ಮಡಿಕೇರಿ ತಾಲೂಕಿನ 2ನೇ ಮೊಣ್ಣಂಗೇರಿ ಗ್ರಾಮದಲ್ಲಿ ಬಿರುಕು ಬಿಟ್ಟ ಬೆಟ್ಟಗಳು: ಆತಂಕದಲ್ಲಿ ಗ್ರಾಮಸ್ಥರು
ಭೂವಿಜ್ಞಾನಿಗಳು ಭೇಟಿ ನೀಡುವಂತೆ ಗ್ರಾಮಸ್ಥರ ಆಗ್ರಹ ಮಾಡಿದ್ದು, ಮೊಣ್ಣಂಗೇರಿ ಗ್ರಾಮಸ್ಥರಲ್ಲಿ ಭಾರೀ ಆತಂಕ ಶುರುವಾಗಿದೆ.
ಕೊಡಗು: ಮಡಿಕೇರಿ ತಾಲೂಕಿನ 2ನೇ ಮೊಣ್ಣಂಗೇರಿ ಗ್ರಾಮದಲ್ಲಿ ಮತ್ತೊಂದು ಮಹಾ ಆತಂಕ ಉಂಟಾಗಿದ್ದು, ಅಗಾಧ ಪ್ರಮಾಣದಲ್ಲಿ ಬೆಟ್ಟಗಳು ಬಿರುಕು (Fissured hills) ಬಿಟ್ಟಿವೆ. ಎರಡು ಅಡಿಗಳಷ್ಟು ಬೃಹತ್ ಬೆಟ್ಟಗಳು ಬಿರುಕು ಬಿಟ್ಟಿದ್ದು, ಭೂ ಕುಸಿತದ ಬಳಿಕ ಬೆಟ್ಟದ ಸಾಲುಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಭಾರೀ ಮಳೆಯಾದರೆ ಸಂಪೂರ್ಣ ಬೆಟ್ಟವೇ ಕುಸಿಯುವ ಸಾಧ್ಯತೆಯಿದ್ದು, ಭೂ ಕುಸಿತವಾದರೆ ಇಡೀ ಗ್ರಾಮವೇ ಸರ್ವನಾಶವಾಗುವ ಆತಂಕ ಎದುರಾಗಿದೆ. 3 ದಿನಗಳ ಹಿಂದೆ 2 ನೇ ಮೊಣ್ಣಂಗೇರಿ ಗ್ರಾಮದಲ್ಲಿ ಭಾರೀ ಭೂ ಕುಸಿತ ಉಂಟಾಗಿತ್ತು. ಈಗಲೂ ಕೆಸರ ರಾಶಿ ಕೊಚ್ಚಿ ಬರುತ್ತಿದೆ. ಭೂವಿಜ್ಞಾನಿಗಳು ಭೇಟಿ ನೀಡುವಂತೆ ಗ್ರಾಮಸ್ಥರ ಆಗ್ರಹ ಮಾಡಿದ್ದು, ಮೊಣ್ಣಂಗೇರಿ ಗ್ರಾಮಸ್ಥರಲ್ಲಿ ಭಾರೀ ಆತಂಕ ಶುರುವಾಗಿದೆ.

