ಎರಡು ವಾರಗಳಿಂದ ನಂಜನಗೂಡು ಬಳಿಯ ಏಚಗಳ್ಳಿ ಗ್ರಾಮಸ್ಥರನ್ನು ಕಾಡುತ್ತಿದ್ದ ಚಿರತೆ ಬಿತ್ತು ಬೋನಿಗೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 08, 2022 | 12:06 PM

ವ್ಯಾಘ್ರನನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯವರು ಗ್ರಾಮದ ರೈತ ಸಮುದಾಯದ ದಿನೇಶ್ ಎನ್ನುವವರ ಹೊಲದಲ್ಲಿ ಬೋನ್ ಇಟ್ಟಿದ್ದರು. ಬುಧವಾರ ರಾತ್ರಿ ಚಿರತೆ ಟ್ರ್ಯಾಪ್ ಆಗಿದೆ.

ಮೈಸೂರು: ಬೋನಲ್ಲಿ ಸೆರೆಯಾಗಿರುವ ಚಿರತೆಯನ್ನೊಮ್ಮೆ (leopard) ನೋಡಿ. ಸುಮಾರು ಎರಡು ವಾರಗಳಿಂದ ಇದು ಮೈಸೂರು ನಂಜನಗೂಡು ತಾಲ್ಲೂಕಿನ ಏಚಗಳ್ಳಿ (Echagalli) ಗ್ರಾಮದ ನಿವಾಸಿಗಳನ್ನು ಒಂದೇ ಸಮ ಕಾಡುತಿತ್ತು ಮತ್ತು ಅವರಲ್ಲಿ ಅತಂಕ, ಭೀತಿ ಮೂಡಿಸಿತ್ತು. ವ್ಯಾಘ್ರನನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯವರು ಗ್ರಾಮದ ರೈತ ಸಮುದಾಯದ ದಿನೇಶ್ (Dinesh) ಎನ್ನುವವರ ಹೊಲದಲ್ಲಿ ಬೋನ್ ಇಟ್ಟಿದ್ದರು. ಬುಧವಾರ ರಾತ್ರಿ ಚಿರತೆ ಟ್ರ್ಯಾಪ್ ಆಗಿದೆ. ಅರಣ್ಯ ಇಲಾಖೆಯವರು ನೀಡಿರುವ ಮಾಹಿತಿ ಪ್ರಕಾರ ಸೆರೆಸಿಕ್ಕಿರುವ ಚಿರತೆ ಹೆಣ್ಣಾಗಿದ್ದು ಇತ್ತೀಚಿಗೆ ಮೂರು ಮರಿಗಳನ್ನು ಹಾಕಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ