Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Results 2023: ವಿಧಾನಸಭೆ ಪ್ರವೇಶಿಸಿದ ಒಂದೇ ಕುಟುಂಬದ ಮಂದಿ…ಅಪ್ಪ JDS, ಮಗ ಕಾಂಗ್ರೆಸ್!

ರಾಜಕಾರಣ ಅದರಲ್ಲಿಯೂ ಕರ್ನಾಟಕ ರಾಜಕಾರಣದಲ್ಲಿ ಮೇಲಿಂದ ಮೇಲೆ ಕೇಳಿಬರುವ ಮಾತು ಕುಟುಂಬ ರಾಜಕಾರಣ. ತಮ್ಮ ಕುಟುಂಬದವರಿಗೆ ಮತ್ತೆ ಮತ್ತೆ ಮಣೆ ಹಾಕಲಾಗುತ್ತದೆ ಎಂದು ಪರಸ್ಪರ ಪಕ್ಷಗಳ ನಾಯಕರೇ ಆರೋಪಿಸಿಕೊಳ್ಳುತ್ತಾರೆ.

Karnataka Results 2023: ವಿಧಾನಸಭೆ ಪ್ರವೇಶಿಸಿದ ಒಂದೇ ಕುಟುಂಬದ ಮಂದಿ...ಅಪ್ಪ JDS, ಮಗ ಕಾಂಗ್ರೆಸ್!
ಎ ಮಂಜು, ಮಂಥರ್ ಗೌಡ
Follow us
TV9 Web
| Updated By: ನಯನಾ ರಾಜೀವ್

Updated on:May 13, 2023 | 7:17 PM

ರಾಜಕಾರಣ ಅದರಲ್ಲಿಯೂ ಕರ್ನಾಟಕ ರಾಜಕಾರಣದಲ್ಲಿ ಮೇಲಿಂದ ಮೇಲೆ ಕೇಳಿಬರುವ ಮಾತು ಕುಟುಂಬ ರಾಜಕಾರಣ. ತಮ್ಮ ಕುಟುಂಬದವರಿಗೆ ಮತ್ತೆ ಮತ್ತೆ ಮಣೆ ಹಾಕಲಾಗುತ್ತದೆ ಎಂದು ಪರಸ್ಪರ ಪಕ್ಷಗಳ ನಾಯಕರೇ ಆರೋಪಿಸಿಕೊಳ್ಳುತ್ತಾರೆ. ಆದರೆ ನಂತರ ಅವರ ಪಕ್ಷದಲ್ಲಿಯೇ ಟಿಕೆಟ್ ನೀಡಲಾಗುತ್ತದೆ. ಹಾಗಿದ್ದರೆ ಈ ಬಾರಿಯ ಚುನಾವಣಾ ಫಲಿತಾಂಶದಲ್ಲಿ ಇಂಥ ಲೆಕ್ಕಾಚಾರಗಳು ಎಷ್ಟಾಗಿದೆ. ಗೆಲುವಿನ ಸವಿಯುಂಡು ವಿಧಾನಸಭೆ ಪ್ರವೇಶ ಮಾಡುತ್ತಿರುವವ ಒಂದೆ ಕುಟುಂಬದ ಸಸ್ಯರು ಯಾರು.

ಇಲ್ಲೊಂದಿಷ್ಟು ಅಚ್ಚರಿಯ ಮಾಹಿತಿಗಳಿದೆ. ತಂದೆ-ಮಗ, ತಂದೆ-ಮಗಳು, ಅಣ್ಣ-ತಮ್ಮಂದಿರು ವಿಧಾನಸಭೆ ಪ್ರವೇಶ ಮಾಡುತ್ತಿದ್ದಾರೆ. ಹಾಗಿದ್ದರೆ ಈ ಜೋಡಿಗಳ ಲೆಕ್ಕ ನೋಡಿಕೊಂಡು ಬರೋಣ.

1.ಶ್ಯಾಮನೂರು ಶಿವಶಂಕರಪ್ಪ-ಎಸ್ ಎಸ್ ಮಲ್ಲಿಕಾರ್ಜುನ್ ಕಾಂಗ್ರೆಸ್ ಹಿರಿಯ ನಾಯಕ ಶ್ಯಾಮನೂರು ಶಿವಶಂಕರಪ್ಪ ಮತ್ತು ಅವರ ಪುತ್ರ ಎಸ್ ಎಸ್ ಮಲ್ಲಿಕಾರ್ಜುನ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಅಪ್ಪ ಶ್ಯಾಮನೂರು ಶಿವಶಂಕರಪ್ಪ ಗೆದ್ದರೆ, ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಪುತ್ರ ಎಸ್ ಎಸ್ ಮಲ್ಲಿಕಾರ್ಜುನ್ ವಿಜಯದ ನಗೆ ಬೀರಿದ್ದಾರೆ.

2. ಜಿಟಿ ದೇವೇಗೌಡ-ಜಿಡಿ ಹರೀಶ್ ಗೌಡ ಅಪ್ಪ-ಮಕ್ಕಳ ವಿಚಾರದಲ್ಲಿ ಸದಾ ಸುದ್ದಿಯಲ್ಲಿರುವ ಜೆಡಿಎಸ್ ನಿಂದ ಕುಟುಂಬದ ಇಬ್ಬರು ವಿಧಾನಸಭೆ ಪ್ರವೇಶ ಮಾಡಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಅಪ್ಪ ಜಿಟಿ ದೇವೇಗೌಡ ಆಯ್ಕೆಯಾಗಿದ್ದರೆ , ಹುಣಸೂರು ಕ್ಷೇತ್ರದಿಂದ ಪಕ್ಷದಿಂದ ಪುತ್ರ ಜಿ.ಡಿ.ಹರೀಶ್ ಗೌಡ ತೆನೆ ಹೊತ್ತುಕೊಂಡು ವಿಧಾನಸಭೆ ಮೊದಲಸಾರಿ ಪ್ರವೇಶ ಮಾಡಿದ್ದಾರೆ.

3. ಎಂ. ಕೃಷ್ಣಪ್ಪ- ಪ್ರಿಯಾ ಕೃಷ್ಣ ಬೆಂಗಳೂರಿನಲ್ಲಿ ಅಪ್ಪ-ಮಕ್ಕಳ ಕಮಾಲ್ ಸಹ ಇದೆ. ಇಲ್ಲಿಯೂ ಕಾಂಗ್ರೆಸ್ ನಾಯಕರೇ ಗೆದ್ದು ಬೀಗಿದ್ದಾರೆ. ವಿಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಅಪ್ಪ ಎಂ.ಕೃಷ್ಣಪ್ಪ ಆಯ್ಕೆಯಾಗಿದ್ದರೆ ಗೋವಿಂದರಾಜನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಪುತ್ರ ಪ್ರಿಯಾಕೃಷ್ಣ ಶಾಸಕರಾಗಿದ್ದಾರೆ.

4. ಎ.ಮಂಜು- ಮಂಥರ್ ಗೌಡ ಇದೊಂದು ತರಹದ ಅಚ್ಚರಿ ಫಲಿತಾಂಶ. ಅರಕಲಗೂಡು ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಅಪ್ಪ ಎ.ಮಂಜು ಶಾಸಕರಾಗಿದ್ದಾರೆ. ಬಿಜೆಪಿಯನ್ನು ತೊರೆದು ಜೆಡಿಎಸ್ ಸೇರಿ್ದರು. ಅದಕ್ಕೂ ಮೊದಲು ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಕಾಂಗ್ರೆಸ್​ನಿಂದ ಸಚಿವರಾಗಿದ್ದವರು. ಇನ್ನೊಂದು ಕಡೆ ಮಡಿಕೇರಿಯಲ್ಲಿ ಮಗ ಮಂಥರ್ ಗೌಡ ಜಯಭೇರಿ ಬಾರಿಸಿದ್ದಾರೆ. ಮಂಥರ್ ಗೌಡ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಶಾಸಕರಾಗಿದ್ದಾರೆ. ಅಪ್ಪ ಜೆಡಿಎಸ್ ಶಾಸಕನಾದರೆ ಮಗ ಕಾಂಗ್ರೆಸ್​ನಿಂದ ಶಾಸಕರಾಗಿದ್ದಾರೆ.

5. ಕೆಎಚ್​ ಮುನಿಯಪ್ಪ- ರೂಪಕಲಾ ರಾಷ್ಟ್ರ ರಾಜಕಾರಣದಲ್ಲಿದ್ದ ಕೆಎಚ್ ಮುನಿಯಪ್ಪ ನಿಸರ್ಗ ನಾರಾಯಣಸ್ವಾಮಿಗೆ ನೀರು ಕುಡಿಸಿ ಶಾಸಕರಾಗಿದ್ದಾರೆ. ದೇವನಹಳ್ಳಿ ಕ್ಷೇತ್ರದಿಂದ ಅಪ್ಪ ಮುನಿಯಪ್ಪ ಶಾಸಕರಾದರೆ ಇತ್ತ ಕೆಜಿಎಫ್ ಕ್ಷೇತ್ರದಿಂದ ಪುತ್ರಿ ರೂಪಕಲಾ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ.

6. ಸೋಲಿಲ್ಲದ ಸಹೋದರರು ಗೋಕಾಕ್ ಕ್ಷೇತ್ರದಿಂದ ರಮೇಶ್ ಜಾರಕಿಹೊಳಿ ಗೆದ್ದು ಬೀಗಿದ್ದಾರೆ. ಈ ಸಾರಿ ಬಿಜೆಪಿಯ ಚಿಹ್ನೆ ಅಡಿಯಲ್ಲಿ ಜಯ ಸಾಧಿಸಿಕೊಂಡಿದ್ದಾರೆ. ಅರಭಾವಿಯ ಶಾಸಕರಾಗಿ ಬಿಜೆಪಿಯಿಂದ ಸಹೋದರ ಬಾಲಚಂದ್ರ ಜಾರಕಿಹೊಳಿ ಆಯ್ಕೆಯಾಗಿದ್ದಾರೆ. ಇತ್ತ ಬೆಳಗಾವಿಯ ಯಮಕನಮರಡಿ ಕ್ಷೇತ್ರದಿಂದ ಶಾಸಕರಾಗಿ ಸತೀಶ್ ಜಾರಕಿಹೊಳಿ ಆಯ್ಕೆಯಾಗಿದಗ್ದಾರೆ. ರಮೇಶ್ ಮತ್ತು ಬಾಲಚಂದ್ರ ಬಿಜೆಪಿಯಿಂದ ಗೆದ್ದರೆ ಸತೀಶ್ ಕಾಂಗ್ರೆಸ್​ನಿಂದ ಗೆದ್ದಿದ್ದಾರೆ.

ಇನ್ನು ಎಚ್​ಡಿ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದಿಂದ ಶಾಸಕರಾಗಿ ಗೆದ್ದು ಬಂದರೆ, ಪುತ್ರ ನಿಖಿಲ್ ಕುಮಾರಸ್ವಾಮಿ ರಾಮನಗರದಿಂದ ಸೋತಿದ್ದಾರೆ. ಹೊಸ ಪಕ್ಷದೊಂದಿಗೆ ಬಂದಿದ್ದ ಜನಾರ್ದನ ರೆಡ್ಡಿ ಗಂಗಾವತಿಯಿಂದ ಗೆದ್ದರೆ ಅವರ ಪತ್ನಿ ಅರುಣಾ ಲಕ್ಷ್ಮೀ ಬಳ್ಳಾರಿ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ.

ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:07 pm, Sat, 13 May 23

ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!