ಪದೇಪದೆ ಊರೊಳಗೆ ನುಗ್ಗಿ ಸಾಕು ಪ್ರಾಣಿಗಳನ್ನು ಎತ್ತ್ಯೊಯ್ಯುತ್ತಿದ್ದ ಚಿರತೆ ಕೊನೆಗೂ ಬೋನಲ್ಲಿ ಸೆರೆಯಾಯಿತು!
ಸಿಬ್ಬಂದಿ ಹೇಳುವ ಪ್ರಕಾರ ಇದು ಎರಡು ವರ್ಷ ಪ್ರಾಯದ ಹೆಣ್ಣು ಚಿರತೆಯಾಗಿದೆ. ಸೆರೆ ಸಿಕ್ಕಿರುವುದರಿಂದ ಸಹಜವಾಗೇ ಅದರಲ್ಲಿ ಆತಂಕ ಮನೆ ಮಾಡಿದೆ. ಕಾಡಿನಲ್ಲಿ ಸ್ವೇಚ್ಛೆಯಿಂದ ಓಡಾಡುವ ಪ್ರಾಣಿಗೆ ಮೈ ತಿರುಗಿಸಲೂ ಸಾಧ್ಯವಾಗದ ಬೋನೊಂದರಲ್ಲಿ ಹಿಡಿದಿಟ್ಟರೆ ಅದಕ್ಕೆ ಹೇಗಾಗಬೇಡ.
ಚಿರತೆ ಮತ್ತು ಕಾಡಾನೆಗಳ ಹಾವಳಿ ಮಾನವ ಜನಾಂಗಕ್ಕೆ ತಪ್ಪಿದಲ್ಲ ಮಾರಾಯ್ರೇ. ಅರಣ್ಯ ಪ್ರದೇಶಗಳಿಗೆ ಹತ್ತಿರದ ಊರುಗಳಿಗೆ ಅವು ನುಗ್ಗಿ ಜನರಲ್ಲಿ ಆತಂಕ ಹೆಚ್ಚಿಸುವುದು ಮುಂದುವರಿದಿದೆ. ಸಂಬಂಧಪಟ್ಟ ಊರುಗಳ ಜನ ಅರಣ್ಯ ಇಲಾಖೆಯವರಿಗೆ (forest department) ದೂರು ಸಲ್ಲಿಸುತ್ತಾರೆ ಮತ್ತು ಅಧಿಕಾರಿಗಳು ಚಿರತೆಯಾದರೆ (leopard) ಬೋನಿಟ್ಟು ಅದನ್ನು ಹಿಡಿಯುತ್ತಾರೆ ಮತ್ತು ಕಾಡಾನೆಯಾದರೆ (wild elephant), ಸದ್ದು ಮಾಡುವ ಮೂಲಕ ಅದನ್ನು ಪುನಃ ಕಾಡಿಗೆ ಅಟ್ಟುತ್ತಾರೆ. ನಮಗೆ ನೆಲಮಂಗಲದ ಗೌಡನಪಾಳ್ಯದಿಂದ ಒಂದು ವಿಡಿಯೋ ಸಿಕ್ಕಿದೆ. ಅರಣ್ಯ ಇಲಾಖೆಯ ಸಿಬ್ಬಂದಿಯು ಗ್ರಾಮಸ್ಥರಿಗೆ ಒಂದೇ ಸಮನೆ ಕಾಟ ಕೊಡುತ್ತಿದ್ದ ಒಂದು ಚಿರತೆಯನ್ನು ಬೋನಲ್ಲಿ ಸೆರೆಹಿಡಿದು ಅವರು ನಿಟ್ಟುಸಿರಾಗುವಂತೆ ಮಾಡಿದೆ.
ಸಿಬ್ಬಂದಿ ಹೇಳುವ ಪ್ರಕಾರ ಇದು ಎರಡು ವರ್ಷ ಪ್ರಾಯದ ಹೆಣ್ಣು ಚಿರತೆಯಾಗಿದೆ. ಸೆರೆ ಸಿಕ್ಕಿರುವುದರಿಂದ ಸಹಜವಾಗೇ ಅದರಲ್ಲಿ ಆತಂಕ ಮನೆ ಮಾಡಿದೆ. ಕಾಡಿನಲ್ಲಿ ಸ್ವೇಚ್ಛೆಯಿಂದ ಓಡಾಡುವ ಪ್ರಾಣಿಗೆ ಮೈ ತಿರುಗಿಸಲೂ ಸಾಧ್ಯವಾಗದ ಬೋನೊಂದರಲ್ಲಿ ಹಿಡಿದಿಟ್ಟರೆ ಅದಕ್ಕೆ ಹೇಗಾಗಬೇಡ. ಗ್ರಾಮಸ್ಥರ ಪ್ರಕಾರ ಸದರಿ ಚಿರತೆಯು ಪದೇಪದೆ ಊರೊಳಗೆ ನುಗ್ಗಿ ಅವರ ಸಾಕು ಪ್ರಾಣಿಗಳ ಮೇಲೆ ಆಕ್ರಮಣ ನಡೆಸಿ ಅವುಗಳನ್ನು ಕೊಂದು ತಿನ್ನುತಿತ್ತು.
ಈ ಸಮಸ್ಯೆಗೆ ಒಂದು ಶಾಶ್ವತ ಪರಿಹಾರ ಸರ್ಕಾರಗಳಿಗೆ ಹೊಳೆಯುತ್ತಿಲ್ಲ. ಕಾಡುಗಳಿಗೆ ಬೇಲಿ ಬಿಗಿಯುವುದು ಸಾಧ್ಯವಾಗದ ಮಾತು ಹಾಗೆಯೇ ಊರುಗಳ ಸುತ್ತ ಎತ್ತರೆತ್ತರದ ಗೋಡೆಗಳನ್ನು ಕಟ್ಟಲಾಗದು. ದಿನೇದಿನೆ ನಮ್ಮ ಅರಣ್ಯಗಳ ವಿಸ್ತೀರ್ಣ ಕಮ್ಮಿಯಾಗುತ್ತಾ ಸಾಗುತ್ತಿರುವುರಿಂದ ಕಾಡಿನಲ್ಲಿನ ಪ್ರಾಣಿಗಳು ಊರೊಳಗೆ ಬರುತ್ತಿವೆ.
ಅದು ಸರಿ, ಅವುಗಳನ್ನು ತಡೆಯುವುದು ಹೇಗೆ?
ಇದನ್ನೂ ಓದಿ: ಕಿಕ್ಕಿರಿದು ತುಂಬಿದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊಳಗಿದ ‘ಬೊಂಬೆ ಹೇಳುತೈತೆ’; ರೋಮಾಂಚನಕಾರಿ ವಿಡಿಯೋ ಇಲ್ಲಿದೆ