ಪುನೀತ್ ಸ್ಮಾರಕಕ್ಕೆ ಬರುವ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಹೇಗಿದೆ? ಇಲ್ಲಿ ನೋಡಿ

ಪುನೀತ್ ಸ್ಮಾರಕಕ್ಕೆ ಬರುವ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಹೇಗಿದೆ? ಇಲ್ಲಿ ನೋಡಿ

ಮಂಜುನಾಥ ಸಿ.
|

Updated on: Mar 17, 2024 | 9:58 AM

Puneeth Raukumar: ಪುನೀತ್ ರಾಜ್​ಕುಮಾರ್ ಸ್ಮಾರಕಕ್ಕೆ ಬರುವ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಿದೆ ದೊಡ್ಮನೆ ಕುಟುಂಬ. ಅಡುಗೆ ತಯಾರಿ ಹೇಗಿದೆ? ಇಲ್ಲಿ ನೋಡಿ...

ಪುನೀತ್ ರಾಜ್​ಕುಮಾರ್ (Puneeth Rajkumar) ಅವರ 49ನೇ ಹುಟ್ಟುಹಬ್ಬ ಇಂದು (ಮಾರ್ಚ್ 17). ಕಂಠೀರವ ಸ್ಟುಡಿಯೋನ ಪುನೀತ್ ಸ್ಮಾರಕಕ್ಕೆ ಲಕ್ಷಾಂತರ ಮಂದಿ ಅಭಿಮಾನಿಗಳು ಇಂದು ಆಗಮಿಸಲಿದ್ದಾರೆ. ಅಸಲಿಗೆ ಕಳೆದ ಕೆಲವು ದಿನಗಳಿಂದಲೇ ಅಭಿಮಾನಿಗಳು ತಂಡೋಪತಂಡವಾಗಿ ಸ್ಮಾರಕಕ್ಕೆ ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ. ಇಂದು ಲಕ್ಷಾಂತರ ಮಂದಿ ಸ್ಮಾರಕಕ್ಕೆ ಭೇಟಿ ನೀಡಲಿದ್ದು, ಅವರಿಗೆಲ್ಲ ಊಟದ ವ್ಯವಸ್ಥೆಯನ್ನು ದೊಡ್ಮನೆ ಕುಟುಂಬ ಮಾಡಿದೆ. ಅಭಿಮಾನಿಗಳಿಗಾಗಿ ಚಿಕನ್ ಬಿರಿಯಾನಿ ಇನ್ನಿತರೆ ತಿಂಡಿಗಳ ವ್ಯವಸ್ಥೆ ಮಾಡಿಸಲಾಗಿದೆ. ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಹೇಗೆ ಮಾಡಲಾಗಿದೆ. ಏನೇನು ಅಡುಗೆಗಳನ್ನು ಮಾಡಲಾಗಿದೆ. ಇಲ್ಲಿದೆ ನೋಡಿ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ