‘ದೊಡ್ಡ ಚಿತ್ರಗಳಿಗೆ ಕಾಂತಾರದಿಂದ ಹಾರ್ಟ್ ಅಟ್ಯಾಕ್ ಆಗಿದೆ’; ರಿಷಬ್ ಶೆಟ್ಟಿಗೆ ಡೆವಿಲ್ ಎಂದ ಆರ್ಜಿವಿ
ಈ ಚಿತ್ರದ ಎದುರು ಅನೇಕ ದೊಡ್ಡ ಬಜೆಟ್ ಚಿತ್ರಗಳು ಮಂಡಿ ಊರಿವೆ. 15-20 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾದ ಈ ಸಿನಿಮಾ ನೂರಾರು ಕೋಟಿ ಬಾಚಿಕೊಂಡಿದೆ. ಈ ಚಿತ್ರದ ಬಗ್ಗೆ ಆರ್ಜಿವಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ರಿಷಬ್ ಶೆಟ್ಟಿ (Rishab Shetty) ಅವರ ನಟನೆಯ ‘ಕಾಂತಾರ’ ಸಿನಿಮಾ (Kantara Movie) ಧೂಳೆಬ್ಬಿಸುತ್ತಿದೆ. ಯಾರ ಬಾಯಲ್ಲಿ ಕೇಳಿದರೂ ಈ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಅನೇಕ ಸ್ಟಾರ್ಗಳು ‘ಕಾಂತಾರ’ ಚಿತ್ರವನ್ನು ಹಾಡಿ ಹೊಗಳಿದ್ದಾರೆ. ಈಗ ರಾಮ್ ಗೋಪಾಲ್ ವರ್ಮಾ ಅವರು ‘ಕಾಂತಾರ’ದ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಅಷ್ಟೇ ಅಲ್ಲ ಹಲವು ಭ್ರಮೆಗಳನ್ನು ಈ ಚಿತ್ರ ತೊಡೆದು ಹಾಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ಕಾಂತಾರ’ ಸಿನಿಮಾ ಕನ್ನಡದಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಂಡಿತು. ಬುಕ್ ಮೈ ಶೋನಲ್ಲಿ ಈಗಲೂ 9.9 ರೇಟಿಂಗ್ ಪಡೆದು ಈ ಸಿನಿಮಾ ಮುನ್ನುಗ್ಗುತ್ತಿದೆ. ಸದ್ಯ, ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಿ ಜನರಿಂದ ಪ್ರಶಂಸೆ ಪಡೆದುಕೊಳ್ಳುತ್ತಿದೆ. ಈ ಚಿತ್ರದ ಎದುರು ಅನೇಕ ದೊಡ್ಡ ಬಜೆಟ್ ಚಿತ್ರಗಳು ಮಂಡಿ ಊರಿವೆ. 15-20 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾದ ಈ ಸಿನಿಮಾ ನೂರಾರು ಕೋಟಿ ಬಾಚಿಕೊಂಡಿದೆ. ಈ ಚಿತ್ರದ ಬಗ್ಗೆ ಆರ್ಜಿವಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
Thanks to the DEVIL called @shetty_rishab all big budget film makers will now suddenly keep waking up in the night from the nightmare collections of #Kantara ,Like how Shiva keeps waking up to Guliga Daiva
— Ram Gopal Varma (@RGVzoomin) October 18, 2022
‘ದೊಡ್ಡ ಬಜೆಟ್ನ ಸಿನಿಮಾಗಳು ಬಂದರೆ ಮಾತ್ರ ಜನರು ಥಿಯೇಟರ್ಗೆ ಬರುತ್ತಾರೆ ಎಂಬ ನಂಬಿಕೆಯನ್ನು ರಿಷಬ್ ಶೆಟ್ಟಿ ಸುಳ್ಳು ಮಾಡಿದ್ದಾರೆ. ಮುಂದಿನ ಹಲವು ದಶಕಗಳಿಗೆ ಕಾಂತಾರ ಒಂದೊಳ್ಳೆಯ ಪಾಠ’ ಎಂದು ಆರ್ಜಿವಿ ಟ್ವೀಟ್ ಮಾಡಿದ್ದಾರೆ.
Hey @shetty_rishab thank you for the wonderful lesson called #Kantara All Film industry people will need to pay you tuition fees???
— Ram Gopal Varma (@RGVzoomin) October 18, 2022
‘300, 400, 500 ಕೋಟಿ ರೂಪಾಯಿ ಬಜೆಟ್ ಸಿನಿಮಾಗಳು ಕಾಂತಾರ ಕಲೆಕ್ಷನ್ ಎಂಬ ಹಾರ್ಟ್ ಅಟ್ಯಾಕ್ನಿಂದ ಮೃತಪಟ್ಟಿವೆ. ಡೆವಿಲ್ ರಿಷಬ್ ಶೆಟ್ಟಿಗೆ ಧನ್ಯವಾದ ಹೇಳಬೇಕು. ದೊಡ್ಡ ಬಜೆಟ್ ಸಿನಿಮಾಗಳು ಕಾಂತಾರದ ಭರ್ಜರಿ ಕಲೆಕ್ಷನ್ನಿಂದ ರಾತ್ರೋರಾತ್ರಿ ಕಾಲ್ಕಿತ್ತಿವೆ. ಕಾಂತಾರ ಎಂಬ ಒಂದೊಳ್ಳೆಯ ಪಾಠವನ್ನು ಹೇಳಿದ ನಿಮಗೆ ಧನ್ಯವಾದ. ಚಿತ್ರರಂಗದ ಎಲ್ಲರೂ ನಿಮಗೆ ಟ್ಯೂಷನ್ ಹಣವನ್ನು ಪಾವತಿಸಬೇಕು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
Published On - 6:00 pm, Tue, 18 October 22