AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಮುನ್ನಲೆಗೆ ಬಂದ ಮಲೆ ಮಹದೇಶ್ವರ ಬೆಟ್ಟದ ಮ್ಯೂಸಿಯಂ ವಿವಾದ: ಉದ್ಘಾಟನೆಯಾದ್ರೆ ಸಿಎಂಗೆ ಸಂಕಷ್ಟನಾ?

ನಿರ್ಮಾಣ ಹಂತದಿಂದ ಹಿಡಿದು ಉದ್ಘಾಟನೆವರೆಗೂ ಸದಾ ಒಂದಿಲ್ಲೊಂದು ಕಾಂಟ್ರವರ್ಸಿಯಿಂದ ಕೂಡಿರುವ ಮಲೆ ಮಹದೇಶ್ವರ 108 ಅಡಿ ಪುತ್ಥಳಿಯ ಕೆಳಗಿರುವ ಮ್ಯೂಸಿಯಂ ಈಗ ಮತ್ತೊಂದು ವಿವಾದದ ಕೇಂದ್ರ ಬಿಂದುವಾಗಿದೆ. ರಾಮಮೊಗಪ್ಪ ಕುಟುಂಬವನ್ನ ಕಡೆಗಣನೆ ಅವರ ವಂಶಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಏಪ್ರಿಲ್ 24 ರಂದು ಮ್ಯೂಸಿಯಂ ಉದ್ಗಾಟನೆಯಾಗುತ್ತಾ ಎಂಬ ಪ್ರಶ್ನೆ ಮೂಡಿದೆ.

ಮತ್ತೆ ಮುನ್ನಲೆಗೆ ಬಂದ ಮಲೆ ಮಹದೇಶ್ವರ ಬೆಟ್ಟದ ಮ್ಯೂಸಿಯಂ ವಿವಾದ: ಉದ್ಘಾಟನೆಯಾದ್ರೆ ಸಿಎಂಗೆ ಸಂಕಷ್ಟನಾ?
ಮಲೆ ಮಹದೇಶ್ವರ ಬೆಟ್ಟದ ಮ್ಯೂಸಿಯಂ
ಸೂರಜ್ ಪ್ರಸಾದ್ ಎಸ್.ಎನ್
| Edited By: |

Updated on: Apr 21, 2025 | 11:08 AM

Share

ಚಾಮರಾಜನಗರ, ಏಪ್ರಿಲ್​ 21: ಮಲೆ ಮಹದೇಶ್ವರ ಬೆಟ್ಟ (Male Mahadeshwara Hill) ಹೆಸರು ಕೇಳಿದರೆ ಸಾಕು, ಶಿವನ ಭಕ್ತರ ಕಿವಿಗಳು ನೆಟ್ಟಗಾಗುತ್ತವೆ. ಮಾದಪ್ಪನಿಗೆ ಇರುವ ಭಕ್ತರ ಸಂಖ್ಯೆ ಅಪಾರ. ಆದರೆ ಸದಾ ಒಂದಿಲ್ಲೊಂದು ಎಡವಟ್ಟಿನಿಂದ ಮಾದಪ್ಪನ ಬೆಟ್ಟ ಸುದ್ದಿ ಆಗುತ್ತಲೇ ಇದೆ. ಇದೀಗ ಅಂತಹದೇ ಒಂದು ಕಾಂಟ್ರವರ್ಸಿಯಿಂದ ಮತ್ತೊಮ್ಮೆ ಮಲೆ ಮಹದೇಶ್ವರ ಬೆಟ್ಟ ಸುದ್ದಿಯಾಗಿದೆ. ಅದೇನೆಂದರೆ 108 ಅಡಿ ಮಹದೇಶ್ವರರ ಪುತ್ಥಳಿ ಕೆಳಗೆ ನಿರ್ಮಾಣವಾಗಿರುವ ಮ್ಯೂಸಿಯಂ (Museum) ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ.

ಮಾದಪ್ಪನ ಇತಿಹಾಸ ಸಾರುವ ಕಲಾಕೃತಿಗಳು ಮ್ಯೂಸಿಯಂನಲ್ಲಿದೆ. ಆ ಕಲಾಕೃತಿಗಳಲ್ಲಿ ರಾಮಮೊಗಪ್ಪ ದಂಪತಿಯ ಕಲಾಕೃತಿ ನಿರ್ಮಾಣ ಆಗದೆ ಇರುವುದು ಆ ವಂಶಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಸರಗೂರು ಮಠದ ಸಿದ್ದಪ್ಪ ನ್ಯಾಯಾಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಮೂರ್ತಿ ದೇವದಾಸ್​ ಅವರು ಪುತ್ಥಳಿಗೆ ಅವಕಾಶ ನೀಡುವಂತೆ ಪ್ರಾಧಿಕಾರ ಹಾಗೂ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.

ಇದನ್ನೂ ಓದಿ: ಇತಿಹಾಸದಲ್ಲಿ ಮೊದಲ ಬಾರಿಗೆ ಮಾದಪ್ಪನ ಬೆಟ್ಟದಲ್ಲಿ ಸಂಪುಟ ಸಭೆ: ಹಲವು ನಿರೀಕ್ಷೆ

ಇದನ್ನೂ ಓದಿ
Image
Tv9 ವರದಿ: ಮಹದೇಶ್ವರ ಬೆಟ್ಟದ ವ್ಯಾಪ್ತಿಯ ಗ್ರಾಮಗಳಿಗೆ ಆ್ಯಂಬುಲೆನ್ಸ್ ಸೇವೆ
Image
ಇತಿಹಾಸದಲ್ಲಿ ಮೊದಲ ಬಾರಿಗೆ ಮಾದಪ್ಪನ ಬೆಟ್ಟದಲ್ಲಿ ಸಂಪುಟ ಸಭೆ
Image
ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಏಣಿಕೆ: ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
Image
ಮಲೆಮಹದೇಶ್ವರ ದೇವಸ್ಥಾನದ ಗೋಪುರವೇರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ಇನ್ನು ನ್ಯಾಯಾಲಯ ಪ್ರಶ್ನೆ ಮಾಡುತ್ತಿದ್ದಂತೆ ಪ್ರಾಧಿಕಾರದ ಪರ ವಕೀಲರು ಮ್ಯೂಸಿಯಂ ಸಂಪೂರ್ಣವಾಗಿಲ್ಲ ಎಂದು ಸಬೂಬು ನೀಡಿದ್ದರು. ಆದರೆ ಈಗ ಮ್ಯೂಸಿಯಂ ಸಂಪೂರ್ಣವಾಗಿದ್ದು, ಇದೇ ಏಪ್ರಿಲ್ 24 ರಂದು ಉದ್ಗಾಟನೆ ಕೂಡ ಆಗುತ್ತಿದೆ. ಆದರೆ ಇದು ಅಪೂರ್ಣಗೊಂಡ ಮ್ಯೂಸಿಯಂ ಯಾವುದೇ ಕಾರಣಕ್ಕೂ ಉದ್ಘಾಟನೆ ಮಾಡಬಾರದು ಎಂದು ರಾಮಮೋಗಪ್ಪ ವಂಶಸ್ಥರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಪ್ರಾಧಿಕಾರದ ಅಧ್ಯಕ್ಷರಾಗಿರುವ ಸಿಎಂ ಸಿದ್ದರಾಮಯ್ಯ, ಒಂದು ವೇಳೆ ಮ್ಯೂಸಿಯಂ ಉದ್ಘಾಟನೆ ಮಾಡಿದರೆ ಕಟ್ಮೆಂಟ್ ಆಫ್ ಕೋರ್ಟ್ ಆಗುವ ಸಾಧ್ಯೆತೆಯಿದೆ.

ಇದನ್ನೂ ಓದಿ: Tv9 ವರದಿ ಇಂಪ್ಯಾಕ್ಟ್: ಮಲೆಮಹದೇಶ್ವರ ಬೆಟ್ಟದ ವ್ಯಾಪ್ತಿಯ ಗ್ರಾಮಗಳಿಗೆ ಆ್ಯಂಬುಲೆನ್ಸ್ ಸೇವೆ

ಮಹದೇಶ್ವರರಿಗೆ ಮೊದಲು ಎಣ್ಣೆ ಮಜ್ಜನ ಮಾಡಿಸಿದ್ದು, ಮಹದೇಶ್ವರನ ಪೂಜೆಗೆ ಮಹಿಳೆಯರಿಗೂ ಅವಕಾಶವನ್ನ ಕಲ್ಪಿಸಿದ್ದು, ಇದೇ ರಾಮಮೊಗಪ್ಪ ಕುಟುಂಬ. ಆದರೆ ಈ ಕುಟುಂಬವನ್ನ ಕಡೆಗಣನೆ ಮಾಡಿರುವುದು ಎಷ್ಟು ಸರಿ ಎನ್ನುವುದು ಅವರ ವಂಶಸ್ಥರ ಪ್ರಶ್ನೆಯಾಗಿದೆ. ನಿಜಕ್ಕೂ ಏಪ್ರಿಲ್ 24 ರಂದು ಮ್ಯೂಸಿಯಂ ಉದ್ಗಾಟನೆಯಾಗುತ್ತಾ ಎಂಬ ಪ್ರಶ್ನೆ ಕಾಡುತ್ತಿದ್ದು, ಇದಕ್ಕೆ ಮಲೆ ಮಹದೇಶ್ವರ ಪ್ರಾಧಿಕಾರ ಹಾಗೂ ಜಿಲ್ಲಾಡಳಿತವೆ ಉತ್ತರಿಸಬೆಕಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
18 ಹಲ್ಲುಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲು ದಂತ ವೈದ್ಯರ ಯತ್ನ, ಬಾಲಕಿ ಸಾವು
18 ಹಲ್ಲುಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲು ದಂತ ವೈದ್ಯರ ಯತ್ನ, ಬಾಲಕಿ ಸಾವು
ಮತದಾನದ ವೇಳೆ ಮುರ್ಷಿದಾಬಾದ್​ನಲ್ಲಿ ಬಾಂಬ್ ದಾಳಿ, ಹಲವರಿಗೆ ಗಾಯ
ಮತದಾನದ ವೇಳೆ ಮುರ್ಷಿದಾಬಾದ್​ನಲ್ಲಿ ಬಾಂಬ್ ದಾಳಿ, ಹಲವರಿಗೆ ಗಾಯ
ಕೊಡಗು: ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ, ಹೋಂಸ್ಟೇ ಪರವಾನಗಿ ರದ್ದು
ಕೊಡಗು: ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ, ಹೋಂಸ್ಟೇ ಪರವಾನಗಿ ರದ್ದು
ಮಿರ್ಜಾಪುರದಲ್ಲಿ ಎರಡು ಟ್ರಕ್​ಗಳ ನಡುವೆ ಸಿಲುಕಿ ನಜ್ಜುಗುಜ್ಜಾದ ವಾಹನಗಳು
ಮಿರ್ಜಾಪುರದಲ್ಲಿ ಎರಡು ಟ್ರಕ್​ಗಳ ನಡುವೆ ಸಿಲುಕಿ ನಜ್ಜುಗುಜ್ಜಾದ ವಾಹನಗಳು
ಸಾಮಾನ್ಯ ವ್ಯಕ್ತಿಯಂತೆ ಬಂದು ಮತ ಚಲಾಯಿಸಿದ ಸೂಪರ್ ಸ್ಟಾರ್ ರಜನಿಕಾಂತ್ 
ಸಾಮಾನ್ಯ ವ್ಯಕ್ತಿಯಂತೆ ಬಂದು ಮತ ಚಲಾಯಿಸಿದ ಸೂಪರ್ ಸ್ಟಾರ್ ರಜನಿಕಾಂತ್ 
ರಾಜಗಾಂಭಿರ್ಯದಿಂದ ರಸ್ತೆಗೆ ಬಂದ ಹುಲಿ: ಅಪರೂಪದ ವಿಡಿಯೋ ಇಲ್ಲಿದೆ
ರಾಜಗಾಂಭಿರ್ಯದಿಂದ ರಸ್ತೆಗೆ ಬಂದ ಹುಲಿ: ಅಪರೂಪದ ವಿಡಿಯೋ ಇಲ್ಲಿದೆ
‘ರಕ್ಷಿತಾ ರೀತಿ ನಾನು ಪ್ರೇಮ್ ಜೊತೆ ಸಂಸಾರ ಮಾಡ್ತಿದೀನಿ’; ಅರ್ಜುನ್ ಜನ್ಯ
‘ರಕ್ಷಿತಾ ರೀತಿ ನಾನು ಪ್ರೇಮ್ ಜೊತೆ ಸಂಸಾರ ಮಾಡ್ತಿದೀನಿ’; ಅರ್ಜುನ್ ಜನ್ಯ
17 ಗಂಟೆಗಳ ಹೋರಾಟದ ಬಳಿಕವೂ ಚಿಕಿತ್ಸೆ ಫಲಿಸದೆ ಹೆಣ್ಣಾನೆ ಸಾವು!
17 ಗಂಟೆಗಳ ಹೋರಾಟದ ಬಳಿಕವೂ ಚಿಕಿತ್ಸೆ ಫಲಿಸದೆ ಹೆಣ್ಣಾನೆ ಸಾವು!
ಶಾಸಕರ ಕಚೇರಿಗೇ ವಿದ್ಯುತ್ ಸಂಪರ್ಕ ಕಟ್! ಬಿಲ್ ಬಾಕಿ ಉಳಿಸಿಕೊಂಡಿದ್ದೇ ಕಾರಣ
ಶಾಸಕರ ಕಚೇರಿಗೇ ವಿದ್ಯುತ್ ಸಂಪರ್ಕ ಕಟ್! ಬಿಲ್ ಬಾಕಿ ಉಳಿಸಿಕೊಂಡಿದ್ದೇ ಕಾರಣ
ಮನೆ ಹಾಲ್ ಹ್ಯಾಂಗಿಂಗ್​ನಲ್ಲಿ ರಾಜನಂತೆ ಕುಳಿತಿದ್ದ ನಾಗರಾಜ!
ಮನೆ ಹಾಲ್ ಹ್ಯಾಂಗಿಂಗ್​ನಲ್ಲಿ ರಾಜನಂತೆ ಕುಳಿತಿದ್ದ ನಾಗರಾಜ!