AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು: ಹಾಡಹಗಲೇ ಜ್ಯುವೆಲರಿ ಶಾಪ್​ಗೆ ನುಗ್ಗಿ ಚೂರಿ ಇರಿದು ವ್ಯಕ್ತಿಯ ಬರ್ಬರ ಹತ್ಯೆ

ಮಂಗಳೂರಿನಲ್ಲಿ ಮತ್ತೊಂದು ಚಾಕು ಇರಿದು ಹತ್ಯೆ ಮಾಡಿದ ಪ್ರಕರಣ ನಡೆದಿದೆ. ಹಾಡಹಗಲೇ ಜ್ಯುವೆಲರಿ ಶಾಪ್​ಗೆ ನುಗ್ಗಿದ ದುಷ್ಕರ್ಮಿಗಳು ವ್ಯಕ್ತಿಗೆ ಚೂರಿ ಇರಿದು ಬರ್ಬರ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ಮಂಗಳೂರು: ಹಾಡಹಗಲೇ ಜ್ಯುವೆಲರಿ ಶಾಪ್​ಗೆ ನುಗ್ಗಿ ಚೂರಿ ಇರಿದು ವ್ಯಕ್ತಿಯ ಬರ್ಬರ ಹತ್ಯೆ
TV9 Web
| Edited By: |

Updated on:Feb 03, 2023 | 6:36 PM

Share

ಮಂಗಳೂರು: ಬೈಕ್​ನಲ್ಲಿ ಬಂದ ದುರ್ಷರ್ಮಿಗಳು ಹಾಡಹಗಲೇ ಜ್ಯುವೆಲರಿ ಶಾಪ್​ಗೆ ನುಗ್ಗಿ ವ್ಯಕ್ತಿಗೆ ಚೂರಿ ಇರಿದು ಪರಾರಿಯಾಗಿರುವ ಘಟನೆ ಇಂದು(ಫೆಬ್ರವರಿ 03) ಮಂಗಳೂರಿನ (Mangaluru) ಹಂಪನಕಟ್ಟನಲ್ಲಿ ನಡೆದಿದೆ. ಹಂಪನಕಟ್ಟದಲ್ಲಿರುವ ಜ್ಯುವೆಲರಿ ಶಾಪ್‌ನಲ್ಲಿ ಕೆಲಸಕ್ಕಿದ್ದ ರಾಘವ(50) ಮೃತಪಟ್ಟಿದ್ದಾನೆ. ಬೈಕ್‌ನಲ್ಲಿ ಬಂದ ಇಬ್ಬರು ಮುಸುಕುದಾರಿ ದುಷ್ಕರ್ಮಿಗಳು ಜ್ಯುವೆಲರಿ ಶಾಪ್‌ಗೆ ನುಗ್ಗಿ ರಾಘವಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.

ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡಿದ್ದ ರಾಘವ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಘಟನೆಗೆ ಇನ್ನೂ ಕಾರಣ ತಿಳಿದುಬಂದಿಲ್ಲ. ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು ತನಿಖೆ ಕೈಗೊಂಡಿದ್ದಾರೆ.

ಹಾಡಹಗಲೇ ಈ ಕೃತ್ಯ ನಡೆದಿದ್ದು, ಜನರು ಬೆಚ್ಚಿಬಿದ್ದಾರೆ. ಇನ್ನು ಕೃತ್ಯ ಎಸಗಿರುವ ದೃಶ್ಯ ಜ್ಯುವೆಲರಿ ಅಂಗಡಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಕೊಲೆಗೆ ಕಾರಣ ಏನು ಎನ್ನುವುದು ತಿಳಿದುಬಂದಿಲ್ಲ, ಪೊಲೀಸ್​ ತನಿಖೆಯಲ್ಲಿ ನಿಖರ ಕಾರಣ ತಿಳಿದುಬರಬೇಕಿದೆ.

ಮಂಗಳೂರು ‌ಪೊಲೀಸ್ ಕಮಿಷನರ್ ಶಶಿಕುಮಾರ್ ಪ್ರತಿಕ್ರಿಯೆ

ಇನ್ನು ಜ್ಯುವೆಲ್ಲರಿಗೆ ನುಗ್ಗಿ ಸಿಬ್ಬಂದಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ‌ಪೊಲೀಸ್ ಕಮಿಷನರ್ ಶಶಿಕುಮಾರ್ ಪ್ರತಿಕ್ರಿಯಿಸಿದ್ದು, ಕೇಶವ ಆಚಾರ್ಯ ಎಂಬವರ ಮಾಲೀಕತ್ವದ ಮಂಗಳೂರು ಜ್ಯುವೆಲ್ಲರಿ. ಕೇಶವ ಆಚಾರ್ಯ ಮಧ್ಯಾಹ್ನ 1.30ಕ್ಕೆ ಊಟಕ್ಕೆ ಹೋದ ಬಳಿಕ ಘಟನೆ‌ ನಡೆದಿದೆ. ಬಳಿಕ ಕೇಶವ ಆಚಾರ್ಯ 3.45ರ ಅಸುಪಾಸು ಶಾಪ್ ಗೆ ಬಂದಿದ್ದಾರೆ. ಈ ವೇಳೆ ಅಂಗಡಿ ಮುಂಭಾಗ ಕಾರು ನಿಲ್ಲಿಸುವ ಜಾಗದಲ್ಲಿ ಬೈಕ್ ನಿಂತಿತ್ತು. ಆಗ ಕೇಶವ ಆಚಾರ್ಯ ಬೈಕ್ ತೆಗೆಯಲು ಸಿಬ್ಬಂದಿ ರಾಘವೇಂದ್ರಗೆ ಕರೆ ಮಾಡಿದ್ದಾರೆ. ಆಗ ಕಾಲ್ ತೆಗೆದ ರಾಘವೇಂದ್ರ ತನಗೆ ಯಾರೋ ಚೂರಿ‌ ಹಾಕಿದ್ದಾಗಿ ಬೊಬ್ಬೆ ಹಾಕಿದ್ದಾರೆ. ತಕ್ಷಣ ಕೇಶವ ಆಚಾರ್ಯ ಕಾರು ನಿಲ್ಲಿಸಿ ಅಂಗಡಿ ಬಳಿ ಬಂದಾಗ ಒಬ್ಬಾತ ಓಡಿ ಹೋಗಿದ್ದಾನೆ. ಒಳಗೆ ಹೋಗಿ ನೋಡಿದಾಗ ಕತ್ತಿನ ಭಾಗಕ್ಕೆ ‌ಇರಿದ ರೀತಿಯಲ್ಲಿ ರಾಘವೇಂದ್ರ ಬಿದ್ದಿದ್ದರು ಎಂದು ಮಾಹಿತಿ ನೀಡಿದರು.

ಸಿಬ್ಬಂದಿ ರಾಘವೇಂದ್ರ ಆಚಾರ್ಯ ಏಳು ತಿಂಗಳಿನಿಂದ ಇಲ್ಲಿ ಕೆಲಸ ಮಾಡ್ತಿದಾರೆ. ಜ್ಯುವೆಲ್ಲರಿಯಲ್ಲಿದ್ದ ಕೆಲವು ಗೋಲ್ಡ್ ಚೈನ್ ಕಾಣೆಯಾದ ಬಗ್ಗೆ ಮಾಲೀಕರು ಹೇಳಿದ್ದಾರೆ. ಲೆಡ್ಜರ್ ನೋಡಿಕೊಂಡು ಎಷ್ಟು ಚಿನ್ನ ಕಾಣೆಯಾಗಿದೆ ಅಂತ ಪರಿಶೀಲನೆ ನಡೆದಿದೆ. ಹೆಲ್ಮೆಟ್ ಹಾಕಿ ಮಾಸ್ಕ್ ಧರಿಸಿಕೊಂಡು ಆರೋಪಿ ಬಂದಿದ್ದ. ಆರೋಪಿ ಅರ್ಧ ಗಂಟೆಗೂ ಹೆಚ್ಚು ಕಾಲ ಜ್ಯುವೆಲ್ಲರಿ ಒಳಗೆ ಇದ್ದ. ಅರ್ಧ ಗಂಟೆ ಬಿಟ್ಟು ಜ್ಯುವೆಲ್ಲರಿಯಿಂದ ಹೊರಗೆ ಬಂದಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದರು.

ಜ್ಯುವೆಲ್ಲರಿ ಒಳಗಿನ ಸಿಸಿಟಿವಿಯಲ್ಲಿ ರೆಕಾರ್ಡಿಂಗ್ ಇಲ್ಲ, ಲೈವ್ ಸ್ಟ್ರೀಮಿಂಗ್ ಅಷ್ಟೇ ಇದೆ. ಹೀಗಾಗಿ ಬೇರೆ ಅಂಗಡಿಗಳ ಸಿಸಿಟಿವಿ ಚೆಕ್ ಮಾಡುತ್ತಿದ್ದೇವೆ. 16 ಗ್ರಾಂ ಚೈನ್ ಮತ್ತು ಒಂದು ಉಂಗುರ ಕೊನೆಯದಾಗಿ ಇಲ್ಲಿ ಬಿಲ್ಲಿಂಗ್ ಆಗಿದೆ‌. ಪುಸ್ತಕದಲ್ಲೂ ಅದರ ಲೆಕ್ಕಾಚಾರ ಮಾಡಿರುವುದು ಇದೆ. ಆದರೆ ಇದು ಆರ್ಡರ್ ಕೊಟ್ಟಿರೋದು ಬೇರೆಯೇ ಗೊತ್ತಿಲ್ಲ. ಆದರೆ ಒಂದೆರಡು ಚೈನ್ ಮಿಸ್ಸಿಂಗ್ ಆಗಿರುವ ಬಗ್ಗೆ ಮಾಲೀಕರು ಹೇಳಿದ್ದಾರೆ ಎಂದರು.

Published On - 5:38 pm, Fri, 3 February 23