Assembly Session: ವಿಷಯದ ಸಮಗ್ರ ಅಧ್ಯಯನ ಮಾಡಿ ಸದನದಲ್ಲಿ ಪ್ರಶ್ನೆ ಕೇಳಿದ ಜಿಡಿ ಹರೀಶ್ ಗೌಡ ತಂದೆ ಜಿಟಿ ದೇವೇಗೌಡರಲ್ಲಿ ಹೆಮ್ಮೆ ಮೂಡಿಸಿದರು!
ಮೊದಲ ಬಾರಿಗೆ ಶಾಸಕನಾಗಿ ವಿಧಾನ ಸಬೆ ಪ್ರವೇಶಿಸಿದರೂ ಹರೀಶ್ ಗೌಡ ಪ್ರಬುದ್ಧತೆ ಪ್ರದರ್ಶಿಸುತ್ತಿದ್ದಾರೆ.
ಬೆಂಗಳೂರು: ಹುಣಸೂರು ಜೆಡಿಎಸ್ ಶಾಸಕ ಜಿಡಿ ಹರೀಶ್ ಗೌಡ (GT Harish Gowda) ಒಬ್ಬ ಯುವ ನಾಯಕ ಮತ್ತು ಹಿರಿಯ ರಾಜಕಾರಣಿ ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿಟಿ ದೇವೇಗೌಡರ (GT Devegowda) ಮಗ. ಹರೀಶ್ ಬಗ್ಗೆ ಯಾಕೆ ಮಾತಾಡಬೇಕಾಗಿದೆಯೆಂದರೆ ಮೊದಲ ಬಾರಿಗೆ ಶಾಸಕನಾಗಿ ವಿಧಾನ ಸಬೆ ಪ್ರವೇಶಿಸಿದರೂ ಅವರು ಪ್ರಬುದ್ಧತೆ (maturity) ಪ್ರದರ್ಶಿಸುತ್ತಿದ್ದಾರೆ. ಇಂದು ಸದನದಲ್ಲಿ ಅವರು ಅಕ್ರಮ ಬಡಾವಣೆಗಳಲ್ಲಿ ನಿರ್ಮಿಸಲಾಗಿರುವ ಕಟ್ಟಡಗಳಿಗೆ ಮತ್ತು ನಿವೇಶನಗಳಿಗೆ ನಮೂನೆ 3 ನೀಡಲು ಸರಕಾರ ತೆಗೆದಿಕೊಂಡಿರುವ ಕ್ರಮಗಳೇನು ಅಂತ ಪ್ರಶ್ನೆ ಕೇಳುತ್ತಾರೆ ಮತ್ತು ಪೌರಾಡಳಿತ ಸಚಿವ ರಹೀಂ ಖಾನ್ ನೀಡಿದ ಉತ್ತರ ಅವರನ್ನು ಸಂತೃಪ್ತಗೊಳಿಸುವುದಿಲ್ಲ. ಗ್ರಾಮಠಾಣಾ ಮತ್ತು ನಗರ ಯೋಜನೆಗಳಿಗೆ ನಮೂನೆ 3 ನೀಡಲಾಗುತ್ತಿದೆ ಎಂಬ ಸಚಿವರ ಉತ್ತರಕ್ಕೆ ಹರೀಶ್, ಅಕ್ರಮ ಬಡಾವಣೆಗಳ ಬಗ್ಗೆ 1977 ರಿಂದ ಸರಕಾರಗಳು ಯಾವ್ಯಾವ ಕ್ರಮಗಳನ್ನು ತೆಗೆದುಕೊಂಡಿವೆ ಮತ್ತು ಗೆಜೆಟ್ ನಲ್ಲಿ ಹೊರಡಿಸಿದ ಅಂಶಗಳನ್ನು ಉಲ್ಲೇಖಿಸುತ್ತಾ ಸರ್ಕಾರದ ಸುತ್ತೋಲೆಗಳನ್ನೂ ಪ್ರಸ್ತಾಪ ಮಾಡುತ್ತಾರೆ. ಪ್ರಶ್ನೆ ಕೇಳಲು ಇದು ಸರಿಯಾದ ಕ್ರಮ, ಒಂದು ವಿಷಯದ ಮೇಲೆ ಪ್ರಶ್ನೆ ಕೇಳುವಾಗ ಅದರ ಉದ್ದಗಲಗಳ ಅಧ್ಯಯನ ಮಾಡಬೇಕು, ಹರೀಶ್ ಗೌಡ ಅಂಥ ವಿವೇಚನೆ ಪ್ರದರ್ಶಿಸಿ ಸದನದ ಗಮನ ಸೆಳೆದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ