ಕೆರೆಕೋಡಿ ಬಳಿ ಹರಿಯುತ್ತಿದ್ದ ನೀರಲ್ಲಿಳಿದು ಕೊಚ್ಚಿ ಹೋಗುತ್ತಿದ್ದ ತಂದೆ-ಮಗನ ಜೋಡಿ ಬದುಕುಳಿದಿದ್ದೇ ಪವಾಡ!
ನೀರು ನಮ್ಮ ಜೀವಜಲ ಖಂಡಿತ ಹೌದು, ಅದರೆ ಅದರೊಂದಿಗೆ ಹುಚ್ಚು ಸಾಹಸಗಳನ್ನು ಮಾಡುವ ಪ್ರಯತ್ನಕ್ಕಿಳಿದರೆ ಜೀವಕ್ಕೆ ಅಪಾಯ!
ತುಮಕೂರು: ಇದು ಹುಚ್ಚಾಟವಲ್ಲದೆ ಮತ್ತೇನೂ ಅಲ್ಲ. ತುಮಕೂರು ತಾಲ್ಲೂಕಿನ ಗೂಳೂರು ಕೆರೆಯ (Gulur Lake) ಕೋಡಿಯ ಬಳಿ ನೀರಿನಲ್ಲಿ ಆಡಲು ಹೋದ ತಂದೆ ಮತ್ತು ಮಗ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿ ಹೋದ ಪ್ರಸಂಗ ಮೊಬೈಲ್ ಕೆಮೆರಾವೊಂದರಲ್ಲಿ (mobile camera) ಸೆರೆಯಾಗಿದೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಅವರಿಬ್ಬರನ್ನು ರಕ್ಷಿಸಿ (rescued) ಸುರಕ್ಷಿತವಾಗಿ ಕೆರೆದಡಕ್ಕೆ ತರಲಾಗಿದೆ. ನೀರು ನಮ್ಮ ಜೀವಜಲ ಖಂಡಿತ ಹೌದು, ಅದರೆ ಅದರೊಂದಿಗೆ ಹುಚ್ಚು ಸಾಹಸಗಳನ್ನು ಮಾಡುವ ಪ್ರಯತ್ನಕ್ಕಿಳಿದರೆ ಜೀವಕ್ಕೆ ಅಪಾಯ!