕನ್ನಡದಲ್ಲಿ ಅವರಿಗೆ ‘ರಣಹದ್ದು’ ಮೊದಲ ಸಿನಿಮಾ. ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಇದನ್ನೂ ಓದಿ: ಶಿಕ್ಷಣ ವ್ಯವಸ್ಥೆಯ ಹುಳುಕುಗಳ ಬಗ್ಗೆ ಮಾತಾಡೋ ಬನ್-ಟೀ: ಟ್ರೈಲರ್ ಬಿಡುಗಡೆ
‘ರಾಕಿಂಗ್ ಸ್ಟಾರ್’ ಯಶ್ ನಟಿಸಿದ ಮೊದಲ ಸಿನಿಮಾ ‘ಜಂಭದ ಹುಡುಗಿ’ 2007ರಲ್ಲಿ ತೆರೆಕಂಡಿತ್ತು. ಆ ಸಿನಿಮಾದ ನಾಯಕಿ ಪ್ರಿಯಾ ಹಾಸನ್ ಅವರು ಈಗ ಹೊಸಬರ ‘ರಣಹದ್ದು’ ಸಿನಿಮಾ ತಂಡದ ಬೆನ್ನು ತಟ್ಟಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ಅನಾವರಣ ಮಾಡಿಕೊಡುವ ಮೂಲಕ ಅವರು ಈ ಟೀಮ್ಗೆ ಸಾಥ್ ನೀಡಿದ್ದಾರೆ. ಅದೇ ರೀತಿ ನಿರ್ಮಾಪಕ ಟೇಶಿ ವೆಂಕಟೇಶ್ ಕೂಡ ಪೋಸ್ಟರ್ ರಿಲೀಸ್ ಮಾಡಿಕೊಟ್ಟಿದ್ದಾರೆ. ಇಬ್ಬರೂ ಈ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಇದನ್ನೂ ಓದಿ: ಹಿಂದಿ ಪ್ರೇಕ್ಷಕರ ಮನಗೆದ್ದ ನಿಖಿಲ್ ಕುಮಾರ್; ‘ರೈಡರ್’ ಚಿತ್ರಕ್ಕೆ 100 ಮಿಲಿಯನ್ ವೀಕ್ಷಣೆ
ಮಾಣಿಕ್ಯ ಜೈ ಅವರ ಜೊತೆಗೆ ‘ರಣಹದ್ದು’ ಚಿತ್ರದ ಮುಖ್ಯ ಪಾತ್ರಗಳಲ್ಲಿ ರಂಜಿತ್, ಯತೀಶ್, ಸೌಮ್ಯ ಅಭಿನಯಿಸಿದ್ದಾರೆ. ಈ ಸಿನಿಮಾದ ಶೂಟಿಂಗ್ ಕೊನೇ ಹಂತದಲ್ಲಿದೆ. ಶೀಘ್ರದಲ್ಲೇ ಚಿತ್ರೀಕರಣ ಮುಗಿಸಲಾಗುತ್ತದೆ. ನವೆಂಬರ್ನಲ್ಲಿ ರಿಲೀಸ್ ಮಾಡಬೇಕು ಎಂದು ಚಿತ್ರತಂಡ ಗುರಿ ಇಟ್ಟುಕೊಂಡಿದೆ. ಸರಸ್ವತಿ ಮತ್ತು ಜೈ ಅವರು ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ತಾಜ್ ಸಂಗೀತ ನಿರ್ದೇಶನ, ಜೀವನ್ ಛಾಯಾಗ್ರಹಣ ಮಾಡಿದ್ದಾರೆ.
ಈ ಸಿನಿಮಾದ ಕಥೆ ಏನು?
ಕುತೂಹಲ ಮೂಡಿಸುವ ರೀತಿಯಲ್ಲಿ ‘ರಣಹದ್ದು’ ಸಿನಿಮಾದ ಪೋಸ್ಟರ್ ವಿನ್ಯಾಸ ಮಾಡಲಾಗಿದೆ. ಚಿತ್ರತಂಡ ಹೇಳಿಕೊಂಡಿರುವಂತೆ ಕೆಲವು ನೈಜ ಘಟನೆಗಳನ್ನು ಆಧರಿಸಿ ಈ ಚಿತ್ರವನ್ನು ಮಾಡಲಾಗಿದೆ. ಮೊಬೈಲ್ ಫೋನ್ ಮೂಲಕ ನಡೆಯುವ ಮೋಸ, ವಂಚನೆ ಕುರಿತು ಈ ಸಿನಿಮಾದಲ್ಲಿ ತೋರಿಸಲಾಗುವುದು. ಆ್ಯಕ್ಷನ್ ಮತ್ತು ಥ್ರಿಲ್ಲರ್ ಮಾದರಿಯಲ್ಲಿ ಈ ಚಿತ್ರ ಮೂಡಿಬರುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:14 pm, Wed, 13 September 23