ನಡುರಸ್ತೆಯಲ್ಲೇ ಕೋಲು ಹಿಡಿದು ಮಹಿಳೆಯರ ಹೊಡೆದಾಟ; ಸುತ್ತಲಿನ ಜನ ಕಂಗಾಲು
ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ಇಬ್ಬರು ಮಹಿಳೆಯರು ಒಬ್ಬರಿಗೊಬ್ಬರು ಕೋಲುಗಳಿಂದ ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಘಟನೆಯ ವೀಡಿಯೋದಲ್ಲಿ ಜನನಿಬಿಡ ಬೀದಿಯಲ್ಲಿ ಸುಮಾರು 8ರಿಂದ 10 ಮಹಿಳೆಯರು ತೀವ್ರ ಜಗಳದಲ್ಲಿ ತೊಡಗಿರುವುದನ್ನು ನೋಡಬಹುದು.
ನೊಯ್ಡಾ: ಉತ್ತರ ಪ್ರದೇಶದ ರಸ್ತೆಯಲ್ಲೇ ಮಹಿಳೆಯರು ಒಬ್ಬರಿಗೊಬ್ಬರು ಕೋಲುಗಳಿಂದ ಹೊಡೆದಾಡಿಕೊಂಡಿದ್ದಾರೆ. ಗಾಯಗಳಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗುವವರೆಗೂ ಸ್ಥಳೀಯರು ಸುಮ್ಮನೇ ಇದ್ದರು. ಇಂದು ಉತ್ತರ ಪ್ರದೇಶದ ದೋಘಾಟ್‌ನಲ್ಲಿ ಕ್ಷುಲ್ಲಕ ವಿಷಯಕ್ಕೆ ನಡೆದ ಗಲಾಟೆ ಘರ್ಷಣೆಗೆ ತಿರುಗಿತು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಘಟನೆಯ ವೀಡಿಯೋದಲ್ಲಿ ಜನನಿಬಿಡ ಬೀದಿಯಲ್ಲಿ ಸುಮಾರು ಎಂಟರಿಂದ ಹತ್ತು ಮಹಿಳೆಯರು ತೀವ್ರ ಜಗಳದಲ್ಲಿ ತೊಡಗಿರುವುದನ್ನು ನೋಡಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos