ಫಯಾಜ್ ನನ್ನು ಜೈಲಿಂದ ಹೊರತಂದು ಜನರ ಕೈಗೆ ಒಪ್ಪಿಸಬೇಕು: ಗೀತಾ ಹಿರೇಮಠ, ನೇಹಾ ಹಿರೇಮಠ ತಾಯಿ
ನೇಹಾ ಓದುತ್ತಿದ್ದ ಕಾಲೇಜಲ್ಲಿ ಹೆಣ್ಣುಮಕ್ಕಳಿಗೆ ಯಾವುದೇ ರೀತಿಯ ಭದ್ರತೆ ಇಲ್ಲ, ಅದಕ್ಕೆ ಮೂರು ಗೇಟ್ ಗಳಿವೆ, ಆಗುಂತಕರು ಒಳಬಂದರೂ ಯಾರೂ ಪ್ರಶ್ನಿಸುವುದಿಲ್ಲ ಎಂದು ಗೀತಾ ಹೇಳಿದರು. ಫಯಾಜ್ ನನ್ನು ಜೈಲಲ್ಲಿಟ್ಟರೆ ಯಾವುದೇ ಪ್ರಯೋಜನವಿಲ್ಲ, ನೇಹಾಳನ್ನು ಕೊಂದ ಹಾಗೆಯೇ ಅವನನ್ನೂ ಕೊಲ್ಲಬೇಕು, ಇಲ್ಲವಾದರೆ ಜನರ ಕೈಗೆ ಅವನನ್ನು ಒಪ್ಪಿಸಬೇಕು ಎಂದು ಗೀತಾ ಹಿರೇಮಥ ಕೋಪದಲ್ಲಿ ಹೇಳಿದರು.
ಹುಬ್ಬಳ್ಳಿ: ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ ನೇಹಾ ಹಿರೇಮಠ ಅವರು ತಾಯಿ ಗೀತಾ ಹಿರೇಮಠ (Geetha Hiremath) ಅವರು ಫಯಾಜ್ (Fayaz) ತಮ್ಮ ಮಗಳನ್ನು ಮದುವೆಯಾಗುವ ಪ್ರಸ್ತಾವನೆ (marriage proposal) ಮಾಡಿದ್ದು ಗೊತ್ತಿಲ್ಲ ಆಕೆ ಯಾವತ್ತೂ ತನಗೆ ಆ ವಿಷಯದ ಬಗ್ಗೆ ಹೇಳಿರಲಿಲ್ಲ ಎಂದರು. ಫಯಾಜ್ ಮತ್ತು ನೇಹಾ ಜೊತೆಗಿರುವ ಫೋಟೋಗಳು ವೈರಲ್ ಅಗುತ್ತಿರುವ ಬಗ್ಗೆ ಮಾತಾಡಿದ ಗೀತಾ, ಅವೆಲ್ಲ ಎಡಿಟ್ ಮಾಡಿರುವ ಫೋಟೋಗಳು, ಈಗ ವಿಜ್ಞಾನ ಬಹಳ ಮುಂದುವರಿದಿದೆ, ಜನ ಕಂಪ್ಯೂಟರ್ ಗಳಲ್ಲಿ ಏನೆಲ್ಲ ಮಾಡುತ್ತಾರೆ, ಆದರೆ ತನ್ನ ಮಗಳು ಅವನೊಂದಿಗೆ ಫೋಟೋ ತೆಗೆಸಿಕೊಳ್ಳುವ ಕೆಲಸ ಮಾಡಿಲ್ಲ ಎಂದರು. ಅವರಿಬ್ಬರು ಒಂದೇ ಕಾಲೇಜಲ್ಲಿ ಓದುತ್ತಿದ್ದರು ಪ್ರಾಯಶಃ ಕ್ಲಾಸ್ ಮೇಟ್ಸ್ ಸಹ ಆಗಿದ್ದರೇನೋ? ಎಂದ ಅವರು ತಮ್ಮ ಮಗಳು ಬುದ್ಧಿವಂತಳಾಗಿದ್ದಳು ಮತ್ತು ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವ ಕ್ಷಮತೆ ಅವಳಲ್ಲಿತ್ತು ಎಂದರು.
ನೇಹಾ ಓದುತ್ತಿದ್ದ ಕಾಲೇಜಲ್ಲಿ ಹೆಣ್ಣುಮಕ್ಕಳಿಗೆ ಯಾವುದೇ ರೀತಿಯ ಭದ್ರತೆ ಇಲ್ಲ, ಅದಕ್ಕೆ ಮೂರು ಗೇಟ್ ಗಳಿವೆ, ಆಗುಂತಕರು ಒಳಬಂದರೂ ಯಾರೂ ಪ್ರಶ್ನಿಸುವುದಿಲ್ಲ ಎಂದು ಗೀತಾ ಹೇಳಿದರು. ಫಯಾಜ್ ನನ್ನು ಜೈಲಲ್ಲಿಟ್ಟರೆ ಯಾವುದೇ ಪ್ರಯೋಜನವಿಲ್ಲ, ನೇಹಾಳನ್ನು ಕೊಂದ ಹಾಗೆಯೇ ಅವನನ್ನೂ ಕೊಲ್ಲಬೇಕು, ಇಲ್ಲವಾದರೆ ಜನರ ಕೈಗೆ ಅವನನ್ನು ಒಪ್ಪಿಸಬೇಕು ಎಂದು ಗೀತಾ ಹಿರೇಮಥ ಕೋಪದಲ್ಲಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನನ್ನ ಹೇಳಿಕೆಯಿಂದ ನೇಹಾ ತಂದೆತಾಯಿಗಳಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ: ಜಿ ಪರಮೇಶ್ವರ್, ಗೃಹ ಸಚಿವ