Video: ಮೃತ್ಯುವಿನ ದವಡೆಯಿಂದ ಮಗುವನ್ನು ಕಾಪಾಡಿದ ತಂದೆ, ಚಲಿಸುವ ರೈಲು-ಪ್ಲಾಟ್‌ಫಾರ್ಮ್ ನಡುವೆ ಬಿದ್ದ ಮಗುವಿನ ರಕ್ಷಣೆ

Updated on: Apr 30, 2026 | 7:51 AM

ವ್ಯಕ್ತಿಯೊಬ್ಬರು ಚಲಿಸುತ್ತಿರುವ ರೈಲು-ಪ್ಲಾಟ್​ಫಾರ್ಮ್​ ಮಧ್ಯೆ ಬಿದ್ದ ತಮ್ಮ ಮಗುವನ್ನು ರಕ್ಷಿಸಿ ಹೀರೋ ಎನಿಸಿಕೊಂಡಿದ್ದಾರೆ. ಬಾಂಗ್ಲಾದೇಶದ ಕಿಶೋರ್‌ಗಂಜ್‌ನ ಭೈರಬ್ ರೈಲು ನಿಲ್ದಾಣದಲ್ಲಿ ಏಪ್ರಿಲ್ 28 ರಂದು ಮಧ್ಯಾಹ್ನ 3.30 ರ ಸುಮಾರಿಗೆ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಢಾಕಾಗೆ ಹೋಗುವ ಟೈಟಾಸ್ ಕಮ್ಯೂಟರ್ ರೈಲು ನಿಲ್ದಾಣದಿಂದ ಚಲಿಸಲು ಪ್ರಾರಂಭಿಸಿದಾಗ, ಇಳಿಯಲು ಆತುರಪಟ್ಟ ತಂದೆಯ ಕೈಯಿಂದ ಒಂದು ವರ್ಷದ ಮಗು ಜಾರಿ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಕಿರಿದಾದ ಅಂತರಕ್ಕೆ ಬಿದ್ದಿತ್ತು.

ಬಾಂಗ್ಲಾದೇಶ,ಏಪ್ರಿಲ್ 30: ವ್ಯಕ್ತಿಯೊಬ್ಬರು ಚಲಿಸುತ್ತಿರುವ ರೈಲು-ಪ್ಲಾಟ್​ಫಾರ್ಮ್​ ಮಧ್ಯೆ ಬಿದ್ದ ತಮ್ಮ ಮಗುವನ್ನು ರಕ್ಷಿಸಿ ಹೀರೋ ಎನಿಸಿಕೊಂಡಿದ್ದಾರೆ. ಬಾಂಗ್ಲಾದೇಶದ ಕಿಶೋರ್‌ಗಂಜ್‌ನ ಭೈರಬ್ ರೈಲು ನಿಲ್ದಾಣದಲ್ಲಿ ಏಪ್ರಿಲ್ 28 ರಂದು ಮಧ್ಯಾಹ್ನ 3.30 ರ ಸುಮಾರಿಗೆ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಢಾಕಾಗೆ ಹೋಗುವ ಟೈಟಾಸ್ ಕಮ್ಯೂಟರ್ ರೈಲು ನಿಲ್ದಾಣದಿಂದ ಚಲಿಸಲು ಪ್ರಾರಂಭಿಸಿದಾಗ, ಇಳಿಯಲು ಆತುರಪಟ್ಟ ತಂದೆಯ ಕೈಯಿಂದ ಒಂದು ವರ್ಷದ ಮಗು ಜಾರಿ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಕಿರಿದಾದ ಅಂತರಕ್ಕೆ ಬಿದ್ದಿತ್ತು.

ಕ್ಷಣಾರ್ಧವೂ ವಿಳಂಬ ಮಾಡದ ತಂದೆ, ತನ್ನ ಮಗುವನ್ನು ರಕ್ಷಿಸಲು ಚಲಿಸುವ ರೈಲಿನ ಕೆಳಗೆ ಹಾರಿದರು. ಮಗುವನ್ನು ಗಟ್ಟಿಯಾಗಿ ಅಪ್ಪಿಕೊಂಡ ಅವರು ಪ್ಲಾಟ್‌ಫಾರ್ಮ್‌ನ ಗೋಡೆಗೆ ಒರಗಿ ಮಲಗಿದರು. ಚಲಿಸುವ ರೈಲಿನ ಬೋಗಿಗಳು ಅವರ ಮೇಲೆಯೇ ಹಾದುಹೋದರೂ, ತಂದೆಯ ಸಮಯಪ್ರಜ್ಞೆಯಿಂದ ಇಬ್ಬರೂ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದರು. ರೈಲು ಸಂಪೂರ್ಣವಾಗಿ ಹಾದುಹೋದ ನಂತರ, ಅಲ್ಲಿದ್ದ ಜನರು ಮತ್ತು ಮಗುವಿನ ತಾಯಿ ಹಳಿಗಳ ಮೇಲೆ ಇಳಿದು ಮಗುವನ್ನು ಸುರಕ್ಷಿತವಾಗಿ ಮೇಲೆತ್ತಿಕೊಂಡರು. ಮಗು ಗಾಯಗಳಿಲ್ಲದೆ ಪಾರಾಗಿದ್ದು, ಈ ಎದೆನಡುಗಿಸುವ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Apr 30, 2026 07:51 AM
Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More