ಚುನಾವಣೆಯಲ್ಲಿ ಸ್ಪರ್ಧೆ ಆರೋಗ್ಯಕರವಾಗಿರಬೇಕು, ಮತದಾರನ ಮನಸ್ಸನ್ನು ಕಲುಷಿತಗೊಳಿಸಬಾರದು: ಡಾ ಸಿ ಎನ್ ಮಂಜುನಾಥ್

|

Updated on: Mar 20, 2024 | 6:06 PM

ಚುನಾವಣೆಯಲ್ಲಿ ಸ್ಪರ್ಧೆ ಆರೋಗ್ಯಕರವಾಗಿರಬೇಕು, ಮತದಾರರ ಮನಸ್ಸನ್ನು ಕರಪ್ಟ್ ಮಾಡಬಾರದು, ಯಾರಿಗೆ ಮತ ಚಲಾಯಿಸಬೇಕು ಯಾವ ಪಕ್ಷ ತನಗೆ ಸರಿ ಅನ್ನೋದನ್ನು ಮತದಾರನ ವಿವೇಚನೆಗೆ ಬಿಡಬೇಕು ಆಗಲೇ ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಂದು ಅರ್ಥಬರುತ್ತದೆ ಎಂದು ಡಾ ಮಂಜುನಾಥ್ ಹೇಳಿದರು.

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ ಸಿಎನ್ ಮಂಜುನಾಥ್ (Dr CN Manjunath) ಅವರ ಮಾತು ಕೇಳುತ್ತಿದ್ದರೆ ಅದ್ಯಾಕೆ ರಾಜಕೀಯಕ್ಕೆ ಬಂದರೋ ಅನಿಸದಿರದು. ಅವರೊಬ್ಬ ಅತ್ಯಂತ ಪ್ರಾಮಾಣಿಕ, ಮಾನವೀಯ ಕಳಕಳಿಯುಳ್ಳ, ಹೃದಯವಂತ ಹ್ರದ್ರೋಗ ತಜ್ಞ (cardiologist). ಅವರಿಗೆ ರಾಜಕೀಯ ವರಸೆ, ಅಲ್ಲಿರುವ ಕೊಳಚೆ ಮೊದಲಾದವುಗಳ ಬಗ್ಗೆ ಗೊತ್ತಿಲ್ಲ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅವರ ಎದುರಾಳಿ ಡಿಕೆ ಸುರೇಶ್ (DK Suresh) ಕುಕ್ಕರ್ ಗಳನ್ನು ಹಂಚಿರುವ ಬಗ್ಗೆ ಹಬ್ಬಿರುವ ಸಂಗತಿ ತಮಗೆ ಗಮನಕ್ಕೆ ಬಂದಿದೆಯಾ ಅಂತ ಮಾಧ್ಯಮ ಪ್ರತಿನಿಧಿಗಳು ಡಾಕ್ಟರನ್ನು ಕೇಳಿದರೆ, ಅದೇ ಮುಗ್ಧ, ನಿಷ್ಕಲ್ಮಶ ನಗುವಿನೊಂದಿಗೆ ನಿಮ್ಮ ಗಮನಕ್ಕೆ ಬಂದಿದೆಯಲ್ಲ ಅಷ್ಟು ಸಾಕು ಎನ್ನುತ್ತಾರೆ. ನಿನ್ನೆ ಕುಮಾರಸ್ವಾಮಿಯವರು ಒಂದು ಸುದೀರ್ಘ ಪ್ರೆಸ್ ಮೀಟ್ ಮಾಡಿ ಎಲ್ಲ ವಿಷಯವನ್ನು ಬಹಿರಂಗ ಮಾಡಿದ್ದಾರೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಹೇಳುತ್ತಾರೆ. ಅದರೆ ತಾನು ಹೇಳೋದೇನೆಂದರೆ ಚುನಾವಣೆಯಲ್ಲಿ ಸ್ಪರ್ಧೆ ಆರೋಗ್ಯಕರವಾಗಿರಬೇಕು, ಮತದಾರರ ಮನಸ್ಸನ್ನು ಕರಪ್ಟ್ ಮಾಡಬಾರದು, ಯಾರಿಗೆ ಮತ ಚಲಾಯಿಸಬೇಕು ಯಾವ ಪಕ್ಷ ತನಗೆ ಸರಿ ಅನ್ನೋದನ್ನು ಮತದಾರನ ವಿವೇಚನೆಗೆ ಬಿಡಬೇಕು ಆಗಲೇ ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಂದು ಅರ್ಥಬರುತ್ತದೆ ಎಂದು ಡಾ ಮಂಜುನಾಥ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ದೇವೇಗೌಡ, ಮೋದಿ ಸಾಧನೆಗಳ ಮೇಲೆ ಚುನಾವಣೆ: ಬಿಜೆಪಿ ಅಭ್ಯರ್ಥಿ ಸಿಎನ್ ಮಂಜುನಾಥ್

Published on: Mar 20, 2024 06:02 PM