ಚಾಮರಾಜನಗರ: ಗ್ರಾಮಕ್ಕೆ ಮಳೆ, ಮದುವೆಗೆ ಕನ್ಯೆ ಸಿಗಲೆಂದು ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ
ಗ್ರಾಮಕ್ಕೆ ಮಳೆ, ಮದುವೆಗೆ ಕನ್ಯೆ ಸಿಗಲೆಂದು ನೂರಾರು ಯುವಕರು ಗುಂಡ್ಲುಪೇಟೆಯ ವಿವಿಧ ಭಾಗಗಳಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ನಡೆಸಿದ್ದಾರೆ. ಕೂತನೂರು, ಭೀಮನಬೀಡು, ಕೊಡಹಳ್ಳಿಯ ನೂರಾರು ಮಂದಿ 200 ಕಿ.ಮೀ.ಗಿಂತ ಹೆಚ್ಚು ದೂರ ಬರಿಗಾಲಿನಲ್ಲಿ ಪಾದಯಾತ್ರೆ ಕೈಗೊಂಡಿದ್ದಾರೆ. ದಾರಿಯುದ್ದಕ್ಕೂ ಮಹದೇಶ್ವರನ ಜಪ, ಜಾನಪದ ಹಾಡು ಹೇಳಿ ಸಾಗಿರುವ ದೃಶ್ಯಗಳು ಕಂಡುಬಂದಿವೆ.
ಚಾಮರಾಜನಗರ, ಅಕ್ಟೋಬರ್ 13: ಗ್ರಾಮಕ್ಕೆ ಮಳೆ, ಯುವಕರಿಗೆ ಮದುವೆಗೆ ಕನ್ಯೆ ಸಿಗಲಿ ಎಂದು
ಮೂರು ಗ್ರಾಮಗಳ ನೂರಾರು ಸಂಖ್ಯೆಯ ರೈತರು ಹಾಗೂ ಯುವಕರು ಪಾದಯಾತ್ರೆ ಮೂಲಕ ಮಾದಪ್ಪನ ( Male Mahadeshwara )ಮೊರೆ ಹೋಗಿದ್ದಾರೆ. ಗುಂಡ್ಲುಪೇಟೆ ತಾಲ್ಲೂಕಿನ ಕೂತನೂರು, ಭೀಮನಬೀಡು, ಕೊಡಹಳ್ಳಿಯ ನೂರಾರು ಮಂದಿ ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ನಡೆಸಿದ್ದಾರೆ. 200 ಕಿ.ಮೀ.ಗಿಂತ ಹೆಚ್ಚು ದೂರ ಬರಿಗಾಲಿನಲ್ಲಿ ಪಾದಯಾತ್ರೆ ನಡೆಸಲಾಗಿದ್ದು, ದಾರಿಯುದ್ದಕ್ಕೂ ಭಕ್ತರಿಂದ ಉಘೇ ಉಘೇ ಮಾದಪ್ಪ ಎಂಬ ಘೋಷಣೆ ಕೇಳಿಬಂದಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.