AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಪಂದನಾ ಸಾವಿನ ಬೆನ್ನಲ್ಲೇ ಮತ್ತೊಂದು ಶಾಕ್; ಮಂಡ್ಯ ಮೂಲದ ಕಿರುತೆರೆ ನಟ ಹೃದಯಾಘಾತದಿಂದ ನಿಧನ

ಇಂದು (ಆಗಸ್ಟ್ 18) ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯ ಹರಿಹರಪುರ ಗ್ರಾಮದಲ್ಲಿ ಪವನ್ ಅಂತ್ಯಕ್ರಿಯೆ ನಡೆಯಲಿದೆ. ಅವರ ಕುಟುಂಬದವರು ಹಾಗೂ ಆಪ್ತರು ಅಂತ್ಯಕ್ರಿಯೆಯಲ್ಲಿ ಭಾಗಿ ಆಗುತ್ತಿದ್ದಾರೆ. ಪವನ್ ಯಾವ ಧಾರಾವಾಹಿಯಲ್ಲಿ ನಟಿಸುತ್ತಿದ್ದರು ಎಂಬ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.

ಸ್ಪಂದನಾ ಸಾವಿನ ಬೆನ್ನಲ್ಲೇ ಮತ್ತೊಂದು ಶಾಕ್; ಮಂಡ್ಯ ಮೂಲದ ಕಿರುತೆರೆ ನಟ ಹೃದಯಾಘಾತದಿಂದ ನಿಧನ
ಮೃತ ಪವನ್
ಪ್ರಶಾಂತ್​ ಬಿ.
| Edited By: |

Updated on: Aug 18, 2023 | 9:45 AM

Share

ಹೃದಯಾಘಾತ ಪ್ರಕರಣ ಹೆಚ್ಚುತ್ತಿದೆ. ಯುವಕರು ಹೃದಯಾಘಾತದಿಂದ ಮೃತಪಡುತ್ತಿದ್ದಾರೆ. ಇತ್ತೀಚೆಗೆ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ (Spandana) ಕೂಡ ಹಾರ್ಟ್​ ಅಟ್ಯಾಕ್​ನಿಂದ ಮೃತಪಟ್ಟರು. ಈ ನೋವು ಕಡಿಮೆ ಆಗುವ ಮೊದಲೇ ಕಿರುತೆರೆ ನಟ ಪವನ್ ಅವರು ಮೃತಪಟ್ಟಿದ್ದಾರೆ. ಹಿಂದಿ ಹಾಗೂ ತಮಿಳು ಧಾರಾವಾಹಿಗಳಲ್ಲಿ ನಟಿಸಿ ಫೇಮಸ್ ಆದ ಮಂಡ್ಯ ಮೂಲದ ಪವನ್ ಅವರು ಇತ್ತೀಚೆಗೆ ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ 25 ವರ್ಷ ವಯಸ್ಸಾಗಿತ್ತು.

ಇಂದು (ಆಗಸ್ಟ್ 18) ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯ ಹರಿಹರಪುರ ಗ್ರಾಮದಲ್ಲಿ ಪವನ್ ಅಂತ್ಯಕ್ರಿಯೆ ನಡೆಯಲಿದೆ. ಅವರ ಕುಟುಂಬದವರು ಹಾಗೂ ಆಪ್ತರು ಅಂತ್ಯಕ್ರಿಯೆಯಲ್ಲಿ ಭಾಗಿ ಆಗುತ್ತಿದ್ದಾರೆ.

ಆಗಸ್ಟ್ 16ರಂದು ಪವನ್ ಮೃತಪಟ್ಟಿದ್ದಾರೆ. ಅವರಿಗೆ ತೀವ್ರ ಹೃದಯಾಘಾತ ಉಂಟಾಗಿದೆ. ಕೆಆರ್ ಪೇಟೆ ಮೂಲದವರಾದ ಪವನ್ ಮಹಾರಾಷ್ಟ್ರದಲ್ಲಿ ನೆಲೆಯೂರಿದ್ದರು. ಹಿಂದಿ, ತಮಿಳು ಕಿರುತೆರೆಯಲ್ಲಿ ಪವನ್ ನಟಿಸುತ್ತಿದ್ದರು. ಬೆಳ್ಳಿ ಪರದೆಮೇಲೆ ಮಿಂಚಬೇಕು ಎಂದು ಕನಸು ಕಂಡಿದ್ದರು. ಹುಟ್ಟೂರು ಎನ್ನುವ ಕಾರಣಕ್ಕೆ ಪವನ್ ಮೃತದೇಹವನ್ನು ಮಂಡ್ಯಕ್ಕೆ ತರಲಾಗಿದೆ. ಮಧ್ಯಾಹ್ನ 12 ಗಂಟೆ ವೇಳೆಗೆ ಅಂತ್ಯಕ್ರಿಯೆ ನೆರವೇರಲಿದೆ.

ಇದನ್ನೂ ಓದಿ: ಸ್ಪಂದನಾ ಉತ್ತರ ಕ್ರಿಯೆಗೆ ಮಗನನ್ನು ಕರೆದುಕೊಂಡು ಬಂದ ವಿಜಯ್​ ರಾಘವೇಂದ್ರ

ಪವನ್ ಯಾವ ಧಾರಾವಾಹಿಯಲ್ಲಿ ನಟಿಸುತ್ತಿದ್ದರು ಎಂಬ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಚಳಿಯೆಂದು ಹುತಾತ್ಮನಾದ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ಅಮ್ಮ
ಚಳಿಯೆಂದು ಹುತಾತ್ಮನಾದ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ಅಮ್ಮ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ಭುಗಿಲೆದ್ದ ಆಕ್ರೋಶ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ಭುಗಿಲೆದ್ದ ಆಕ್ರೋಶ
ಆರ್​ಸಿಬಿ ಪರ ಚೊಚ್ಚಲ ವಿಕೆಟ್ ಉರುಳಿಸಿದ ಲಾರೆನ್ ಬೆಲ್
ಆರ್​ಸಿಬಿ ಪರ ಚೊಚ್ಚಲ ವಿಕೆಟ್ ಉರುಳಿಸಿದ ಲಾರೆನ್ ಬೆಲ್
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ