ತೊಗರಿಬೆಳೆಗೆ ರೂ. 12,500 ಬೆಂಬಲ ಬೆಲೆ ಆಗ್ರಹಿಸಿ ಕಲಬುರಗಿ ಬಂದ್, ವಾಹನ ಮತ್ತು ಜನ ಸಂಚಾರ ಸ್ತಬ್ಧ

|

Updated on: Jan 22, 2025 | 11:11 AM

ನಿಮಗೆ ನೆನಪಿರಬಹುದು, ಕಳೆದ ತಿಂಗಳು (ಡಿಸೆಂಬರ್) 24 ರಂದು ಗೃಹ ಸಚಿವ ಅಮಿತ್ ಶಾ ಅವರು ಡಾ ಬಿಅರ್ ಅಂಬೇಡ್ಕರ್ ಬಗ್ಗೆ ನೀಡಿದ ಹೇಳಿಕೆಯನ್ನು ಖಂಡಿಸಿ ದಲಿತ ಸಂಘಟನೆಗಳು ಕಲಬುರಗಿ ಬಂದ್ ಆಚರಿಸಿದ್ದವು. ಆಗಲೂ ವಾಹನ ಸಂಚಾರ ಸ್ಥಗಿತಗೊಂಡು ಜನಜೀವನದ ಮೇಲೆ ಪ್ರಭಾವಕ್ಕೊಳಗಾಗಿತ್ತು. ಬಂದ್ ಗಳ ಪ್ರವರ ಮುಂದುವರಿಯುತ್ತಲೇ ಇದೆ.

ಕಲಬುರಗಿ: ಉತ್ತರ ಕರ್ನಾಟಕದ ಪ್ರಮುಖ ನಗರವಾಗಿರುವ ಕಲಬುರಗಿಯಲ್ಲಿ ಇವತ್ತು ಮತ್ತೊಂದು ಬಂದ್. ತೊಗರಿಗೆ ₹ 12,500 ಬೆಂಬಲ ಬೆಲೆ ಆಗ್ರಹಿಸಿ ವಿವಿಧ ರೈತ ಪರ ಸಂಘಟನೆಗಳು ಕಲಬುರಗಿ ಬಂದ್​ಗೆ ಕರೆ ನೀಡಿವೆ. ನಗರದ ರಸ್ತೆಗಳೆಲ್ಲ ಜನ ಮತ್ತು ವಾಹನ ಸಂಚಾರವಿಲ್ಲದೆ ಬಿಕೋ ಅನ್ನುತ್ತಿವೆ. ನಗರದ ಕೇಂದ್ರ ಬಸ್​ ನಿಲ್ದಾಣದ ಮುಂದೆಯೇ ರೈತರು ಪ್ರತಿಭಟನೆ ಮಾಡುತ್ತಿರುವುದರಿಂದ ಬಸ್ ಗಳು ಒಳಗೆ ಹೋಗುತ್ತಿಲ್ಲ. ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಅಲ್ಲಿ ಕಾಣುತ್ತಾರೆ. ಕಲಬುರಗಿ ಬಂದ್ ನಿಮಿತ್ತ ಮಾಮೂಲೀ ಜನಜೀವನ ಅಸ್ತವ್ಯಸ್ತಗೊಂಡಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಅಮಿತ್ ಶಾ ಹೇಳಿಕೆ ಖಂಡಿಸಿ ಕಲಬುರಗಿ ಬಂದ್: ಬಸ್​ಗಳಿಲ್ಲದೆ ​​ನಿಲ್ದಾಣ ಖಾಲಿ

Published on: Jan 22, 2025 11:10 AM