PM Narendra Modi’s Visit to Davanagere: ಪ್ರಧಾನಿಯವರ ಕಾರ್ಯಕ್ರಮಕ್ಕೆ ಎಲ್ಲ ಊಟ-ತಿಂಡಿಯ ವ್ಯವಸ್ಥೆ ಭರದಿಂದ ನಡೆಯುತ್ತಿದೆ!
ಮಧ್ಯಾಹ್ನದ ಹೊತ್ತಿಗೆ ಕಾರ್ಯಕ್ರಮಕ್ಕೆ ಆಗಮಿಸುವವರ ಸಂಖ್ಯೆ 5-6 ಲಕ್ಷಗಳಿಗೆ ಏರುವ ನಿರೀಕ್ಷೆಯಿದೆ. ಮಧ್ಯಾಹ್ನದ ಊಟಕ್ಕೆ ಗೋಧಿ ಪಾಯಸ, ಪುಲಾವ್ ಮತ್ತು ಮೊಸರನ್ನ ತಯಾರಿಸಲಾಗುತ್ತಿದ್ದು ನಗರದೆಲ್ಲೆಡೆ ಪೊಲೀಸರ ಸರ್ಪಗಾವಲು ನಿಯೋಜಿಸಲಾಗಿದೆ.
ದಾವಣಗೆರೆ: ಇಂದು ಮಧ್ಯಾಹ್ನ ನಗರಕ್ಕೆ ಆಗಮಿಸಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (PM Narendra Modi) ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರ್ಜರಿಯಾಗಿ ನಡೆದಿವೆ. ಲಕ್ಷಾಂತರ ಜನಕ್ಕೆ ಅಡುಗೆ ತಯಾರಿಸಿ ಬಡಿಸುವ ಗುತ್ತಿಗೆಯನ್ನು ಬೆಂಗಳೂರಿನ ಕೇಶವ್ ಅಂಡ್ ಸನ್ಸ್ (Keshav & Sons) ಕೇಟರಿಂಗ್ ಸಂಸ್ಥೆಗೆ ನೀಡಲಾಗಿದೆ. ದಾವಣಗೆರೆ ಟಿವಿ9 ಪ್ರತಿನಿಧಿ ಕೇಟರಿಂಗ್ ವಿಭಾಗದ ಮುಖ್ಯಸ್ಥರೊಂದಿಗೆ ಮಾತಾಡಿದ್ದಾರೆ. ಬೆಳಗಿನ ಉಪಹಾರಕ್ಕಾಗಿ, ಸುಮಾರು 25,000 ಜನಕ್ಕೆ ಉಪ್ಪಿಟ್ಟನ್ನು (uppit) ತಯಾರಿಸಲಾಗಿದೆ. ಮಧ್ಯಾಹ್ನದ ಹೊತ್ತಿಗೆ ಕಾರ್ಯಕ್ರಮಕ್ಕೆ ಆಗಮಿಸುವವರ ಸಂಖ್ಯೆ 5-6 ಲಕ್ಷಗಳಿಗೆ ಏರುವ ನಿರೀಕ್ಷೆಯಿದೆ. ಮಧ್ಯಾಹ್ನದ ಊಟಕ್ಕೆ ಗೋಧಿ ಪಾಯಸ, ಪುಲಾವ್ ಮತ್ತು ಮೊಸರನ್ನ ತಯಾರಿಸಲಾಗುತ್ತಿದ್ದು ನಗರದೆಲ್ಲೆಡೆ ಪೊಲೀಸರ ಸರ್ಪಗಾವಲು ನಿಯೋಜಿಸಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ