ಪ್ರತಿಭಟನೆ ಮಾಡುವಾಗ ಜಗ್ಗಾಟದಲ್ಲಿ ಅಸ್ವಸ್ಥನಾದ ರೈತನನ್ನು ಪೊಲೀಸರೇ ತಮ್ಮ ವಾಹನದಲ್ಲಿ ಅಸ್ಪತ್ರೆಗೆ ಕರೆದೊಯ್ದರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 20, 2021 | 10:54 PM

ಪೊಲೀಸರು ಮುಷ್ಕರ ಕೈಬಿಡುವಂತೆ ಮನವಿ ಮಾಡಿದರೂ ರೈತರು ತಮ್ಮ ಪಟ್ಟು ಸಡಲಿಸಲಿಲ್ಲ. ಸರ್ಕಾರದ ವಿರುದ್ಧ ಜೋರಾಗಿ ಘೋಷಣೆಗೆಳನ್ನು ಕೂಗುತ್ತಾ ರೈತರು ಪ್ರತಿಭಟನೆಯ ತೀವ್ರತೆಯನ್ನು ಹೆಚ್ಚಿಸಿದರೆ ಹೊರತು ಪ್ರತಿಭಟನೆ ಕೈಬಿಡುವ ಸುಳಿವು ನೀಡಲಿಲ್ಲ.

ಬೆಳಗಾವಿಯಲ್ಲಿ ಅಧಿವೇಶನ ನಡೆಯುವಾಗ ಪ್ರತಿಭಟನೆಗಳು ಅಗೋದು ಸಹಜವೇ. ಎಮ್ ಈ ಎಸ್ ಪುಂಡರ ವಿರುದ್ಧ ಕನ್ನಡಪ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಅವರ ಪ್ರತಿಭಟನೆ ತೀವ್ರ ಸ್ವರೂಪ ತಳೆದಿದೆ. ಕರ್ನಾಟಕದಲ್ಲಿ ಎಮ್ ಈ ಎಸ್ ಅನ್ನು ನಿಷೇಧಿಸುವರೆಗೆ ತಾವು ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಸಂಘಟನೆಗಳ ಮುಖ್ಯಸ್ಥರು ಸ್ಪಷ್ಟವಾಗಿ ಹೇಳಿದ್ದಾರೆ. ಈ ಹೋರಾಟಗಾರರು ಸೋಮವಾರ ಬೆಳಗಾವಿ ಹೆದ್ದಾರಿಯಲ್ಲಿ ಮಂತ್ರಿಗಳ ಕಾರುಗಳಿಗೆ ಮುತ್ತಿಗೆ ಹಾಕಿ ತಮ್ಮ ಉದ್ದೇಶವನ್ನು ಹೇಳುತ್ತಿದ್ದರೆ ಮತ್ತೊಂದೆಡೆ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಹೆದ್ದಾರಿ ತಡೆದು ರೈತರು ಪ್ರತಿಭಟನೆ ನಡೆಸಿದರು. ಸರ್ಕಾರಕ್ಕೆ ತಾವು ನೀಡಿದ ಗಡುವು ಮುಗಿದಿದ್ದರೂ ಯಾವುದೇ ನಿರ್ಧಾರವನ್ನು ಪ್ರಕಟಿಸಿದ ಕಾರಣ ರೊಚ್ಚಿಗೆದ್ದ ರೈತರು ಸಹ ಸೋಮವಾರ ಬೆಳಗಾವಿ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ವಾಹನಗಳನ್ನು ತಡೆದು ಉಗ್ರ ಪ್ರತಿಭಟನೆ ನಡೆಸಿದರು.

ಅವರು ತಡೆದ ನಿಲ್ಲಿಸಿದ ವಾಹನಗಳಲ್ಲಿ ವಿಧಾನ ಪರಿಷತ್ ಸದಸ್ಯರೊಬ್ಬರ ಕಾರು ಸಹ ಸೇರಿತ್ತು. ಪೊಲೀಸರು ಮುಷ್ಕರ ಕೈಬಿಡುವಂತೆ ಮನವಿ ಮಾಡಿದರೂ ರೈತರು ತಮ್ಮ ಪಟ್ಟು ಸಡಲಿಸಲಿಲ್ಲ. ಸರ್ಕಾರದ ವಿರುದ್ಧ ಜೋರಾಗಿ ಘೋಷಣೆಗೆಳನ್ನು ಕೂಗುತ್ತಾ ರೈತರು ಪ್ರತಿಭಟನೆಯ ತೀವ್ರತೆಯನ್ನು ಹೆಚ್ಚಿಸಿದರೆ ಹೊರತು ಪ್ರತಿಭಟನೆ ಕೈಬಿಡುವ ಸುಳಿವು ನೀಡಲಿಲ್ಲ.

ಮತ್ತೊಂದೆಡೆ, ಹೆದ್ದಾರಿಯಲ್ಲಿ ವಾಹನಗಳ ಜಮಾವಣೆ ಹೆಚ್ಚುತ್ತಾ ಹೋಯಿತು. ಹಾಗಾಗೇ ಪೊಲೀಸರು ಶಕ್ತಿಪ್ರಯೋಗಕ್ಕೆ ಮುಂದಾದರು. ಮುಷ್ಕರನಿರತ ರೈತರನ್ನು ಬಲವಂತವಾಗಿ ಎಳೆದೊಯ್ದು ಬಸ್ನಲ್ಲಿ ಕೂರಿಸಿದರು. ಈ ಎಳೆದಾಟದಲ್ಲಿ ಒಬ್ಬ ರೈತ ಅಸ್ವಸ್ಥರಾದರು. ಉಳಿದ ರೈತರು ಅವರಿಗೆ ನೀರು ಕುಡಿಸಿ ಗಾಳಿ ಬೀಸಿ ಉಪಚಾರ ಮಾಡಿದರಾದರೂ ಅವರಿಗೆ ಪ್ರಜ್ಞೆ ಬರಲಿಲ್ಲ.

ಕೊನೆಗೆ ಪೊಲೀಸರು ಆ ರೈತನನ್ನು ತಮ್ಮ ಇಲಾಖೆಯ ವಾಹನವೊಂದರಲ್ಲಿ ಆಸ್ಪತ್ರೆಗೆ ಕರೆದೊಯ್ದರು.

ಇದನ್ನೂ ಓದಿ:   ಸುದೀಪ್​ ಬಾಡಿಗಾರ್ಡ್​ಗೆ ವಿಡಿಯೋ ಕಾಲ್​ ಮಾಡಿ ಕನ್ನಡದಲ್ಲಿ ಮಾತಾಡಿದ ದೀಪಿಕಾ; ಇದಕ್ಕಿದೆ ವಿಶೇಷ ಕಾರಣ

Published on: Dec 20, 2021 10:51 PM