ಕೆಆರ್​ಎಸ್ ಜಲಾಶಯದಲ್ಲಿ ಹೆಚ್ಚಿದ ಒಳಹರಿವು, ಖುಷಿಯಿಂದ ಬೀಗುತ್ತಿರುವ ರೈತಾಪಿ ಸಮುದಾಯ

|

Updated on: Jul 17, 2024 | 1:17 PM

ಕಳೆದ ಮುಂಗಾರುನಲ್ಲಿ ಭಾರೀ ಕೊರತೆಯ ಮಳೆ ಕಾರಣ ರಾಜ್ಯದ ಜೀವನದಿ ಕಾವೇರಿಯ ಒಡಲು ಬರಿದಾಗಿತ್ತು ಮತ್ತು ಕೆಆರ್ ಎಸ್ ಸ್ಟೋರೇಜ್ ಪ್ರಮಾಣದಷ್ಟು ನೀರು ಮಾತ್ರ ಉಳಿದಿತ್ತು. ಅದರ ಪರಿಣಾಮವಾಗಿ ಬೆಂಗಳೂರು ನಗರದಲ್ಲೂ ಕುಡಿಯುವ ನೀರಿಗಾಗಿ ಹಾಹಾಕಾರ ಸೃಷ್ಟಿಯಾಗಿತ್ತು. ಈ ವರ್ಷ ಅಂಥ ಸ್ಥಿತಿ ಎದುರಾಗಲಾರದು.

ಮಂಡ್ಯ: ಮೈಸೂರು ಮತ್ತು ಮಂಡ್ಯ ಭಾಗದ ರೈತರ ಸಂತೋಷಕ್ಕೆ ಪಾರವೇ ಇಲ್ಲ. ಅದಕ್ಕೆ ಕಾರಣ ದೃಶ್ಯಗಳಲ್ಲಿ ಕಾಣುತ್ತಿದೆ. ಕೊಡಗು ಜಿಲ್ಲೆ ಮತ್ತು ಕಾವೇರಿ ನದಿಯ ಕ್ಯಾಚ್ಮೆಂಟ್ ಪ್ರದೇಶಗಳಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿರುವುದರಿಂದ ಕೆಅರ್ ಎಸ್ ಜಲಾಶಯದಲ್ಲಿ ಒಳಹರಿವು ಹೆಚ್ಚಾಗಿದೆ. ನಮ್ಮ ಮಂಡ್ಯದ ವರದಿಗಾರ ಶ್ರೀರಂಗಪಟ್ಟಣದಲ್ಲಿ ಕೆಅರ್ ಎಸ್ ಹಿನ್ನೀರಿನ ಬಳಿಯಿಂದ ನೀಡುತ್ತಿರುವ ವರದಿಯ ಪ್ರಕಾರ ಜಲಾಶಯ 110ಅಡಿಗಳಷ್ಟು ತುಂಬಿದೆ. ನಮಗೆಲ್ಲ ತಿಳಿದಿರುವ ಹಾಗೆ ಜಲಾಶಯದ ಗರಿಷ್ಟ ಮಟ್ಟ 124.80 ಅಡಿ. ಜಲಾಶಯಕ್ಕೆ ಒಳಹರಿವು ಹೆಚ್ಚಿರುವ ಕಾರಣ ಸರ್ಕಾರ ನಾಲೆಗಳಿಗೆ ನೀರು ಹರಿಸಲಿರುವ ಸಂಗತಿ ರೈತರನ್ನು ನಿರಾಳವಾಗಿಸಿದೆ. ಕಳೆದ ಸಲ ರೈತರು ಎದುರಿಸಿದ ಸಂಕಷ್ಟು ಅಷ್ಟಿಷ್ಟಲ್ಲ. ಕುಡಿಯಲು ನೀರಿಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಅಂಥ ಸ್ಥಿತಿ ಯಾವತ್ತೂ ಎದುರಾಗದಿರಲಿ ಎಂದು ಮೊರೆಯಿಡುತ್ತಿದ್ದ ರೈತರ ಪ್ರಾರ್ಥನೆ ಫಲಿಸಿದೆ. ಮಳೆ ಹೀಗೆಯೇ ಮುಂದುವರಿದರೆ ಇನ್ನೊಂದು ವಾರದಲ್ಲಿ ಜಲಾಶಯ ಭರ್ತಿಯಾಗಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಕೆಅರ್​ಎಸ್ ಗೆ ಹೆಚ್ಚಿದ ಒಳಹರಿವು, ಮಳೆಗಾಲದ ಮೊದಲ ತಿಂಗಳಲ್ಲೇ ಜಲಾಶಯದಲ್ಲಿ 100 ಅಡಿ ನೀರು!

Follow us on