ಹರ್ಷನ ಕೈಗೆ ಕೋಳ ಹಾಕಿಸಿದ ಸಾನಿಯಾ; ಜೈಲು ಪಾಲಾದ ಭುವಿ ಗಂಡ

ರತ್ನಮಾಲಾಗೆ ಮರೆವಿನ ಕಾಯಿಲೆ ಶುರವಾಗಿದೆ. ಭುವಿ ಎಂದುಕೊಂಡು ಸಾನಿಯಾಗೆ ಪರ್ಮನೆಂಟ್ ಆಗಿ ಎಂ.ಡಿ. ಪಟ್ಟ ನೀಡುವ ಬಗ್ಗೆ ಘೋಷಣೆ ಮಾಡಿದ್ದಳು ರತ್ನಮಾಲಾ. ಇದು ಸಾನಿಯಾ ಖುಷಿಯನ್ನು ಹೆಚ್ಚಿಸಿದೆ.

ಹರ್ಷನ ಕೈಗೆ ಕೋಳ ಹಾಕಿಸಿದ ಸಾನಿಯಾ; ಜೈಲು ಪಾಲಾದ ಭುವಿ ಗಂಡ
ಸಾನಿಯಾ-ಹರ್ಷ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 19, 2022 | 7:00 AM

‘ಕನ್ನಡತಿ’ ಧಾರಾವಾಹಿಯಲ್ಲಿ (Kannadathi Serial) ಹರ್ಷ ಹಾಗೂ ಸಾನಿಯಾ ನಡುವಿನ ಕಿತ್ತಾಟ ಮುಂದುವರಿದಿದೆ. ಸಾನಿಯ ವಿರುದ್ಧ ಹರ್ಷ ಗನ್ ಎತ್ತಿದ್ದ. ಅಷ್ಟೇ ಅಲ್ಲ ಶೂಟ್ ಕೂಡ ಮಾಡಿದ್ದ. ಆದರೆ, ಗುಂಡು ಅವಳಿಗೆ ತಗುಲಿಲ್ಲ. ಇದು ಸಾನಿಯಾಳನ್ನು ಹೆದರಿಸುವ ತಂತ್ರ ಆಗಿತ್ತು. ಗನ್​ನಿಂದ ಬುಲೆಟ್ ಹಾರಿದ ವಿಚಾರ ಇಟ್ಟುಕೊಂಡು ಹರ್ಷನನ್ನು ಸಾನಿಯಾ ಅರೆಸ್ಟ್ ಮಾಡಿಸಿದ್ದಾಳೆ. ಈ ಕೆಲಸ ಮಾಡಿದ ನಂತರದಲ್ಲಿ ಆಕೆಗೆ ಹಾಲು ಕುಡಿದಷ್ಟು ಸಂತೋಷವಾಗಿದೆ. ಆದರೆ, ಈ ಖುಷಿ ಹೆಚ್ಚು ದಿನ ಇರೋದು ಡೌಟ್. ಶೀಘ್ರದಲ್ಲೇ ಸಾನಿಯಾ ಜೈಲು ಪಾಲಾದರೂ ಅಚ್ಚರಿ ಏನಿಲ್ಲ.

ರತ್ನಮಾಲಾಗೆ ಮರೆವಿನ ಕಾಯಿಲೆ ಶುರವಾಗಿದೆ. ಭುವಿ ಎಂದುಕೊಂಡು ಸಾನಿಯಾಗೆ ಪರ್ಮನೆಂಟ್ ಆಗಿ ಎಂ.ಡಿ. ಪಟ್ಟ ನೀಡುವ ಬಗ್ಗೆ ಘೋಷಣೆ ಮಾಡಿದ್ದಳು ರತ್ನಮಾಲಾ. ಇದು ಸಾನಿಯಾ ಖುಷಿಯನ್ನು ಹೆಚ್ಚಿಸಿದೆ. ರತ್ನಮಾಲಾ ಹೇಳಿದ ಒಂದೊಂದು ಮಾತು ಆಕೆಯ ಸಂತಸವನ್ನು ದುಪ್ಪಟ್ಟು ಮಾಡಿದೆ. ಆದರೆ, ಇದಾವುದೂ ತನಗೆ ಹೇಳಿದ್ದಲ್ಲ ಎಂಬುದು ಸಾನಿಯಾಗೆ ಗೊತ್ತಿಲ್ಲ. ಇದೇ ಖುಷಿಯಲ್ಲಿ ಹರ್ಷನನ್ನು ಆಕೆ ಅರೆಸ್ಟ್ ಮಾಡಿಸಿದ್ದಾಳೆ. ಇದು ಆಕೆಗೆ ತೊಂದರೆ ತಂದೊಡ್ಡಬಹುದು.

ಪೊಲೀಸರು ಹರ್ಷನಿಂದ ಗನ್ ರಿಕವರಿ ಮಾಡಿಕೊಂಡಿದ್ದರು. ಅಲ್ಲದೆ, ಠಾಣೆಗೆ ಹಾಜರಾಗಿ ಸ್ಪಷ್ಟನೆ ನೀಡಬೇಕು ಎಂದು ಕೋರಿದ್ದರು. ಆದರೆ, ಹರ್ಷ ಇದನ್ನು ಮಾಡಿಲ್ಲ. ಈಗ ರತ್ನಮಾಲಾ ಎಂ.ಡಿ. ಪಟ್ಟ ನೀಡುವುದಾಗಿ ಹೇಳಿದ ಬೆನ್ನಲ್ಲೇ ಸಾನಿಯಾ ಖುಷಿ ಹೆಚ್ಚಿದೆ. ನೇರವಾಗಿ ಠಾಣೆಗೆ ತೆರಳಿದ ಆಕೆ ಹರ್ಷನ ವಿರುದ್ಧ ದೂರು ನೀಡಿದ್ದಾಳೆ. ಈ ಕಾರಣಕ್ಕೆ ಹರ್ಷನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಇದನ್ನೂ ಓದಿ
Image
‘ಕನ್ನಡತಿ’ ಧಾರಾವಾಹಿಯಲ್ಲಿ ಕೊನೆಯಾಗಲಿದೆ ರತ್ನಮಾಲಾ ಪಾತ್ರ? ಅನುಮಾನ ಹುಟ್ಟಿಸಿತು ಆ ಒಂದು ಘಟನೆ
Image
ರತ್ನಮಾಲಾ ಚಿಂತೆಗೆ ಕಾರಣವಾಗಿದ್ದು ಸಾನಿಯಾ ಅಲ್ಲ ಹರ್ಷ; ಬೇಸರ ತೋಡಿಕೊಂಡ ಅಮ್ಮಮ್ಮ
Image
ಏಕವಚನದಲ್ಲಿ ಬೈಸಿಕೊಂಡು, ಆಸ್ಪತ್ರೆಯಲ್ಲಿ ನಿದ್ರಿಸಿದ ಸಾನಿಯಾ; ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ತಾಳಾ ರತ್ನಮಾಲಾ ಸೊಸೆ?
Image
ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ

‘ಮನೆಯವರಾಗಿ ಹರ್ಷ ನನ್ನನ್ನು ರಕ್ಷಣೆ ಮಾಡಬೇಕಿತ್ತು. ಆದರೆ, ಅವರಿಂದಲೇ ನನಗೆ ಕೊಲೆ ಬೆದರಿಕೆ ಇದೆ. ಹೀಗಾಗಿ, ಅವರನ್ನು ಬಂಧಿಸಿ’ ಎಂದು ಪೊಲೀಸರಿಗೆ ದೂರು ನೀಡಿದ್ದಾಳೆ ಸಾನಿಯಾ. ಈ ಕಾರಣಕ್ಕೆ ಕೋಳ ಹಾಕಿ ಆತನನ್ನು ಜೈಲಿಗೆ ಹಾಕಲಾಗಿದೆ. ಒಂದೊಮ್ಮೆ ಈ ವಿಚಾರ ರತ್ನಮಾಲಾಗೆ ಗೊತ್ತಾದರೆ ಪ್ರಕರಣಕ್ಕೆ ಬೇರೆಯದೇ ರೀತಿಯ ಟ್ವಿಸ್ಟ್​ ಸಿಗುವ ಸಾಧ್ಯತೆ ಇದೆ.

ರತ್ನಮಾಲಾ ಸಿಟ್ಟಿಗೆ ಗುರಿ ಆಗ್ತಾಳೆ ಸಾನಿಯಾ?

ಈ ಮೊದಲು ರತ್ನಮಾಲಾಳನ್ನು ಸಾನಿಯಾ ಹತ್ಯೆ ಮಾಡಲು ಪ್ರಯತ್ನಿಸಿದ್ದಳು. ಇದರ ವಿಡಿಯೋವನ್ನು ರತ್ನಮಾಲಾ ಶೂಟ್ ಮಾಡಿಕೊಂಡಿದ್ದಳು. ಈ ವಿಡಿಯೋ ಮೊಬೈಲ್​ನಲ್ಲಿ ಸೇಫ್ ಆಗಿದೆ. ಒಂದೊಮ್ಮೆ ಹರ್ಷನನ್ನು ಸಾನಿಯಾ ಅರೆಸ್ಟ್ ಮಾಡಿಸಿದ್ದಾಳೆ ಎಂಬ ವಿಚಾರ ಗೊತ್ತಾದರೆ ರತ್ನಮಾಲಾ ಸಿಟ್ಟಾಗಬಹುದು. ತನ್ನ ಬಳಿ ಇರೋ ವಿಡಿಯೋವನ್ನು ಆಕೆ ಪೊಲೀಸರಿಗೆ ನೀಡಿದರೆ ಸಾನಿಯಾ ಅರೆಸ್ಟ್​ ಆಗಬಹುದು.

ಎಂ.ಡಿ ಪಟ್ಟಕ್ಕೆ ಕುತ್ತು?

ಸಾನಿಯಾ ಎಂಡಿ ಪಟ್ಟವನ್ನು ಆನಂದಿಸುತ್ತಿದ್ದಾಳೆ. ಈಗಾಗಲೇ ಅದನ್ನು ಭುವಿಗೆ ನೀಡಬೇಕು ಎಂದು ರತ್ನಮಾಲಾ ನಿರ್ಧರಿಸಿ ಆಗಿದೆ. ಹೀಗಾಗಿ, ಯಾವುದೇ ಸಂದರ್ಭದಲ್ಲೂ ಸಾನಿಯಾ ಮ್ಯಾನೇಜಿಂಗ್ ಡೈರೆಕ್ಟರ್ ಪೋಸ್ಟ್ ಭುವಿ ಪಾಲಾಗಬಹುದು. ಒಂದೊಮ್ಮೆ ಹಾಗಾದಲ್ಲಿ ಸಾನಿಯಾ ಸೊಕ್ಕು ಮುರಿಯಲಿದೆ.

ಸೇಡು ತೀರಿಸಿಕೊಳ್ಳಲಿದ್ದಾನೆ ಹರ್ಷ?

ಹರ್ಷನನ್ನು ಸಾನಿಯಾ ಜೈಲಿಗೆ ಹಾಕಿದ್ದಾಳೆ. ಈ ಮೊದಲು ಡ್ರಗ್ಸ್ ಪ್ರಕರಣದಲ್ಲಿ ಆತನ್ನು ಸಿಕ್ಕಿಸಲು ಸಾನಿಯಾ ಪ್ರಯತ್ನಿಸಿದ್ದಳು. ಆದರೆ, ಅದು ವಿಫಲವಾಗಿತ್ತು. ಹರ್ಷನ ಬದಲಿಗೆ ವರುಧಿನಿ ಜೈಲು ಸೇರಿದ್ದಳು. ಈ ಬಾರಿ ಆತನನ್ನು ಜೈಲಿಗೆ ಹಾಕಬೇಕು ಎಂಬ ಆಕೆಯ ಉದ್ದೇಶ ಫಲ ಕೊಟ್ಟಿದೆ. ಮುಂದೆ ಈ ವಿಚಾರಕ್ಕೆ ಹರ್ಷ ಸೇಡು ತೀರಿಸಿಕೊಳ್ಳುತ್ತಾನಾ ಎಂಬುದನ್ನು ಕಾದು ನೋಡಬೇಕಿದೆ.

ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್