ಮಂಡಲೋತ್ಸವ ಸಂಪನ್ನ: ಅಯೋಧ್ಯೆಯಿಂದ ರಾಜ್ಯಕ್ಕೆ ವಾಪಸಾದ ಪೇಜಾವರ ಶ್ರೀಗಳು

ಮಂಡಲೋತ್ಸವ ಸಂಪನ್ನ: ಅಯೋಧ್ಯೆಯಿಂದ ರಾಜ್ಯಕ್ಕೆ ವಾಪಸಾದ ಪೇಜಾವರ ಶ್ರೀಗಳು

TV9 Web
| Updated By: ವಿವೇಕ ಬಿರಾದಾರ

Updated on:Mar 17, 2024 | 11:10 AM

ಅಯೋಧ್ಯೆ ರಾಮ ಮಂದಿರದಲ್ಲಿ 48 ದಿನಗಳ ಮಂಡಲೋತ್ಸವ ನೆರವೇರಿಸಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಗಳು ಕರ್ನಾಟಕಕ್ಕೆ ವಾಪಸ್​ ಆಗಿದ್ದಾರೆ. ಶ್ರೀಗಳನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಶಾಸಕ ವೇದವ್ಯಾಸ್ ಮತ್ತು ವಿಹೆಚ್​ಪಿ ಮುಖಂಡರು ಸ್ವಾಗತಿಸಿದರು.

ಮಂಗಳೂರು, ಮಾರ್ಚ್​ 17: ಅಯೋಧ್ಯೆ (Ayodhye) ರಾಮ ಮಂದಿರದಲ್ಲಿ (Ram Mandir) 48 ದಿನಗಳ ಮಂಡಲೋತ್ಸವ (Mandalostav) ನೆರವೇರಿಸಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ (Pejawar Math Shri) ಶ್ರೀಗಳು ಕರ್ನಾಟಕಕ್ಕೆ ವಾಪಸ್​ ಆಗಿದ್ದಾರೆ. ಶ್ರೀಗಳನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಶಾಸಕ ವೇದವ್ಯಾಸ್ ಮತ್ತು ವಿಹೆಚ್​ಪಿ ಮುಖಂಡರು ಸ್ವಾಗತಿಸಿದರು.

ಏನಿದು ಮಂಡಲೋತ್ಸವ

ಶ್ರೀ ಪೇಜಾವರ ವಿಶ್ವೇಶತೀರ್ಥ ಶ್ರೀಗಳು ಮತ್ತು ದೇಶದ ಬೇರೆ ಭಾಗದ ವಿದ್ಯಾಪೀಠಗಳಲ್ಲಿ ಅಧ್ಯಯನ ಮಾಡಿರುವ ವಿದ್ವಾಂಸರು ಅಯೋಧ್ಯೆ ರಾಮ ಮಂದಿರದಲ್ಲಿ ಮಂಡ ಪೂಜೆ ಮಾಡಿದರು. ಮೊದಲ 44 ದಿನ ನಿತ್ಯ ಹೋಮ, ಹವನಗಳ ಜತೆಗೆ ಕಲಾಶಾಭಿಷೇಕ, ಪ್ರತಿಮೆಗೆ ತತ್ವನ್ಯಾಸ ಇತ್ಯಾದಿ ವಿಧಿವಿಧಾನಗಳು ನಡೆದವು. ಪ್ರತಿನಿತ್ಯ ಸಂಜೆ ಉತ್ಸವ ನಡೆಯಿತು. ಕೊನೆಯ ನಾಲ್ಕು ದಿನಗಳ ಕಾಲ ಬ್ರಹ್ಮಕಲಶಾಭಿಷೇಕದ ರೀತಿಯಲ್ಲಿ ಸಹಸ್ರ ಕಲಶಾಭಿಷೇಕ ಜರುಗಿತು. ರಾಮರಾಜ್ಯ ಪರಿಕಲ್ಪನೆಯಡಿ ಜಿಲ್ಲಾಮಟ್ಟದಲ್ಲಿ ಸಮಿತಿಗಳನ್ನು ರಚಿಸಿದ್ದು, ಈ ಅವಧಿಯಲ್ಲಿ ಆ ಸಮಿತಿಗಳು ರಾಮರಾಜ್ಯ ಪರಿಕಲ್ಪನೆಯಡಿ ಕೆಲಸ ಮಾಡಲು ಅಯೋಧ್ಯೆಗೆ ಬಂದು ಸಂಕಲ್ಪ ಮಾಡಿದವು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published on: Mar 17, 2024 11:01 AM