ರೈತ ಮುಖಂಡ ಮಂದಗೆರೆ ಜಯರಾಮ್ ಮಾತಿನ ವರಸೆಯಿಂದ ಸಚಿವ ನಾರಾಯಣಗೌಡ ತಬ್ಬಿಬ್ಬುಗೊಂಡರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 28, 2022 | 10:56 PM

ರೈತ ಮುಖಂಡರು ಒಂದಿಷ್ಟೂ ವಿಚಲಿತರಾಗದೆ, ನಾನು ಹೇಳಿದ್ದು ಹಾಗಲ್ಲ, ನಿಮ್ಮ ಪವರ್ ಬಳಸಿ ಅವರ ಕ್ರಮ ಮೇಲೆ ತೆಗೆದುಕೊಳ್ಳಿ, ಮಾತಿನ ಭರದಲ್ಲಿ ಹಾಗೆ ಹೇಳಿಬಿಟ್ಟೆ ಅತ ಸಮಜಾಯಿಷಿ ನೀಡುತ್ತಾರೆ.

ರೈತರನ್ನು ಗೋಳು ಹೊಯ್ದುಕೊಳ್ಳುವ, ಅವರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳು ಎಲ್ಲ ಜಿಲ್ಲೆಗಳಲ್ಲೂ ಸಿಗುತ್ತಾರೆ. ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲ್ಲೂಕು ಆಫೀಸಿನಲ್ಲೂ ಅಂಥವರಿದ್ದಾರೆ ಎಂದು ರೈತ ಮುಖಂಡ ಮಂದಗೆರೆ ಜಯರಾಮ್ (Mandagere Jayarama) ಅವರು ಆರೋಪಿಸಿ ಭ್ರಷ್ಟ ಅಧಿಕಾರಿಗಳ ಒಂದು ಲಿಸ್ಟ್ ಅನ್ನು ಸಚಿವ ಕೆಸಿ ನಾರಾಯಣಗೌಡ (KC Narayanagowda) ಅವರಿಗೆ ಸೋಮವಾರ ಕೆ ಅರ್ ಪೇಟೆಯಲ್ಲಿ (KRPet) ನೀಡಿದರು. ಅಸಲಿಗೆ ರೈತರೊಂದಿಗೆ ಅವರು ಪ್ರತಿಭಟನೆ ನಡೆಸುವಾಗ ಸಚಿವರು ಅಲ್ಲಿಗೆ ಆಗಮಿಸಿದರು. ಜಯರಾಮ್ ಅವರು ಲಂಚಗುಳಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಅಂತ ಹೇಳಿದ್ದರೆ ಮುಗಿದಿರುತಿತ್ತು. ಆದರೆ ಆಕ್ರೋಷಭರಿತರಾಗಿದ್ದ ಅವರು ‘ನಿಮ್ಮಲ್ಲಿ ತಾಕತ್ತಿದ್ದರೆ’ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಜರುಗಿಸಿ, ಸಸ್ಪೆಂಡ್ ಮಾಡಿ ಅಂತ ಒಂದೇ ಉಸಿರನಲ್ಲಿ ಹೇಳುತ್ತಾರೆ. ಅವರು ಬಳಸಿದ ‘ತಾಕತ್ತಿದ್ದರೆ’ ಶಬ್ದ ಸಚಿವರನ್ನು ರೇಗಿಸುತ್ತದೆ. ಅವರು ರೈತ ಮುಖಂಡನಿಗೆ ಮನಸ್ಸಿಗೆ ಬಂದಂತೆ ಮಾತಾಡಬೇಡಿ, ತಾಕಿದ್ದರೆ ಅಂದರೇನರ್ಥ ಅಂತ ಗರಂ ಆಗುತ್ತಾರೆ.

ಆದರೆ, ರೈತ ಮುಖಂಡರು ಒಂದಿಷ್ಟೂ ವಿಚಲಿತರಾಗದೆ, ನಾನು ಹೇಳಿದ್ದು ಹಾಗಲ್ಲ, ನಿಮ್ಮ ಪವರ್ ಬಳಸಿ ಅವರ ಕ್ರಮ ಮೇಲೆ ತೆಗೆದುಕೊಳ್ಳಿ, ಮಾತಿನ ಭರದಲ್ಲಿ ಹಾಗೆ ಹೇಳಿಬಿಟ್ಟೆ ಅತ ಸಮಜಾಯಿಷಿ ನೀಡುತ್ತಾರೆ.

ಅವರ ಮಾತು ಸಚಿವರನ್ನು ಸಮಾಧಾನಪಡಿಸುವುದಿಲ್ಲ. ಪುನಃ ಅವರು ರೈತ ಮುಖಂಡನ ಮಾತಿಗೆ ಆಕ್ಷೇಪಣೆ ವ್ಯಕ್ತಪಡಿಸುವುದನ್ನು ಮುಂದುವರಿಸುತ್ತಾರೆ. ಅವರೊಂದಿಗಿದ್ದ ಪೊಲೀಸ್ ಮತ್ತು ಇತರ ಅಧಿಕಾರಿಗಳು ಸಹ ದನಿಗೂಡಿಸುತ್ತಾರೆ. ಆಗ ರೈತ ಮುಖಂಡ ಜಯರಾಮ್ ಅವರಿಗೂ ರೇಗುತ್ತದೆ. ಅವರು ಸಚಿವರನ್ನೇ ನೇರವಾಗಿ ದಿಟ್ಟಿಸಿ ನೋಡುತ್ತಾ, ‘ತಾಕತ್ತಿದ್ದರೆ’, is not an unparliamentary word,’ ಅಂತ ಇಂಗ್ಲಿಷಲ್ಲಿ ಹೇಳುತ್ತಾರೆ. ‘ನಾನು ಒಂದು ಸುಸಂಸ್ಕೃತ ಕುಟುಂಬಕ್ಕೆ ಸೇರಿದವನು, ನನಗೆ ಭಾಷೆಯ ಜ್ಞಾನ ಚೆನ್ನಾಗಿದೆ,’ ಅಂತಲೂ ಅವರು ಹೇಳುತ್ತಾರೆ.

ಅವರ ಮಾತಿನ ವೈಖರಿಯಿಂದ ಸಚಿವರು ಮಾತ್ರ ಅಲ್ಲ ಅಲ್ಲಿದವರೆಲ್ಲ ದಂಗಾಗುತ್ತಾರೆ. ನಾರಾಯಣಗೌಡ ಅವರು ತಮ್ಮ ಮಾತಿನ ವರಸೆ ಬದಲಾಯಿಸಿ ‘ಸರಿ, ಏನಾಗಬೇಕು ಹೇಳಿ,’ ಅನ್ನುತ್ತಾರೆ.

ಆಗ ಜಯರಾಮ್ ಅವರು ಅಧಿಕಾರಿಗಳ ಭ್ರಷ್ಟತನದ ಕತೆಯನ್ನು ಪುನರಾವರ್ತಿಸುತ್ತಾರೆ.

ಇದನ್ನೂ ಓದಿ:   ಬಾಂಬ್ ದಾಳಿಯಿಂದ ಒಡೆದ ಗಾಜನ್ನು ಸ್ವಚ್ಛಗೊಳಿಸುವಾಗ ಕಣ್ಣೀರಿಡುತ್ತಾ ಉಕ್ರೇನ್​ ರಾಷ್ಟ್ರಗೀತೆ ಹಾಡಿದ ಮಹಿಳೆ : ವಿಡಿಯೋ ವೈರಲ್​