ಫಿಟ್ನೆಸ್ ಫ್ರೀಕ್ ಮತ್ತು ವಿಭಿನ್ನ ಹಾಡುಗಾರಿಕೆಗೆ ಹೆಸರಾಗಿದ್ದ ಉಡುಪಿ ವೈದ್ಯ ಡಾ ಸತೀಶ್ ಪೂಜಾರಿ ಹೃದಯಾಘಾತಕ್ಕೆ ಬಲಿ
ಫಿಟ್ನೆಸ್ ಫ್ರೀಕ್ ಆಗಿದ್ದ ಕನ್ನಡ ಚಿತ್ರರಂಗದ ಕಣ್ಮಣಿ ಪುನೀತ್ ರಾಜಕುಮಾರ್ ಸಹ ಹೃದಯಾಘಾತಕ್ಕೊಳಕ್ಕಾಗಿ ಅಕಾಲಿಕ ಮರಣವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ನಿಯಮಿತವಾಗಿ ಜಿಮ್ ಗೆ ಹೋಗಿ ಕಸರತ್ತು ಮಾಡಿಕೊಂಡಿದ್ದರೂ ಹೃದಯಾಘಾತ ತಪ್ಪಲ್ಲವೇ ಎಂಬ ಪ್ರಶ್ನೆ ನಮ್ಮಲ್ಲಿ ಮೂಡೋದು ಸಹಜವೇ. ಡಾ ಪೂಜಾರಿ ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ.
ಉಡುಪಿ: ಪಾಪಿ ಚಿರಾಯು, ಆದರೆ ಸಜ್ಜನರನ್ನು ದೇವರು ಬೇಗ ಕರೆಸಿಕೊಳ್ಳುತ್ತಾನೆ ಅಂತ ಹೇಳೋದು ನಿಜ. 54 ಖಂಡಿತ ಸಾಯುವ ವಯಸ್ಸಲ್ಲ. ಆದೂ ಫಿಟ್ನೆಸ್ ಬಗ್ಗೆ ಅತೀವ ಕಾಳಜಿ ವಹಿಸುತ್ತಿದ್ದ ಮತ್ತು ವೃತ್ತಿಯಿಂದ ವೈದ್ಯರಾಗಿದ್ದವರು ಹೃದಯಾಘಾತಕ್ಕೆ ಬಲಿಯಾಗುವುದು ಆಘಾತಕಾರಿ. ಕುಂದಾಪುರದಲ್ಲಿ ಶ್ರೀಮಾತಾ ಖಾಸಗಿ ಆಸ್ಪತ್ರೆಯನ್ನು ನಡೆಸುತ್ತಿದ್ದ ಡಾ ಸತೀಶ್ ಪೂಜಾರಿ ಅವರು ಹಾರ್ಟ್ ಅಟ್ಯಾಕ್ ನಿಂದ ನಿಧನ ಹೊಂದಿರುವು ಸಂಗತಿ ಅವರನ್ನು ಬಲ್ಲ ಜನಕ್ಕೆ ನಂಬಲಾಗುತ್ತಿಲ್ಲ. ಫಿಟ್ನೆಸ್ ಕಡೆ ಹೆಚ್ಚು ಗಮನ ನೀಡುತ್ತಿದ್ದ ಮತ್ತು ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ಹೆಚ್ಚೆಚ್ಚಾಗಿ ತೊಡಸಿಸಿಕೊಂಡಿದ್ದ ಡಾ ಪೂಜಾರಿ ಕುಂದಾಪುರ ಮತ್ತು ಉಡುಪಿ ಭಾಗಗಳಲ್ಲಿ ಹೆಚ್ಚು ಹೆಸರುವಾಸಿಯಾಗಿದ್ದರು. ವೈದ್ಯರಾಗಿದ್ದರರೂ ಡಾ ಪೂಜಾರಿ ವಿಭಿನ್ನ ಹಾಡುಗಾರಿಕೆ ಮೂಲಕವೂ ಜನಪ್ರಿಯರಾಗಿದ್ದರು. ವಿಶ್ವವಿಖ್ಯಾತ ಗಾಯಕಿ ಎಸ್ ಜಾನಕಿ ಮತ್ತು ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಜೊತೆ ಸಂಗೀತ ಕಾರ್ಯಕ್ರಮಗಳಲ್ಲಿ ಡಾ ಪೂಜಾರಿ ಹಾಡುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: 59ನೇ ವಯಸ್ಸಿನಲ್ಲೂ ಸಖತ್ ಫಿಟ್ ಆಗಿದ್ದಾರೆ ಆಮಿರ್ ಖಾನ್; ಇಲ್ಲಿದೆ ಫಿಟ್ನೆಸ್ ಗುಟ್ಟು