ಅಭಿಮಾನಿಗಳಿಗೆ ಊಟ ಬಡಿಸಿದ ಪುನೀತ್ ರಾಜ್ಕುಮಾರ್ ಪುತ್ರಿ
Puneeth Rajkumar: ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದಂದು ಸ್ಮಾರಕ ದರ್ಶನಕ್ಕೆ ಆಗಮಿಸಿದ್ದ ಲಕ್ಷಾಂತರ ಅಭಿಮಾನಿಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಪುನೀತ್ ರಾಜ್ಕುಮಾರ್ರ ಪುತ್ರಿ ಅಭಿಮಾನಿಗಳಿಗೆ ಊಟ ಬಡಿಸಿದರು.
ಪುನೀತ್ ರಾಜ್ಕುಮಾರ್ (Puneeth Rajkumar) ಹುಟ್ಟುಹಬ್ಬದ ಪ್ರಯುಕ್ತ ಇಂದು (ಮಾರ್ಚ್ 17) ಕಂಠೀರವ ಸ್ಟುಡಿಯೋದಲ್ಲಿನ ಪುನೀತ್ ರಾಜ್ಕುಮಾರ್ ಸ್ಮಾರಕಕ್ಕೆ ವಿಶೇಷ ಪೂಜೆ ನೆರವೇರಿಸಲಾಯ್ತು. ಲಕ್ಷಾಂತರ ಮಂದಿ ಅಭಿಮಾನಿಗಳು ಸಮಾಧಿಗೆ ಭೇಟಿ ನೀಡಿ ದರ್ಶನ ಪಡೆದರು. ಅಪ್ಪು ಅಭಿಮಾನಿಗಳು ಸೇರಿ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಣೆ ಮಾಡಿದರು. ದೊಡ್ಮನೆ ಕುಟುಂಬದವರು ಸಹ ಸಮಾಧಿ ಬಳಿ ನೆರೆದು, ವಿಶೇಷ ಪೂಜೆಯನ್ನು ಮಾಡಿದರು. ಪುನೀತ್ ರಾಜ್ಕುಮಾರ್ ಪುತ್ರಿ, ತಮ್ಮ ದೊಡ್ಡಪ್ಪ ರಾಘವೇಂದ್ರ ರಾಜ್ಕುಮಾರ್ ಹಾಗೂ ದೊಡ್ಡಮ್ಮ ಪೂರ್ಣಿಮಾ ಅವರೊಟ್ಟಿಗೆ ಸೇರಿಕೊಂಡು ಅಪ್ಪನಿಗೆ ಪೂಜೆ ಸಲ್ಲಿಸಿದರು. ಅಪ್ಪು ಸಮಾಧಿ ದರ್ಶನಕ್ಕೆ ಆಗಮಿಸಿದ್ದ ಅಭಿಮಾನಿಗಳಿಗೆ ದೊಡ್ಮನೆಯಿಂದ ಅಡುಗೆ ವ್ಯವಸ್ಥೆ ಮಾಡಲಾಗಿತ್ತು. ಅಪ್ಪು ಪುತ್ರಿ, ಅಣ್ಣಂದಿರಾದ ವಿನಯ್ ರಾಜ್ಕುಮಾರ್, ಯುವ ರಾಜ್ಕುಮಾರ್ ಅವರೊಟ್ಟಿಗೆ ಸೇರಿ ಅಭಿಮಾನಿಗಳಿಗೆ ಅಡುಗೆ ಬಡಿಸಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos