Anekal: ಆನೇಕಲ್ನಲ್ಲಿ ಬಿಜೆಪಿ ಕಾರ್ಯಕರ್ತನ ಮನೆಯಲ್ಲಿ ಬಾಳೆ ಎಲೆಯಲ್ಲಿ ಊಟ ಮಾಡಿದ ವಿದೇಶಾಂಗ ಸಚಿವ ಜೈಶಂಕರ್
S Jai Shankar: ಧಾನಿ ನರೇಂದ್ರ ಮೋದಿ ಸರ್ಕಾರದ್ದು ಎರಡು ಧ್ಯೇಯಗಳಿವೆ - ಸಾಮಾಜಿಕ ನ್ಯಾಯ ಹಾಗೂ ಆರ್ಥಿಕ ಭದ್ರತೆ ಕುರಿತು ಜಾಗೃತಿ ನಮ್ಮದಾಗಿದೆ. ಅದೇ ವಿಚಾರವನ್ನು ಇಡೀ ದೇಶದಲ್ಲಿ ತೆಗೆದುಕೊಂಡು ಹೋಗುತ್ತಿದ್ದೇವೆ. ನಮ್ಮ ಪಕ್ಷದ ಕಾರ್ಯಕರ್ತನ ಮನೆಯಲ್ಲಿ ಆಹ್ವಾನದ ಮೇರೆಗೆ ಬಂದು ಊಟ ಮಾಡಿದ್ದು ಖುಷಿಯಾಗಿದೆ ಎಂದರು.
ಬೆಂಗಳೂರು ಆನೇಕಲ್ನ ಬಿಜೆಪಿ (Anekal BJP) ಕಾರ್ಯಕರ್ತರೊಬ್ಬರ ಮನೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ (Foreign minister S Jai Shankar) ಅವರು ಸಾಮಾನ್ಯರಂತೆ ನೆಲದ ಮೇಲೆ ಕುಳಿತು ಬಾಳೆ ಎಲೆಯಲ್ಲಿ (Banana Leaf) ಬೊಂಬಾಟ್ ಭೋಜನ ಸವಿದಿದ್ದಾರೆ. ಇದಕ್ಕೂ ಮುನ್ನ ಬೆಂಗಳೂರು ಭೇಟಿ ಸಂದರ್ಭದಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ್ದು ಎರಡು ಧ್ಯೇಯಗಳಿವೆ – ಸಾಮಾಜಿಕ ನ್ಯಾಯ ಹಾಗೂ ಆರ್ಥಿಕ ಭದ್ರತೆ ಕುರಿತು ಜಾಗೃತಿ ನಮ್ಮದಾಗಿದೆ. ಈ ಬಗ್ಗೆ ನಾವು ಜಾಗೃತಿ ಮೂಡಿಸುತ್ತಿದ್ದೇವೆ. ಅದೇ ವಿಚಾರವನ್ನು ಇಡೀ ದೇಶದಲ್ಲಿ ತೆಗೆದುಕೊಂಡು ಹೋಗುತ್ತಿದ್ದೇವೆ. ನಮ್ಮ ಪಕ್ಷದ ಕಾರ್ಯಕರ್ತನ ಮನೆಯಲ್ಲಿ ಆಹ್ವಾನದ ಮೇರೆಗೆ ಬಂದು ಊಟ ಮಾಡಿದ್ದು ಖುಷಿಯಾಗಿದೆ ಎಂದರು.