ಕೆಆರ್ ಮಾರ್ಕೆಟ್ ಹೂ ವ್ಯಾಪಾರಿಗಳು ಗ್ರಾಹಕರಿಲ್ಲದೆ ಹತಾಶ, ಮಳೆಯಿಂದಾಗಿ ಮನೆಯಿಂದ ಹೊರಬೀಳದ ಜನ

ಅರುಣ್​ ಕುಮಾರ್​ ಬೆಳ್ಳಿ

Updated on: May 20, 2025 | 11:03 AM

ಮಳೆಯ ಮಾತು ಒಂದೆಡೆಯಿರಲಿ, ಕನಿಷ್ಟ ಮಾರ್ಕೆಟ್ ತಲುಪುವ ರಸ್ತೆಗಳಾದರೂ ಒಪ್ಪವಾಗಿದ್ದರೆ ಜನ ಕೊಡೆ ಹಿಡಿದು, ಜರ್ಕಿನ್ ಧರಿಸಿ, ರೇನ್ ಕೋಟ್ ಗಳನ್ನು ಮೇಮೇಲೆ ಎಳೆದುಕೊಂಡು ಬಂದಾರು. ಬೆಂಗಳೂರು ನಿವಾಸಿಗಳಿಗೆ ಅದೂ ನಸೀಬಿಲ್ಲ. ರಸ್ತೆಗಳು ಅಧ್ವಾನ ಎದ್ದುಹೋಗಿವೆ ಅಂತ ಹೇಳಿದರೆ ಅದು ಅಂಟರ್​ಸ್ಟೇಟ್ಮೆಂಟ್! ವ್ಯಾಪಾರಿಗಳು ಘನಸರ್ಕಾರವನ್ನು ಶಪಿಸದೆ ಏನು ಮಾಡುತ್ತಾರೆ?

ಬೆಂಗಳೂರು, ಮೇ 20: ಬೆಂಗಳೂರಲ್ಲಿ ನಿರ್ದಯತೆಯಿಂದ ಸುರಿಯುತ್ತಿರುವ ಮಳೆಗೆ ಕಚೇರಿಗಳಿಗೆ ಹೋಗುವವರ ಪರದಾಟ ಒಂದು ಕತೆಯಾದರೆ, ನಗರದ ಐಕಾನಿಕ್ ಕೆಆರ್ ಮಾರ್ಕೆಟ್ ನಲ್ಲಿ ಗ್ರಾಹಕರ ಸುಳಿವಿಲ್ಲದ ಕಾರಣ ವ್ಯಾಪಾರವಿಲ್ಲದೆ ಹತಾಶರಾಗಿರುವ ಹೂವಿನ ವ್ಯಾಪಾರಿಗಳದ್ದು ಮತ್ತೊಂದು ಕತೆ. ವ್ಯಾಪಾರಸ್ಥರು ರಾಶಿರಾಶಿ ಹೂಗಳನ್ನು ಮುಂದಿಟ್ಟುಕೊಂಡು ಕೊಳ್ಳುವವರಿಗಾಗಿ ಕಾಯುತ್ತಿದ್ದಾರೆ. ಆದರೆ, ಬೆಳಗ್ಗೆಯಿಂದ ಒಂದೇ ಸಮನೆ ಧೋ ಅಂತ ಸುರಿಯುತ್ತಿರುವ ಮಳೆಯಲ್ಲಿ ಯಾರು ತಾನೇ ಹೂ ಖರೀದಿಸಲು ಬಂದಾರು? ಹೂವಿನ ವ್ಯಾಪಾರಿಗಳ ಬವಣೆಯನ್ನು ಟಿವಿ9 ವರದಿಗಾರ ವಿಡಿಯೋದಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ:  ಮಳೆ ಸೃಷ್ಟಿಸಿರುವ ಅವಾಂತರಗಳನ್ನು ಬಿಬಿಎಂಪಿ ವಾರ್​ರೂಮಲ್ಲಿ ಕೂತು ನೋಡಿದರೆ ಪರಿಹಾರಗಳು ಸಿಗುತ್ತವೆಯೇ?

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.