AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fifa World Cup 2026: ಫಿಫಾ ವಿಶ್ವಕಪ್ ಗ್ರೂಪ್ ಪ್ರಕಟ

Fifa World Cup 2026: ಫಿಫಾ ವಿಶ್ವಕಪ್ ಗ್ರೂಪ್ ಪ್ರಕಟ

ಝಾಹಿರ್ ಯೂಸುಫ್
|

Updated on:Dec 06, 2025 | 9:04 AM

Share

fifa world cup 2026 groups: ಬಹುನಿರೀಕ್ಷಿತ ಫಿಫಾ ಫುಟ್​ಬಾಲ್ ವಿಶ್ವಕಪ್ ಟೂರ್ನಿಯ ಗ್ರೂಪ್​ಗಳನ್ನು ಪ್ರಕಟಿಸಲಾಗಿದೆ. 48 ತಂಡಗಳನ್ನು ಈ ಬಾರಿ 12 ಗುಂಪುಗಳಾಗಿ ವಿಂಗಡಿಸಲಾಗಿದೆ. ಅದರಂತೆ ಒಂದು ಗ್ರೂಪ್​ನಲ್ಲಿ 4 ತಂಡಗಳು ಕಾಣಿಸಿಕೊಳ್ಳಲಿದೆ. ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ಜಂಟಿಯಾಗಿ ಆಯೋಜಿಸಲಿರುವ ಈ ವಿಶ್ವಕಪ್​​ನ ಗ್ರೂಪ್​ ಪಟ್ಟಿಗಳನ್ನು ಡ್ರಾ ಮಾಡಿದ್ದು ಯುಎಸ್​ಎ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಂಬುದು ವಿಶೇಷ.

ಬಹುನಿರೀಕ್ಷಿತ ಫಿಫಾ ಫುಟ್​ಬಾಲ್ ವಿಶ್ವಕಪ್ ಟೂರ್ನಿಯ ಗ್ರೂಪ್​ಗಳನ್ನು ಪ್ರಕಟಿಸಲಾಗಿದೆ. 48 ತಂಡಗಳನ್ನು ಈ ಬಾರಿ 12 ಗುಂಪುಗಳಾಗಿ ವಿಂಗಡಿಸಲಾಗಿದೆ. ಅದರಂತೆ ಒಂದು ಗ್ರೂಪ್​ನಲ್ಲಿ 4 ತಂಡಗಳು ಕಾಣಿಸಿಕೊಳ್ಳಲಿದೆ. ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ಜಂಟಿಯಾಗಿ ಆಯೋಜಿಸಲಿರುವ ಈ ವಿಶ್ವಕಪ್​​ನ ಗ್ರೂಪ್​ ಪಟ್ಟಿಗಳ ಡ್ರಾ ಕಾರ್ಯಕ್ರಮದಲ್ಲಿ ಯುಎಸ್​ಎ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಕಾಣಿಸಿಕೊಂಡಿದ್ದು ವಿಶೇಷ. ಅದರಂತೆ ಜೂನ್ 11 ರಿಂದ ಶುರುವಾಗಲಿರುವ 2026ರ ವಿಶ್ವಕಪ್​ನಲ್ಲಿ ಯಾವ ತಂಡ ಯಾವ ಗ್ರೂಪ್​ನಲ್ಲಿ ಕಣಕ್ಕಿಳಿಯಲಿದೆ ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

ಫಿಫಾ ವಿಶ್ವಕಪ್ 2026 ಗ್ರೂಪ್:

  • ಗ್ರೂಪ್​ A: ಮೆಕ್ಸಿಕೊ, ಸೌತ್ ಕೊರಿಯಾ, ಸೌತ್ ಆಫ್ರಿಕಾ, ಯುರೋಪಿಯನ್ ಪ್ಲೇಆಫ್ ಡಿ ವಿಜೇತ.

  • ಗ್ರೂಪ್​ B: ಕೆನಡಾ, ಸ್ವಿಟ್ಜರ್ಲೆಂಡ್, ಕತಾರ್, ಯುರೋಪಿಯನ್ ಪ್ಲೇಆಫ್ ಎ ವಿಜೇತ.

  • ಗ್ರೂಪ್​ C: ಬ್ರೆಝಿಲ್, ಮೊರಾಕೊ, ಸ್ಕಾಟ್ಲೆಂಡ್, ಹೈಟಿ

  • ಗ್ರೂಪ್​ D: ಯುಎಸ್ಎ, ಆಸ್ಟ್ರೇಲಿಯಾ, ಪರಾಗ್ವೆ, ಯುರೋಪಿಯನ್ ಪ್ಲೇಆಫ್ ಸಿ ವಿಜೇತ

  • ಗ್ರೂಪ್​ E: ಜರ್ಮನಿ, ಈಕ್ವೆಡಾರ್, ಐವರಿ ಕೋಸ್ಟ್, ಕುರಾಕಾವೊ

  • ಗ್ರೂಪ್​ F: ನೆದರ್ಲ್ಯಾಂಡ್ಸ್, ಜಪಾನ್, ಟುನೀಶಿಯಾ, ಯುರೋಪಿಯನ್ ಪ್ಲೇಆಫ್ ಬಿ ವಿಜೇತ.

  • ಗ್ರೂಪ್​ G: ಬೆಲ್ಜಿಯಂ, ಇರಾನ್, ಈಜಿಪ್ಟ್, ನ್ಯೂಝಿಲೆಂಡ್

  • ಗ್ರೂಪ್​ H: ಸ್ಪೇನ್, ಉರುಗ್ವೆ, ಸೌದಿ ಅರೇಬಿಯಾ, ಕೇಪ್ ವರ್ಡೆ

  • ಗ್ರೂಪ್​ I: ಫ್ರಾನ್ಸ್, ಸೆನೆಗಲ್, ನಾರ್ವೆ, ಫಿಫಾ ಪ್ಲೇಆಫ್ 2 ವಿಜೇತರು.

  • ಗ್ರೂಪ್​ J: ಅರ್ಜೆಂಟೀನಾ, ಆಸ್ಟ್ರಿಯಾ, ಅಲ್ಜೀರಿಯಾ, ಜೋರ್ಡಾನ್

  • ಗ್ರೂಪ್​ K: ಪೋರ್ಚುಗಲ್, ಕೊಲಂಬಿಯಾ, ಉಜ್ಬೇಕಿಸ್ತಾನ್, ಫಿಫಾ ಪ್ಲೇಆಫ್ 1 ವಿಜೇತ.

  • ಗ್ರೂಪ್​ L: ಇಂಗ್ಲೆಂಡ್, ಕ್ರೊಯೇಷಿಯಾ, ಪನಾಮ, ಘಾನಾ.

Published on: Dec 06, 2025 08:59 AM