ಶೂಟೌಟ್​​ನಲ್ಲಿ ಬಚಾವ್​ ಆಗಿದ್ದೇಗೆ? ರಿಕ್ಕಿ ರೈ ಬಿಚ್ಚಿಟ್ಟ ಸ್ಫೋಟಕ ಸತ್ಯ

Updated on: Jun 03, 2025 | 6:54 PM

ತಮ್ಮ ಮೇಲೆ ನಡೆದ ಶೂಟ್​ಔಟ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಅವರು ಪೊಲೀಸರು ವಿಚಾರಣೆಗೆ ಹಾಜರಾದರು. ಕಾರಿನ ಮೇಲೆ ನಡೆದ ಗುಂಡಿನ ದಾಳಿಯಿಂದ ಗಾಯಗೊಂಡ ರಿಕ್ಕಿ ರೈ, ನ್ಯಾಯಕ್ಕಾಗಿ ಹೋರಾಡುವುದಾಗಿ ಹೇಳಿದ್ದಾರೆ. ಪೊಲೀಸರು ಇನ್ನೂ ಕೆಲವು ಶಂಕಿತರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ತಮ್ಮ ಮೇಲೆ ನಡೆದ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಬಿಡದಿ ಪೊಲೀಸ್​ ಠಾಣೆಯಲ್ಲಿ ಸತತ ನಾಲ್ಕು ಗಂಟೆಗಳ ಕಾಲ ವಿಚಾರಣೆ ಎದುರಿಸಿದರು. ಪ್ರಕರಣ ಕುರಿತು ಪೊಲೀಸರು ‌ಸಂಪೂರ್ಣ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ರಾಮನಗರ ಡಿವೈಎಸ್​​​ಪಿ ಶ್ರೀನಿವಾಸ್ ಹಾಗೂ ಬಿಡದಿ ಇನ್ಸ್‌ಪೆಕ್ಟರ್ ಶಂಕರ್ ನಾಯಕ್ ನೇತೃತ್ವದಲ್ಲಿ ವಿಚಾರಣೆ ನಡೆಯಿತು.

ವಿಚಾರಣೆ ಎದುರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಿಕ್ಕಿ ರೈ, ಏಪ್ರಿಲ್​​ 18ರಂದು ಮನೆಯಿಂದ ಹೊರ ಬರುವಾಗ ನನ್ನ ಮೇಲೆ ಫೈರಿಂಗ್​ ಮಾಡಿದರು. ಕಾರಿನ ಮೇಲೆ ಫೈರಿಂಗ್ ಆಗಿ ನನ್ನ ಮೂಗು ಕಟ್ ಆಗಿದೆ. ದಾಳಿಯಲ್ಲಿ ನನ್ನ ಕೈಗೂ ಸಹ ಗುಂಡು ತಗುಲಿತ್ತು. ದೇವರ ದಯೆಯಿಂದ ಏನೂ ಆಗಿಲ್ಲ, ಸ್ಟ್ರಾಂಗ್ ಆಗಿ ಇದ್ದೇನೆ. ಪ್ರಕರಣದಲ್ಲಿ ಇನ್ನೂ ಕೆಲವರು ಶಂಕಿತರಿದ್ದಾರೆ. ಅದರ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಕೊಡಲಾಗಿದೆ. ತನಿಖೆ ನಡೆಯುತ್ತಿದೆ, ಹೆಚ್ಚು ಏನೂ ಹೇಳಲು ಸಾಧ್ಯವಿಲ್ಲ. ನನಗೆ ನ್ಯಾಯ ಸಿಗಬೇಕು, ಇಲ್ಲದಿದ್ರೆ ನಾವೇ ಹುಡುಕ್ತೇವೆ ಎಂದು ಹೇಳಿದರು.