ಯುದ್ಧ ಶುರುವಾಗುವ ಮೊದಲು ಭಾರತಕ್ಕೆ ಹೋಗುವ ವಿಮಾನಗಳಲ್ಲಿ ಟಿಕೆಟ್ ದರ ರೂ. 60,000 ಕ್ಕಿಂತ ಜಾಸ್ತಿಯಾಗಿತ್ತು: ವಿದ್ಯಾರ್ಥಿನಿ

ಸ್ಫೂರ್ತಿ ಅವರು ಹಾಸ್ಟೆಲ್ ಬದಲು ಫ್ಲ್ಯಾಟೊಂದರಲ್ಲಿ ವಾಸವಾಗಿದ್ದರಿಂದ ಅವರು ಆಶ್ರಯ ಪಡೆದ ಬಂಕರ್​ನಲ್ಲಿ ಜಾಸ್ತಿ ಜನ ಇರಲಿಲ್ಲ. ಹಾಸ್ಟೆಲ್ ಗಳಿರುವ ಜಾಗದಲ್ಲಿದ್ದ ಬಂಕರ್​ಗಳು ಹೆಚ್ಚು ಕ್ರೌಡೆಡ್ ಅಗಿದ್ದವು ಅಂತ ಸ್ಫೂರ್ತಿ ಹೇಳುತ್ತಾರೆ.

TV9kannada Web Team

| Edited By: Arun Belly

Mar 07, 2022 | 11:29 PM

ಯುದ್ಧಗ್ರಸ್ಥ ಉಕ್ರೇನಿಂದ (Ukraine) ಭಾರತೀಯರು ತಂಡ ತಂಡವಾಗಿ ಸ್ವದೇಶಕ್ಕೆ ಮರಳುತ್ತಿದ್ದಾರೆ. ಬಾಗಲಕೋಟೆಯ (Bagalkot) ಸ್ಫೂರ್ತಿ (Sphoorthi) ರವಿವಾರ ರಾತ್ರಿ ತಮ್ಮ ಮನೆ ತಲುಪಿದ್ದಾರೆ. ಸಹಜವಾಗೇ ಅವರ ಮನೆ ಸಂಭ್ರಮದಲ್ಲಿ ಮುಳುಗಿದೆ. ಸ್ಫೂರ್ತಿ ಅವರೊಂದಿಗೆ ಬಾಗಲಕೋಟೆಯ ಟಿವಿ9 ವರದಿಗಾರ ಮಾತಾಡಿ ಅವರಿಗಾದ ಅನುಭವವನ್ನು ಕೇಳಿದರು. ಉಕ್ರೇನಿನ ಕೇಂದ್ರಭಾಗದಲ್ಲಿದ್ದ ಕಾರಣ ಸ್ಫೂರ್ತಿ ಅವರಿಗೆ ಬಾಂಬ್ ಗಳು ಸಿಡಿಯುವ ಸದ್ದು ಸ್ಪಷ್ಟವಾಗಿ ಕೇಳುತ್ತಿತ್ತು. ಆವಶ್ಯಕ ಕಾಗದಪತ್ರಗಳೊಂದಿಗೆ ಸನ್ನದ್ಧರಾಗಿರಿ, ನಿಮ್ಮೆಲ್ಲರನ್ನು ಯಾವುದೇ ಕ್ಷಣ ಇವಾಕ್ಯುಯೇಟ್ ಮಾಡಬಹುದು ಅಂತ ಎಂಬೇಸಿಯಿಂದ ಮೆಸೇಜು ಬರುವ ಮೊದಲೇ ಇವರೆಲ್ಲ ಬಾಂಬ್ ಗಳ ಸದ್ದಿನಿಂದಾಗಿ ಬೆಳಗ್ಗೆ 4 ಗಂಟೆಗೆ ಎದ್ದು ಕುಳಿತ್ತಿದ್ದರಂತೆ. ಆದರೆ, ಬಾಂಬಿಂಗ್ ತೀವ್ರತೆ ಹೆಚ್ಚಿದ್ದರಿಂದ ಹತ್ತಿರದ ಬಂಕರ್ ಗೆ ತೆರಳುವಂತೆ ರಾಯಭಾರಿ ಕಚೇರಿ ಮತ್ತೊಂದು ಸಂದೇಶ ಕಳಿಸಿದ ಬಳಿಕ ಸ್ಫೂರ್ತಿ ಮತ್ತು ಅವರೊಂದಿಗಿದ್ದ 8-10 ವಿದ್ಯಾರ್ಥಿಗಳು ಬಂಕರ್ಗೆ ಹೋದರಂತೆ.

ಸ್ಫೂರ್ತಿ ಅವರು ಹಾಸ್ಟೆಲ್ ಬದಲು ಫ್ಲ್ಯಾಟೊಂದರಲ್ಲಿ ವಾಸವಾಗಿದ್ದರಿಂದ ಅವರು ಆಶ್ರಯ ಪಡೆದ ಬಂಕರ್​ನಲ್ಲಿ ಜಾಸ್ತಿ ಜನ ಇರಲಿಲ್ಲ. ಹಾಸ್ಟೆಲ್ ಗಳಿರುವ ಜಾಗದಲ್ಲಿದ್ದ ಬಂಕರ್​ಗಳು ಹೆಚ್ಚು ಕ್ರೌಡೆಡ್ ಅಗಿದ್ದವು ಅಂತ ಸ್ಫೂರ್ತಿ ಹೇಳುತ್ತಾರೆ. ಇವರೊಂದಿಗಿದ್ದ ವಿದ್ಯಾರ್ಥಿಗಳಲ್ಲದ ಭಾರತೀಯರು ಮೆಟ್ರೋ ಸ್ಟೇಶನ್ ಗಳಿಗೆ ಹೋದರಂತೆ.

ಯುದ್ಧ ಆರಂಭವಾಗುವ ಸಾಧ್ಯತೆ ಇದೆ ಎಂದು ಎಂಬೇಸಿ ಅವರು ಮೊದಲೇ ಹೇಳಿದ್ದರು ಮತ್ತು ತಾತ್ಕಾಲಿಕವಾಗಿ ಎರಡು ವಾರಗಳ ಮಟ್ಟಿಗೆ ಭಾರತಕ್ಕೆ ವಾಪಸ್ಸು ಹೋಗಲು ವಿದ್ಯಾರ್ಥಿಗಳಿಗೆ ತಿಳಿಸಿದ್ದರು ಎಂದು ಹೇಳುವ ಸ್ಫೂರ್ತಿ ಆಗ ವಿಮಾನದ ಟಿಕೆಟ್ ಗಳು ರೂ. 60,000 ಕ್ಕಿಂತ ಹೆಚ್ಚಾಗಿದ್ದರಿಂದ ಪ್ರಯಾಣಿಸುವುದು ಸಾಧ್ಯವಾಗಲಿಲ್ಲ ಎನ್ನುತ್ತಾರೆ. ವೈದ್ಯಕೀಯ ವ್ಯಾಸಂಗ ಮಾಡುವವರಿಗೆ ಆನ್ಲೈನ್ ತರಗತಿಗಳನ್ನು ನಡೆಸಿದರೆ ಅದರಿಂದ ಉಪಯೋಗವಿಲ್ಲ, ನಮಗೆ ಆಫ್ಲೈನ್ ಕ್ಲಾಸ್ಗಳೇ ಬೇಕಾಗುತ್ತವೆ ಎಂದು ಸ್ಫೂರ್ತಿ ಹೇಳಿದರು.

ಇದನ್ನೂ ಓದಿ:  ಕೀವ್​​ ಗಡಿಯಲ್ಲಿ ಮಗಳ ಎದುರೇ ಮದುವೆಯಾದ ಉಕ್ರೇನಿಯನ್ ದಂಪತಿ; ಹಾಡಿ, ಸಂಭ್ರಮಿಸಿದ ಸೈನಿಕರ ವಿಡಿಯೋ ವೈರಲ್

Follow us on

Click on your DTH Provider to Add TV9 Kannada