ಬ್ರಿಗೇಡ್ ರಸ್ತೆಯ ಹೊಸವರ್ಷ ಸಂಭ್ರಮಾಚರಣೆ ನೋಡಲು ಹಳ್ಳಿಯಿಂದ ಬಂದ ರೈತರು!

ಬ್ರಿಗೇಡ್ ರಸ್ತೆಯ ಹೊಸವರ್ಷ ಸಂಭ್ರಮಾಚರಣೆ ನೋಡಲು ಹಳ್ಳಿಯಿಂದ ಬಂದ ರೈತರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 31, 2024 | 7:17 PM

ಹಳ್ಳಿ ಮತ್ತು ನಗರ ಪ್ರದೇಶದ ಜೀವನಕ್ಕೆ ತುಲನೆ ಮಾಡಲಾಗಲ್ಲ, ಹಳ್ಳಿ ಬದುಕಿನ ಸೊಗಡೇ ಬೇರೆ, ಅಲ್ಲಿ ಕಷ್ಟವೂ ಇದೆ ಸುಖವೂ ಇದೆ, ಆದರೆ ನಗರದ ಜೀವನ ಯಥೇಚ್ಛವಾಗಿ ದುಡ್ಡಿರುವವರಿಗೆ ಚೆಂದ ಎಂದು ಹೇಳುವ ತಿಪ್ಪ ನಾಯಕ್ ಬ್ರಿಗೇಡ್ ರಸ್ತೆಯಲ್ಲಿ ಕಾಣುವ ವಿದ್ಯುತ್ ದೀಪಗಳ ಅಲಂಕಾರಕ್ಕಿಂತ ದಸರಾ ಸಮಯದಲ್ಲಿ ಮೈಸೂರು ಅರಮನೆಗೆ ಮಾಡುವ ವಿದ್ಯುದಲಂಕಾರ ಹತ್ತು ಪಟ್ಟು ಸೊಗಸಾಗಿರುತ್ತದೆ ಎನ್ನುತ್ತಾರೆ.

ಬೆಂಗಳೂರು: ನಗರದ ಬ್ರಿಗೇಡ್ ರಸ್ತೆಯಲ್ಲಿ ಹೊಸವರ್ಷದ ಸಂಭ್ರಮಾಚರಣೆಗೆ ಕೇವಲ ನಗರವಾಸಿಗಳು, ಕಾಸ್ಮೋಪಾಲಿಟನ್ ಸಂಸ್ಕೃತಿಯನ್ನು ತಮ್ಮದಾಗಿಸಿಕೊಂಡವರು ಮಾತ್ರ ಸೇರಿದ್ದಾರೆ ಎಂದು ನೀವು ಭಾವಿಸಿದ್ದರೆ ಅದು ತಪ್ಪು. ಚಾಮರಾಜನಗರ ಜಿಲ್ಲೆಯ ಭೈರಂಪಾಡಿ ಗ್ರಾಮದ ತಿಪ್ಪ ನಾಯಕ್ ಹೆಸರಿನ ರೈತರೊಬ್ಬರು ತಮ್ಮ ಗ್ರಾಮದವರೇ ಆಗಿರುವ ಸ್ನೇಹಿತನ ಜೊತೆ ಕೇವಲ ಹೊಸ ವರ್ಷಾಷಣೆ ನೋಡಲೆಂದೇ ನಗರಕ್ಕೆ ಬಂದಿದ್ದಾರೆ. ತಾಲ್ಲೂಕು ಪಂಚಾಯಿತಿಯ ಗೌರವಾನ್ವಿತ ಸದಸ್ಯರೂ ಆಗಿರುವ ನಾಯಕ್, ಬೆಂಗಳೂರಲ್ಲಿ ಹೊಸ ವರ್ಷದ ಆಚರಣೆ ಬದುಕಿನಲ್ಲಿ ಒಮ್ಮೆಯೂ ನೋಡದಿದ್ದರೆ ಜೀವನ ವ್ಯರ್ಥ ಅಂತ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರಾಜ್ಯದ ಪ್ರಮುಖ ರಾಜಕಾರಣಿಗಳು ಹೊಸ ವರ್ಷವನ್ನು ಎಲ್ಲೆಲ್ಲಿ ಆಚರಿಸುತ್ತಿದ್ದಾರೆ ಗೊತ್ತಾ?