ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಹ್ವಾನಿಸದ ವಿವಾದ; ಹೆಚ್ ಡಿ ದೇವೇಗೌಡ ಪ್ರತಿಕ್ರಿಯಿಸಲು ನಕಾರ
ಹಾಸನದಲ್ಲಿ ಸುದ್ದಿಗಾರೊಂದಿಗೆ ಮಾತಾಡಿದ ದೇವೇಗೌಡರು ವಿಷಯದ ಬಗ್ಗೆ ಸಾಕಷ್ಟು ಚರ್ಚೆ, ವಿಶ್ಲೇಷಣೆಗಳು ನಡೆದಿವೆ, ತಮಗೆ ಮಾತಾಡುವುದು ಇಷ್ಟವಿಲ್ಲ ಎಂದು ಹೇಳಿದರು.
ಹಾಸನ: ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ನಾಡಪ್ರಭು ಕೆಂಪೇಗೌಡ (Kempegowda) ಅನಾವರಣಗೊಳಿಸಿದ ಕಾರ್ಯಕ್ರಮಕ್ಕೆ ಬಿಜೆಪಿ ಆಡಳಿತದ ಕರ್ನಾಟಕ ಸರ್ಕಾರ ಮಾಜಿ ಪ್ರಧಾನ ಮಂತ್ರಿ ಎಚ್ ಡಿ ದೇವೇಗೌಡರನ್ನು (HD Devegowda) ಆಹ್ವಾನಿಸದಿರುವುದು ಈಗಾಗಲೇ ದೊಡ್ಡ ವಿವಾದವಾಗಿ ಮಾರ್ಪಟ್ಟಿದೆ. ಈ ಬಗ್ಗೆ ಖುದ್ದು ದೇವೇಗೌಡರೇ ಪ್ರತಿಕ್ರಿಯಿಸಲು ನಿರಾಕಾರಿಸಿದರು. ಹಾಸನದಲ್ಲಿ ಸುದ್ದಿಗಾರೊಂದಿಗೆ ಮಾತಾಡಿದ ಹಿರಿಯ ಜೆಡಿ(ಎಸ್) ನಾಯಕ, ವಿಷಯದ ಬಗ್ಗೆ ಸಾಕಷ್ಟು ಚರ್ಚೆ, ವಿಶ್ಲೇಷಣೆಗಳು ನಡೆದಿವೆ, ತಮಗೆ ಮಾತಾಡುವುದು ಇಷ್ಟವಿಲ್ಲ ಎಂದು ಹೇಳಿದರು.

