ಬಹಳ ಸಮಯದಿಂದ ಹಾಸನದ ಹಲವು ಗ್ರಾಮಗಳಲ್ಲಿ ಪುಂಡಾಟ ಮೆರೆಯುತ್ತಿದ್ದ ಮದಿಸಿದ ಆನೆ ಸೆರೆಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 30, 2022 | 7:40 PM

ಅರಣ್ಯ ಇಲಾಖೆ ಸಿಬ್ಬಂದಿಯು ಸಕಲೇಶಪುರದ ಕಡೆಗರ್ಜೆ (Kadegarje) ಗ್ರಾಮದ ಬಳಿ ಒಂದು ಮದಿಸಿದ ಕಾಡಾನೆಯನ್ನು ಆರು ಸಾಕು ಆನೆಗಳ ಸಹಾಯದಿಂದ ಸೆರೆಹಿಡಿದಿದ್ದಾರೆ. ಸೆರೆ ಹಿಡಿಯಲಾಗಿರುವ ಆನೆಯು ಈ ಭಾಗದ ಜನರಿಗೆ ವಿಪರೀತ ಕಾಟ ಕೊಟ್ಟಿದ್ದಲ್ಲದೆ 2-3 ಜನರ ಪ್ರಾಣ ಕೂಡ ತೆಗೆದಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಹಾಸನ ಮತ್ತು ಮಲೆನಾಡಿನ (Malnad) ಇತರ ಭಾಗದಲ್ಲಿ ಕಾಡಾನೆಗಳ ಉಪಟಳ ವಿಪರೀತವಾಗಿದೆ ಅಂತ ನಾವು ಆಗಾಗ ವಿಡಿಯೋಗಳ ಮೂಲಕ ತೋರಿಸುತ್ತಿರುತ್ತೇವೆ. ಗುರುವಾರ ಬೆಳಗ್ಗೆ ಅರಣ್ಯ ಇಲಾಖೆ (forest department) ಸಿಬ್ಬಂದಿಯು ಸಕಲೇಶಪುರದ ಕಡೆಗರ್ಜೆ (Kadegarje) ಗ್ರಾಮದ ಬಳಿ ಒಂದು ಮದಿಸಿದ ಕಾಡಾನೆಯನ್ನು ಆರು ಸಾಕು ಆನೆಗಳ ಸಹಾಯದಿಂದ ಸೆರೆಹಿಡಿದಿದ್ದಾರೆ. ಸೆರೆ ಹಿಡಿಯಲಾಗಿರುವ ಆನೆಯು ಈ ಭಾಗದ ಜನರಿಗೆ ವಿಪರೀತ ಕಾಟ ಕೊಟ್ಟಿದ್ದಲ್ಲದೆ 2-3 ಜನರ ಪ್ರಾಣ ಕೂಡ ತೆಗೆದಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಅವರ ಪ್ರಕಾರ ಇನ್ನೂ 26 ಆನೆಗಳು ಜನವಸತಿ ಪ್ರದೇಶಕ್ಕೆ ದಾಳಿ ಇಡುತ್ತಿರುತ್ತವಂತೆ, ಅವನ್ನೆಲ್ಲ ಹಿಡಿದಾಗಲೇ ಜನ ನೆಮ್ಮದಿ ಮತ್ತು ನಿರಾತಂಕದಿಂದ ಓಡಾಡಬಹುದು ಅಂತ ಅವರು ಹೇಳುತ್ತಾರೆ.

ಇದನ್ನೂ ಓದಿ:    Viral Video: ಕ್ಯಾಮಾರಾ ಕಣ್ಣಿಗೆ ಬಿದ್ದ ‘ಚಿನ್ನದ ಸರ ಸಾಗಾಣಿಕದಾರರು’: ಇರುವೆಗಳ ಸಾಹಸದ ವಿಡಿಯೋ ವೈರಲ್