Disaster in Malleshwaram: ಮಲ್ಲೇಶ್ವರಂ ಚಿನ್ನಾಭರಣ ಅಂಗಡಿಯಿಂದ ಮಳೆನೀರಲ್ಲಿ ಕೊಚ್ಚಿಹೋಗಿದ್ದು ರೂ. 200 ಕೋಟಿಗೂ ಹೆಚ್ಚು ಮೌಲ್ಯದ ಆಭರಣಗಳು!

ಅರುಣ್​ ಕುಮಾರ್​ ಬೆಳ್ಳಿ

Updated on: May 22, 2023 | 4:12 PM

ಅಂಗಡಿಯ ಮಾಲೀಕರು ಮತ್ತು ಸಿಬ್ಬಂದಿ ಹೇಳುವ ಹಾಗೆ ಸುಮರಿ 200-225 ಕೋಟಿ ಮೌಲ್ಯದ ಶೇಕಡ 80ರಷ್ಟು ಆಭರಣಗಳು ನೀರಲ್ಲಿ ಕೊಚ್ಚಿಕೊಂಡು ಹೋಗಿವೆ.

ಬೆಂಗಳೂರು: ಈ ದೃಶ್ಯವನ್ನು ನೋಡುತ್ತಿದ್ದರೆ ಭಯವಾಗುತ್ತದೆ. ಇನ್ನು ಮಳೆ ನೀರಿನಿಂದ ಪ್ರವಾಹದಂಥ ಸ್ಥಿತಿ (flood-like situation) ಉಂಟಾಗಿ ನೀರು ಅಂಗಡಿಯೊಳಗೆ ರಭಸದಿಂದ ನುಗ್ಗಿ ತಮ್ಮ ಕಣ್ಣೆದುರೇ ಕೋಟ್ಯಾನುಗಟ್ಟಲೆ ಮೌಲ್ಯದ ಚಿನ್ನಾಭರಣಗಳು (jewelry) ಕೊಚ್ಚಿಹೋಗುವದನ್ನು ನೋಡಿದ ಈ ಅಂಗಡಿ ಮಾಲೀಕರ ಗತಿ ಏನಾಗಿರಬೇಡ? ನಗರದ ಮಲ್ಲೇಶ್ವರಂನಲ್ಲಿರುವ ನಿಹಾನ್ ಜ್ಯುವೆಲರಿ (Nihaan Jewelry Shop) ಅಂಗಡಿಯ ಸ್ಥಿತಿ ಇದು. ಅಂಗಡಿಯ ಮಾಲೀಕರು ಮತ್ತು ಸಿಬ್ಬಂದಿ ಹೇಳುವ ಹಾಗೆ ಸುಮರಿ 200-225 ಕೋಟಿ ಮೌಲ್ಯದ ಶೇಕಡ 80ರಷ್ಟು ಆಭರಣಗಳು ನೀರಲ್ಲಿ ಕೊಚ್ಚಿಕೊಂಡು ಹೋಗಿವೆ. ಯಾರ ಜೀವಕ್ಕೂ ಅಪಾಯವಾಗದಿರುವುದೇ ಪುಣ್ಯ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.