ನನ್ನ ಜನ್ಮದಿನಾಂಕ ನಮ್ಮಪ್ಪ-ಅಮ್ಮನಿಗೆ ಗೊತ್ತು, ಬಿಜೆಪಿಯವರಿಗೇನು ಗೊತ್ತು? ಸಿದ್ದರಾಮಯ್ಯ
ಕಾರ್ಯಕ್ರಮದ ಯಶಸ್ಸು ಕಂಡು ಅವರ ಉದರಗಳಲ್ಲಿ ಬೆಂಕಿ ಬಿದ್ದಿದೆ, ಅದಕ್ಕೇ ಇಂಥ ಮಾತುಗಳನ್ನು ಶುರುವಿಟ್ಟುಕೊಂಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಹೇಳಿದರು.
Chikkaballapur: ತಮ್ಮ 75 ನೇ ದಿನಾಚರಣೆ ಕಂಡ ಭರ್ಜರಿ ಯಶಸ್ಸಿನಿಂದ ಬಿಜೆಪಿಯವರಿಗೆ ಹೊಟ್ಟೆಯುರಿ ಹುಟ್ಟಿಕೊಂಡಿದೆ ಹಾಗಾಗೇ ಅವರು ತಮ್ಮ ಜನ್ಮದಿನಾಂಕದ ಬಗ್ಗೆ ತಕರಾರು ಶುರುಮಾಡಿದ್ದಾರೆ ಎಂದು ಸಿದ್ದರಾಮಯ್ಯ (Siddaramaiah) ಹೇಳಿದರು. ಚಿಕ್ಕಬಳ್ಳಾಪುರದಲ್ಲಿ ಟಿವಿ9 ವರದಿಗಾರನೊಂದಿಗೆ ಮಾತಾಡಿದ ಸಿದ್ದರಾಮಯ್ಯನವರು ನನ್ನ ಜನ್ಮದಿನಾಂಕ (date of birth) ನನಗೆ ಗೊತ್ತು, ನನ್ನಪ್ಪ-ನನ್ನಮ್ಮನಿಗೆ ಗೊತ್ತು. ಬಿಜೆಪಿ ನಾಯಕರಿಗೆ ಹೇಗೆ ಗೊತ್ತಿರಲು ಸಾಧ್ಯ? ಕಾರ್ಯಕ್ರಮದ ಯಶಸ್ಸು ಕಂಡು ಅವರ ಉದರಗಳಲ್ಲಿ ಬೆಂಕಿ ಬಿದ್ದಿದೆ, ಅದಕ್ಕೇ ಇಂಥ ಮಾತುಗಳನ್ನು ಶುರುವಿಟ್ಟುಕೊಂಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಹೇಳಿದರು.
Latest Videos