ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಪುತ್ರಿ ಪ್ರಿಯಾಂಕಾ ಹೆಸರು ಚರ್ಚೆ; ಸತೀಶ್ ಜಾರಕಿಹೊಳಿ ಹೇಳಿದ್ದೇನು?

ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಪುತ್ರಿ ಪ್ರಿಯಾಂಕಾ ಹೆಸರು ಚರ್ಚೆ; ಸತೀಶ್ ಜಾರಕಿಹೊಳಿ ಹೇಳಿದ್ದೇನು?

TV9 Web
| Updated By: ಆಯೇಷಾ ಬಾನು

Updated on: Mar 17, 2024 | 2:08 PM

ಬೆಳಗಾವಿಯ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ನಿಮ್ಮ ಮಗಳ ಸ್ಪರ್ಧೆ ಮಾಡ್ಸಿ ಎಂದು ಹೈಕಮಾಂಡ್ ಹೇಳಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್​ ಅವರೂ ಸಹ ಸತೀಶ್ ಜಾರಕಿಹೊಳಿ ಮೇಲೆ ಒತ್ತಡ ಹಾಕಿದ್ದಾರೆ. ಆದರೆ‌ ಜಿಲ್ಲೆಯ ನಾಯಕರ ಸಹಮತ ಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಕಾಯ್ತಿದ್ದಾರೆ.

ಬೆಳಗಾವಿ, ಮಾರ್ಚ್​.17: ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಸ್ಪರ್ಧೆಗೆ ಕೈ ಹೈಕಮಾಂಡ್ ಅಸ್ತು ಎಂದಿದ್ದಾರೆ. ಆದರೂ ಸತೀಶ್‌ ಜಾರಕಿಹೊಳಿ‌ ಅವರು ಜಿಲ್ಲಾ ನಾಯಕರ ಒಪ್ಪಿಗೆಗೆ ಕಾಯ್ತಿದ್ದಾರೆ. ಬೆಳಗಾವಿಯ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ನಿಮ್ಮ ಮಗಳ ಸ್ಪರ್ಧೆ ಮಾಡ್ಸಿ ಎಂದು ಹೈಕಮಾಂಡ್ ಹೇಳಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್​ ಅವರೂ ಸಹ ಸತೀಶ್ ಜಾರಕಿಹೊಳಿ ಮೇಲೆ ಒತ್ತಡ ಹಾಕಿದ್ದಾರೆ. ಆದರೆ‌ ಜಿಲ್ಲೆಯ ನಾಯಕರ ಸಹಮತ ಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಕಾಯ್ತಿದ್ದಾರೆ.

ಜಿಲ್ಲಾ ನಾಯಕರ ಚರ್ಚೆ ಮಾಡಿ ಅಂತಿಮ ನಿರ್ಧಾರ ಹೇಳ್ತಿವಿ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಜಿಲ್ಲಾ ನಾಯಕರ ಜೊತೆಗೆ ಚರ್ಚೆ‌ ಮಾಡಿ ಅಂತಿಮ ನಿರ್ಧಾರ ಹೇಳ್ತಿನಿ. ಚಿಕ್ಕೋಡಿಗೆ ಪ್ರಿಯಾಂಕಾ ಹೆಸರು, ಬೆಳಗಾವಿಗೆ ಹೆಬ್ಬಾಳ್ಕರ್ ಹೆಸರು ಚರ್ಚೆ ಆಗ್ತಿದೆ‌ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ನೀತಿ ಸಂಹಿತೆ ಜಾರಿಗೂ ಮುನ್ನ ಸಾಕಷ್ಟು ಸಭೆಗಳನ್ನ ಮಾಡಿದ್ದೇವೆ. ಶೀಘ್ರದಲ್ಲಿ ಇನ್ನೊಂದು ಲಿಸ್ಟ್ ಕೂಡ ಬಿಡುಗಡೆ ಆಗುತ್ತೆ ಎಂದರು.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ