ಹಾವೇರಿ: ನಡುಗಡ್ಡೆಯಂತಾದ ದೇವಸ್ಥಾನವೊಂದರಲ್ಲಿ ಸಿಲುಕಿದ್ದ ಭಕ್ತರನ್ನು ರಕ್ಷಿಸಿದ ಅಗ್ನಿಶಾಮಕ ದಳ ಸಿಬ್ಬಂದಿ
ಬಾಜೀರಾಬ್ ಹಳ್ಳದಲ್ಲಿ ನೀರು ಯಾವಮಟ್ಟಿಗೆ ಹರಿಯುತ್ತಿದೆ ಎಂದರೆ ಭಕ್ತರು ರಾತ್ರಿ ಉಳಿದುಕೊಂಡಿದ್ದ ರಾಮಲಿಂಗೇಶ್ವರ ದೇವಸ್ಥಾನವು ನಡುಗಡ್ಡೆಯಾಗಿ ಮಾರ್ಪಟ್ಟಿದೆ. ಭಕ್ತರಿಗೆ ಹಳ್ಳ ಉಕ್ಕಿದ್ದು ಬೆಳಗ್ಗೆಯಷ್ಟೇ ಗೊತ್ತಾಗಿದೆ. ನಮ್ಮ ಹಾವೇರಿ ವರದಿಗಾರ ಭಕ್ತರು ಮತ್ತು ಆಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಮಾತಾಡಿದ್ದಾರೆ.
ಹಾವೇರಿ: ಜಿಲ್ಲೆಯಲ್ಲಿ ಕಳೆದ ರಾತ್ರಿ ಸುರಿದ ಮಳೆಯಿಂದ ಸವಣೂರು ತಾಲ್ಲೂಕಿನ ಬಹಾದೂರ್ಪುರ ಗ್ರಾಮದಲ್ಲಿ ಹರಿಯುವ ಬಾಜೀರಾಬ್ ಹಳ್ಳವು ಉಕ್ಕಿ ಹರಿದ ಕಾರಣ ಜಿಲ್ಲೆಯ ಬೇರೆಬೇರೆ ಊರುಗಳಿಂದ ಪಂಢಾರಾಪುರಕ್ಕೆ ಪಾದಯಾತ್ರೆಯ ಮೂಲಕ ಹೊರಟಿದ್ದ 28 ಜನ ಭಕ್ತರು ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಸಿಲುಕಿಕೊಂಡಿದ್ದಾರೆ. ಬಹಾದೂರ್ಪುರ ಗ್ರಾಮಸ್ಥರು ಭಕ್ತರು ಸಿಲುಕಿಕೊಂಡಿರುವುದನ್ನು ಕಂಡು ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಮಾಹಿತಿ ರವಾನಿಸಿದ್ದಾರೆ. ಬೋಟ್ ಮೂಲಕ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿಯು ಎಲ್ಲ ಭಕ್ತರನ್ನು ರಕ್ಷಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಳೆ ಅವಾಂತರ: ಬೆಂಗಳೂರಿನ ರಸ್ತೆಗಳಲ್ಲಿ ನಿಂತ ನೀರು, ವಾಹನ ಸಂಚಾರಕ್ಕೆ ಅಡ್ಡಿ