ಮೈಸೂರು ಹೊರವಲಯದ ಹಳ್ಳಿಗಳ ನಿವಾಸಿಗಳಿಗೆ ಕಂಟಕವಾಗಿದ್ದ ಚಿರತೆ ಸೆರೆ, ಬಂಡಿಪುರ ರಾಷ್ಟ್ರೀಯ ಉದ್ಯಾನವನಕ್ಕೆ ರವಾನೆ
ಅರಣ್ಯ ಇಲಾಖೆ ಸಿಬ್ಬಂದಿ ರಟ್ಟನಹಳ್ಳಿ ಎಂಬಲ್ಲಿ ಬೋನೊಂದನ್ನು ಇಟ್ಟು ಚಿರತೆ ಹಿಡಿಯುವಲ್ಲಿ ಯಶ ಕಂಡಿದ್ದಾರೆ. ಸೆರೆ ಹಿಡಿದ ಚಿರತೆಯನ್ನು ಬಳಿಕ ಬಂಡಿಪುರ ರಾಷ್ಟ್ರೀಯ ಉದ್ಯಾನವನಕ್ಕೆ ರವಾನಿಸಲಾಯಿತು.
ಮೈಸೂರು: ಸುಮಾರು ದಿನಗಳಿಂದ ಮೈಸೂರು ಹೊರವಲಯದಲ್ಲಿರುವ ಹಳ್ಳಿಗಳ ಜನರನ್ನು ಒಂದೇ ಸಮನೆ ಕಾಡುತ್ತಿದ್ದ ಚಿರತೆ (leopard) ಇದೇ ಮಾರಾಯ್ರೇ. ಜನರ ದೂರಿನ ಮೇರೆಗೆ ಹಿಂಸ್ರಪಶುವನ್ನು ಸೆರೆಹಿಡಿಯಲು ಮುಂದಾದ ಅರಣ್ಯ ಇಲಾಖೆ ಸಿಬ್ಬಂದಿ ರಟ್ಟನಹಳ್ಳಿ ಎಂಬಲ್ಲಿ ಬೋನೊಂದನ್ನು ಇಟ್ಟು ಹಿಡಿಯುವಲ್ಲಿ ಯಶ ಕಂಡಿದ್ದಾರೆ. ಸೆರೆ ಹಿಡಿದ ಚಿರತೆಯನ್ನು ಬಳಿಕ ಬಂಡಿಪುರ ರಾಷ್ಟ್ರೀಯ ಉದ್ಯಾನವನಕ್ಕೆ ರವಾನಿಸಲಾಯಿತು.
Latest Videos