ಮಗಳ ಸಾವಿಗೆ ಕಾರಣರಾದ ಅವರಿಬ್ಬರನ್ನು ಬಂಧಿಸಿ: ಪರಿಪರಿಯಾಗಿ ಬೇಡಿಕೊಂಡ ತಂದೆ

Edited By:

Updated on: Oct 31, 2025 | 5:57 PM

ಎನ್ಆರ್ ಪುರ ಮೂಲದ ಗೃಹಿಣಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಗಳ ಸಾವಿಗೆ ಅಳಿಯನ ಅಕ್ಕ ಮತ್ತು ತಾಯಿಯೇ ಮುಖ್ಯ ಕಾರಣ ಎಂದು ಮೃತಳ ತಂದೆ ಆರೋಪಿಸಿದ್ದಾರೆ. ವರದಕ್ಷಿಣೆಗಾಗಿ ಕಿರುಕುಳ ನೀಡಲಾಗುತ್ತಿತ್ತು. ದೂರು ನೀಡಿದರೂ ಪೊಲೀಸರು ಅಳಿಯನ ಅಕ್ಕ ಮತ್ತು ತಾಯಿಯನ್ನು ಬಂಧಿಸಿಲ್ಲ ಎಂದು ಹೇಳಿದ್ದಾರೆ.

ಶಿವಮೊಗ್ಗ, ಅಕ್ಟೋಬರ್​ 31: ಚಿಕ್ಕಮಗಳೂರು ಜಿಲ್ಲೆಯ ಎನ್​​ಆರ್ ಪುರ ಮೂಲದ ಗೃಹಿಣಿ ಅನುಮಾನಸ್ಪದ ರೀತಿಯಲ್ಲಿ ಸಾವು (kill) ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ತಂದೆ ಈಶ್ವರ್ ಅವರು ಮಾತನಾಡಿದ್ದು, ನನ್ನ ಮಗಳನ್ನ ಮುದ್ದಾಗಿ ಸಾಕಿದ್ದೆ. ಉತ್ತಮ ಕುಟುಂಬವೆಂದು ಮದುವೆ ಮಾಡಿ ಕೊಟ್ಟೆ. ಆದರೆ ಮದುವೆಯಾದ ಕೆಲವೇ ತಿಂಗಳಲ್ಲಿ ಮಗಳಿಗೆ ನಿರಂತರ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾರೆ. ಹೆಂಡಕ್ಕಾಗಿ ತನ್ನ ಮಗಳಿಗೆ ಹಣ ತರಲು ಪಿಡಿಸುತ್ತಿದ್ದ. ಅಳಿಯನ ಅಕ್ಕ ಮತ್ತು ತಾಯಿ ಪ್ರಮುಖರು ಅವರ ಬಂಧನವಾಗಿಲ್ಲ. ಕೂಡಲೇ ಇಬ್ಬರ ಬಂಧನ ಆಗಬೇಕು ಎಂದಿದ್ದಾರೆ.

ಮತ್ತಷ್ಟು ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.