ಮೈಸೂರು ಮೃಗಾಲಯಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಭೇಟಿ: ಸಿಂಹದ ಮರಿಗಳಿಗೆ ನಾಮಕರಣ

Edited By:

Updated on: Jul 16, 2023 | 9:38 PM

ಮೈಸೂರು ಮೃಗಾಲಯದ ಒಂದು ವರ್ಷ ವಯಸ್ಸಿನ ಮೂರು ಸಿಂಹದ ಮರಿಗಳಿಗೆ ಸೂರ್ಯ, ಚಂದ್ರ, ಕಬಿನಿ ಎಂದು ಅರಣ್ಯ ಸಚಿವ ಈಶ್ವರ​ ಖಂಡ್ರೆ ಅವರು ಇಂದು ನಾಮಕರಣ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಮೃಗಾಲಯ ಅಧಿಕಾರಿಗಳು ಸೇರಿ ಹಲವರು ಉಪಸ್ಥಿತರಿದ್ದರು.

ಮೈಸೂರು: ಮೈಸೂರು ಮೃಗಾಲಯಕ್ಕೆ ಇಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwar Khandre) ಭೇಟಿ ನೀಡಿದ್ದು, ಮೃಗಾಲಯದ ಮೂರು ಸಿಂಹದ ಮರಿಗಳಿಗೆ ಸೂರ್ಯ, ಚಂದ್ರ, ಕಬಿನಿ ಎಂದು ನಾಮಕರಣ ಮಾಡಿದ್ದಾರೆ. ಮೈಸೂರು ಮೃಗಲಯದಲ್ಲಿ ಗಂಡು ಸಿಂಹ ರಾಜು ಮತ್ತು ಹೆಣ್ಣು ಸಿಂಹ ನಿರ್ಭಯಗೆ 3 ಮರಿಗಳು ಜನಿಸಿದ್ದವು. ಒಂದು ವರ್ಷ ವಯಸ್ಸಿನ 3 ಮರಿಗಳಿಗೆ ಸದ್ಯ ಸಚಿವ ಈಶ್ವರ್ ಖಂಡ್ರೆ ನಾಮಕರಣ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಮೃಗಾಲಯ ಅಧಿಕಾರಿಗಳು ಸೇರಿ ಹಲವರು ಭಾಗಿಯಾಗಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us
Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More