ಗುರುನಾನಕ್ ಜಯಂತಿ ಪ್ರಯುಕ್ತ ಗೋಲ್ಡನ್ ಟೆಂಪಲ್​ ಮೇಲಿನ ಆಗಸದಲ್ಲಿ ಪಟಾಕಿಗಳ ಚಿತ್ತಾರ

Updated on: Nov 05, 2025 | 7:43 PM

15ನೇ ಶತಮಾನದಲ್ಲಿ ಸಿಖ್ ಧರ್ಮವನ್ನು ಸ್ಥಾಪಿಸಿದ ಗುರುನಾನಕ್ ದೇವ್ ಅವರ ಜನ್ಮ ದಿನಾಚರಣೆಯನ್ನು ಗುರುನಾನಕ್ ಜಯಂತಿಯಾಗಿ ಆಚರಿಸಲಾಗುತ್ತದೆ. ಪಂಜಾಬ್, ಹರಿಯಾಣ, ರಾಜಸ್ಥಾನ, ದೆಹಲಿ, ಉತ್ತರ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಗುರುನಾನಕ್ ಜಯಂತಿ ಸಾರ್ವಜನಿಕ ರಜಾದಿನವಾಗಿದೆ.

ಅಮೃತಸರ, ನವೆಂಬರ್ 5: ಗುರುನಾನಕ್ ಜಯಂತಿ (Guru Nanak Jayanti) ಹಿನ್ನೆಲೆಯಲ್ಲಿ ಇಂದು ಅಮೃತಸರದ ಗೋಲ್ಡನ್ ಟೆಂಪಲ್​ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಅವರ ಪತ್ನಿ ಕೂಡ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ್ದರು. ಇಂದು ರಾತ್ರಿ ಗೋಲ್ಡನ್ ಟೆಂಪಲ್​ನ ಸುತ್ತ ಪಟಾಕಿಗಳನ್ನು ಸಿಡಿಸಲಾಗಿತ್ತು. ಇದರಿಂದ ಆಗಸೆದಲ್ಲಿ ಪಟಾಕಿಗಳ ಚಿತ್ತಾರ ಕಂಡುಬಂದಿತು.

15ನೇ ಶತಮಾನದಲ್ಲಿ ಸಿಖ್ ಧರ್ಮವನ್ನು ಸ್ಥಾಪಿಸಿದ ಗುರುನಾನಕ್ ದೇವ್ ಅವರ ಜನ್ಮ ದಿನಾಚರಣೆಯನ್ನು ಗುರುನಾನಕ್ ಜಯಂತಿಯಾಗಿ ಆಚರಿಸಲಾಗುತ್ತದೆ. ಪಂಜಾಬ್, ಹರಿಯಾಣ, ರಾಜಸ್ಥಾನ, ದೆಹಲಿ, ಉತ್ತರ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಗುರುನಾನಕ್ ಜಯಂತಿ ಸಾರ್ವಜನಿಕ ರಜಾದಿನವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ