Snake Rescue: ಫ್ರಿಡ್ಜ್​ನಲ್ಲಿ ಅಡಗಿದ್ದ ನಾಗರಹಾವನ್ನು ಸೆರೆ ಹಿಡಿದ ಉರಗ ತಜ್ಞ

Snake Rescue: ಫ್ರಿಡ್ಜ್​ನಲ್ಲಿ ಅಡಗಿದ್ದ ನಾಗರಹಾವನ್ನು ಸೆರೆ ಹಿಡಿದ ಉರಗ ತಜ್ಞ

TV9 Web
| Updated By: Rakesh Nayak Manchi

Updated on:Nov 14, 2022 | 10:55 AM

ಮಳೆಗಾಲದಲ್ಲಿ ಹಾವುಗಳು ಮನೆಯೊಳಗೆ, ಜನಬಿಡ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸುತ್ತಿವೆ. ಇದೀಗ ಮನೆಯೊಳಗೆ ಬಂದ ನಾಗರ ಹಾವು ಫ್ರಿಡ್ಜ್ ಒಳಗೆ ನುಗ್ಗಿದ್ದು, ರಕ್ಷಣೆ ಮಾಡಲಾಗಿದೆ.

ತುಮಕೂರು: ಮಳೆಗಾಲದಲ್ಲಿ ಹಾವುಗಳು ಮನೆಯೊಳಗೆ, ಜನಬಿಡ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸುತ್ತಿವೆ. ಇದೀಗ ಮನೆಯೊಂದರ ಒಳಗೆ ಬಂದ ನಾಗರ ಹಾವು ಫ್ರಿಡ್ಜ್ ಒಳಗೆ ನುಗ್ಗಿ ಯಾರಿಗೂ ಅವಿತುಕೊಂಡಿದೆ. ಇದನ್ನು ನೋಡಿದ ಮನೆಮಂದಿ, ಅರ್ರೆ! ಬಿಲದೊಳಗೆ ಹೋಗಬೇಕಾಗಿದ್ದ ನಾಗಣ್ಣ ಮನೆಯೊಳಗೆ ಬಂದು ಫ್ರಿಡ್ಜ್ ಒಳಗೆ ಕುಳಿತುಕೊಂಡಿದೆ ಎಂದು ಅಚ್ಚರಿಗೊಂಡಿದ್ದಾರೆ. ಈ ಬಗ್ಗೆ ಮನೆಯವರು ಉರಗ ತಜ್ಞರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಉರಗ ತಜ್ಞ, ಫ್ರಿಡ್ಜ್ ಒಳಗಿದ್ದ ಹಾವನ್ನು ಹೊರತೆಗೆದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಹಾವು ಸೆರೆ ಹಿಡಿದ ನಂತರ ಮನೆಯವರು ನಿಟ್ಟಿಸಿರು ಬಿಟ್ಟಿದ್ದಾರೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published on: Nov 14, 2022 10:55 AM