ರಾಮನಗರದ ಮಾಗಡಿ ಸುತ್ತಮುತ್ತಲಿನ ಗ್ರಾಮಸ್ಥರನ್ನು ಒಂದೇ ಸಮ ಕಾಡುತ್ತಿದ್ದ ಚಿರತೆ ಬಿತ್ತು ಬೋನಿಗೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 14, 2022 | 12:55 PM

ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಗಳಿಗೆ ಹತ್ತಿರದ ಕಾಡುಪ್ರದೇಶದಲ್ಲಿ ಬೋನೊಂದನ್ನು ಇಟ್ಟು ಚಿರತೆಯನ್ನು ಸೆರೆಹಿಡಿದಿದ್ದಾರೆ.

ರಾಮನಗರ:  ವ್ಯಾಘ್ರ ಕಾಡಲ್ಲಿದ್ದರೂ ಘರ್ಜಿಸುತ್ತದೆ, ಬೋನಿಗೆ ಬಿದ್ದಾಗಲೂ ಘರ್ಜಿಸುತ್ತದೆ (roars). ಈ ಚಿರತೆಯನ್ನೊಮ್ಮೆ (leopard) ನೋಡಿ. ರಾಮನಗರದ ಮಾಗಡಿ ತಾಲ್ಲೂಕಿನ ಹಲವು ಗ್ರಾಮಗಳ ನಿದ್ರೆಗೆಡಿಸಿದ್ದ ಅದು ಕಳೆದ ರಾತ್ರಿ ಬೋನಿಗೆ (cage) ಬಿದ್ದಿದೆ. ಅದರ ಉಪಟಳ ಜಾಸ್ತಿಯಾದ ನಂತರ ಗ್ರಾಮಗಳ ನಿವಾಸಿಗಳು ಅರಣ್ಯ ಇಲಾಖೆ ಸಿಬ್ಬಂದಿಗೆ ದೂರು ಸಲ್ಲಿಸಿದ್ದರು. ಅಧಿಕಾರಿಗಳು ಗ್ರಾಮಗಳಿಗೆ ಹತ್ತಿರದ ಕಾಡುಪ್ರದೇಶದಲ್ಲಿ ಬೋನೊಂದನ್ನು ಇಟ್ಟು ಚಿರತೆಯನ್ನು ಸೆರೆಹಿಡಿದಿದ್ದಾರೆ. ಗ್ರಾಮಸ್ಥರಲ್ಲಿ ಈಗ ನಿರಾಳ ಭಾವ!