AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದಿ ಪ್ರೇಕ್ಷಕರ ಮನಗೆದ್ದ ನಿಖಿಲ್​ ಕುಮಾರ್​; ‘ರೈಡರ್’ ಚಿತ್ರಕ್ಕೆ 100 ಮಿಲಿಯನ್​ ವೀಕ್ಷಣೆ

ಆರಂಭದಲ್ಲಿ ‘ರೈಡರ್’ ಚಿತ್ರ ಕೇವಲ ಕನ್ನಡದಲ್ಲಿ ಬಿಡುಗಡೆ ಆಗಿತ್ತು. ಆನಂತರ ಹಿಂದಿಗೆ ಡಬ್ ಆಯಿತು. ಮಾಸ್​ ಸಿನಿಮಾ ಇಷ್ಟಪಡುವ ಹಿಂದಿ ಪ್ರೇಕ್ಷಕರು ನಿಖಿಲ್ ಕುಮಾರ್​ ಅವರ ಈ ಸಿನಿಮಾವನ್ನು ಯೂಟ್ಯೂಬ್​ನಲ್ಲಿ ನೋಡಿ ಎಂಜಾಯ್​ ಮಾಡಿದ್ದಾರೆ. ಅವರ ಮುಂಬರುವ ಸಿನಿಮಾ ಮೇಲೆ ಇದರಿಂದ ನಿರೀಕ್ಷೆ ಹೆಚ್ಚಾಗಿದೆ.

ಹಿಂದಿ ಪ್ರೇಕ್ಷಕರ ಮನಗೆದ್ದ ನಿಖಿಲ್​ ಕುಮಾರ್​; ‘ರೈಡರ್’ ಚಿತ್ರಕ್ಕೆ 100 ಮಿಲಿಯನ್​ ವೀಕ್ಷಣೆ
ನಿಖಿಲ್​ ಕುಮಾರಸ್ವಾಮಿ
ಮದನ್​ ಕುಮಾರ್​
|

Updated on: Sep 07, 2023 | 3:13 PM

Share

ನಟ ನಿಖಿಲ್​ ಕುಮಾರ್​ (Nikhil Kumar) ಅವರು ರಾಜಕೀಯದ ಜೊತೆ ಚಿತ್ರರಂಗದಲ್ಲಿ ಮತ್ತೆ ಆ್ಯಕ್ಟೀವ್​ ಆಗಿದ್ದಾರೆ. ಈ ಸಂದರ್ಭಕ್ಕೆ ಸರಿಯಾಗಿ ಅವರ ‘ರೈಡರ್’ ಸಿನಿಮಾ (Rider Movie) ಸದ್ದು ಮಾಡುತ್ತಿದೆ. ಅಂದಹಾಗೆ, ಈ ಸಿನಿಮಾ ತೆರೆಕಂಡಿದ್ದು 2021ರಲ್ಲಿ. ಆದರೂ ಕೂಡ ಈ ಚಿತ್ರದ ಬಗ್ಗೆ ಈಗ ಮತ್ತೆ ಸುದ್ದಿ ಜೋರಾಗಿದೆ. ಅದಕ್ಕೆ ಬಲವಾದ ಕಾರಣ ಕೂಡ ಇದೆ. 2 ವರ್ಷಗಳ ಹಿಂದೆ ರಿಲೀಸ್​ ಆಗಿದ್ದ ಈ ಚಿತ್ರಕ್ಕೆ ಹಿಂದಿ ಪ್ರೇಕ್ಷಕರು ಮನ ಸೋತಿದ್ದಾರೆ. ಅದಕ್ಕೆ ಸಾಕ್ಷಿ ಒದಗಿಸುತ್ತಿದೆ ಯೂಟ್ಯೂಬ್​ (YouTube) ವೀವ್ಸ್​. ಹೌದು, ‘ರೈಡರ್​’ ಚಿತ್ರದ ಹಿಂದಿ ವರ್ಷನ್​ ಅನ್ನು ಬರೋಬ್ಬರಿ 100 ಮಿಲಿಯನ್​ ಬಾರಿ ವೀಕ್ಷಣೆ ಮಾಡಲಾಗಿದೆ. ಅಂದರೆ, 10 ಕೋಟಿ ಬಾರಿ ಈ ಸಿನಿಮಾ ವೀಕ್ಷಣೆ ಕಂಡಿದೆ.

ನಿಖಿಲ್ ಕುಮಾರ್​ ಅವರು ‘ರೈಡರ್​’ ಸಿನಿಮಾದ ಹಿಂದಿ ಡಬ್ಬಿಂಗ್​ ವರ್ಷನ್​ ಮೂಲಕ ಉತ್ತರ ಭಾರತದಲ್ಲೂ ಖ್ಯಾತಿ ಗಳಿಸಿದ್ದಾರೆ. ಸ್ಯಾಂಡಲ್​ವುಡ್​ ಸಿನಿಮಾಗಳು ಕರುನಾಡಿನಲ್ಲೇ ಇಷ್ಟೊಂದು ವೀವ್ಸ್​ ಪಡೆಯುವುದು ವಿರಳ. ಅಂಥದ್ದರಲ್ಲಿ ನಿಖಿಲ್ ಕುಮಾರ್​ ನಟನೆಯ ‘ರೈಡರ್​’ ಸಿನಿಮಾ ಹಿಂದಿ ಭಾಷೆಯಲ್ಲಿ 100 ಮಿಲಿಯನ್ ಬಾರಿ ವೀಕ್ಷಣೆ ಕಂಡಿದೆ ಎಂಬುದು ಗಮನಾರ್ಹ ಸಂಗತಿ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಕರುನಾಡಿನಲ್ಲಿ ಮಾತ್ರವಲ್ಲದೇ ಹಿಂದಿ ಪ್ರೇಕ್ಷಕರ ವಲಯದಲ್ಲೂ ನಿಖಿಲ್​ ಕುಮಾರ್​ಗೆ ಫ್ಯಾನ್ಸ್​ ಇದ್ದಾರೆ ಎಂಬುದಕ್ಕೆ ಈ 100 ಮಿಲಿಯನ್​ ಸಾಕ್ಷಿ ಒದಗಿಸುತ್ತಿದೆ.

‘ರೈಡರ್​’ ಹಿಂದಿ ವರ್ಷನ್:

‘ರೈಡರ್’ ಸಿನಿಮಾ ಕುರಿತು:

ಆರಂಭದಲ್ಲಿ ‘ರೈಡರ್’ ಚಿತ್ರ ಕೇವಲ ಕನ್ನಡದಲ್ಲಿ ಬಿಡುಗಡೆ ಆಗಿತ್ತು. ಆನಂತರ ಈ ಸಿನಿಮಾ ಹಿಂದಿಗೆ ಡಬ್ ಆಯಿತು. ಹಿಂದಿ ಪ್ರೇಕ್ಷಕರು ನಿಖಿಲ್ ಕುಮಾರ್​ ಅವರನ್ನು ಯೂಟ್ಯೂಬ್​ನಲ್ಲಿ ನೋಡಿ ಎಂಜಾಯ್​ ಮಾಡಿದ್ದಾರೆ. ನಿರ್ದೇಶಕ ವಿಜಯ್ ಕುಮಾರ್ ಕೊಂಡ ಅವರು ‘ರೈಡರ್’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದರು. ಈ ಸಿನಿಮಾ ಪಕ್ಕಾ ಮಾಸ್ ಪ್ರೇಕ್ಷಕರಿಗೆ ಹೇಳಿ ಮಾಡಿಸಿದಂತಿತ್ತು. ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ನಟಿಸಿದ್ದ ಕಾಶ್ಮೀರಾ ಪರದೇಶಿ ಅವರು ‘ರೈಡರ್​’ ಸಿನಿಮಾದಲ್ಲಿ ನಿಖಿಲ್​ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಮೂಲಕ ಕಾಶ್ಮೀರಾ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಚಿತ್ರದ ಹಾಡುಗಳು ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದ್ದವು.

ಇದನ್ನೂ ಓದಿ: ‘ರಾಜಕಾರಣದಿಂದ ಒಂದು ಹೆಜ್ಜೆ ಹೊರಗೆ ಇಟ್ಟಿದ್ದೇನೆ ಎಂಬ ಭಾವನೆ ಯಾರಿಗೂ ಬೇಡ’: ನಿಖಿಲ್​ ಕುಮಾರ್​ ಸ್ಪಷ್ಟನೆ

ಹೊಸ ಸಿನಿಮಾ ಕೆಲಸದಲ್ಲಿ ನಿಖಿಲ್​ ಬ್ಯುಸಿ:

ಇತ್ತೀಚೆಗಷ್ಟೇ ನಿಖಿಲ್ ಅವರ ಹೊಸ ಸಿನಿಮಾ ಸೆಟ್ಟೇರಿತು. ಆ ಸಿನಿಮಾ ಮೂಲಕ ಅವರು ಮತ್ತೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದ್ದಾರೆ. ಖ್ಯಾತ ನಿರ್ಮಾಣ ಸಂಸ್ಥೆಯಾದ ಲೈಕಾ ಪ್ರೊಡಕ್ಷನ್​ ಮೂಲಕ ನಿಖಿಲ್​ ಅವರ ಹೊಸ ಚಿತ್ರ ನಿರ್ಮಾಣ ಆಗುತ್ತಿದೆ. ಕಾಲಿವುಡ್​ನ ಖ್ಯಾತ ನಿರ್ದೇಶಕ ಲಕ್ಷ್ಮಣ್ ಅವರು ಈ ಸಿನಿಮಾದ ಸಾರಥ್ಯ ವಹಿಸಿಕೊಂಡಿದ್ದಾರೆ. ಇದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿಬರುತ್ತಿದೆ ಎಂಬುದು ವಿಶೇಷ. ಹಿಂದಿಯಲ್ಲೂ ಬಿಡುಗಡೆ ಆಗಲಿದೆ. ಆ ಮೂಲಕ ಹಿಂದಿ ಪ್ರೇಕ್ಷಕರಿಗೆ ನಿಖಿಲ್​ ಅವರು ಮತ್ತಷ್ಟು ಹತ್ತಿರ ಆಗಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ
ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​
ಬಿಗ್​​ಬಾಸ್ ಮನೆಯಲ್ಲಿ ಸ್ಪಂದನಾ-ರಾಶಿಕಾ ಕುಸ್ತಿ: ವಿಡಿಯೋ
ಬಿಗ್​​ಬಾಸ್ ಮನೆಯಲ್ಲಿ ಸ್ಪಂದನಾ-ರಾಶಿಕಾ ಕುಸ್ತಿ: ವಿಡಿಯೋ